Advertisement

ವಾರಾಹಿ ಇಲಾಖೆಯ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

07:20 AM Aug 06, 2017 | Harsha Rao |

ಸಿದ್ದಾಪುರ: ಮಚ್ಚಟ್ಟು ಗ್ರಾಮದ ತೊಂಬಟ್ಟು ಹೊಳೆಬಾಗಿಲು ಮುಳುಗಡೆ ಪ್ರದೇಶದಲ್ಲಿ ವಾರಾಹಿ ನೀರಾವರಿ ಇಲಾಖೆ ವತಿಯಿಂದ ವಾರಾಹಿ ನದಿಗೆ ನಿರ್ಮಿಸಲಾದ ಸೇತುವೆಯ ಅಕ್ಕಪಕ್ಕ ಸಂಪರ್ಕ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆದು ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ಸೇತುವೆಯ ಅಕ್ಕಪಕ್ಕ ಸಂಪರ್ಕ ರಸ್ತೆಯು ಕಳೆದ ವರ್ಷದಿಂದ ಸಂಪೂರ್ಣ ಹದಗೆಟ್ಟು ಹೋಗಿದೆ. ಜನ, ಜಾನುವಾರು, ವಿದ್ಯಾರ್ಥಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಬಗ್ಗೆ ಇಲಾಖೆಗೆ ಅನೇಕ ಬಾರಿ ಗಮನಕ್ಕೆ ತಂದರೂ, ಗಮನ ಹರಿಸಲಿಲ್ಲ. ಆದ್ದರಿಂದ ರಸ್ತೆ ತಡೆದು, ಹೊಂಡಗುಂಡಿಯಲ್ಲಿ ಗಿಡ ನೆಡುವ ಮೂಲಕ ಪ್ರತಿಭಟಿಸುತ್ತಿದ್ದೇವೆ. ಇಲಾಖೆ ಇದರಿಂದ ಎಚ್ಚೆತ್ತು ರಸ್ತೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ವಾರಾಹಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಉಗ್ರವಾದ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಅಮಾಸೆಬೈಲು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಭಾಸ್ಕರ್‌ ಶೆಟ್ಟಿ, ಹಾಗೂ ಅಮಾಸೆಬೈಲು ಪೊಲೀಸ್‌ ಠಾಣಾಧಿಕಾರಿ ಸುದರ್ಶನ್‌ ಅವರು ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿ, ಸಂಬಂಧ ಪಟ್ಟವರಿಗೆ ಮುಟ್ಟಿಸುವ ಜವಾಬ್ದಾರಿ ವಹಿಸಿಕೊಂಡರು. ಗ್ರಾಮಸ್ಥರೊಂದಿಗೆ ಹತ್ತಕ್ಕೂ ಹೆಚ್ಚು ಸಂಘಟನೆಗಳು ಮತ್ತು ಗ್ರಾ. ಪಂ. ಸದಸ್ಯರು ಕೈ ಜೋಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next