Advertisement

ಗ್ರಾಮದ ಸಮಸ್ಯೆ ಅರಿತು ಪರಿಹಾರ

03:39 PM Feb 21, 2021 | Team Udayavani |

ಕೆಜಿಎಫ್: ಗ್ರಾಮದ ಸಮಸ್ಯೆಗಳನ್ನು ಖುದ್ದಾಗಿ ಅರಿತು ಪರಿಹಾರ ಮಾಡ ಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿ ಕೊಂಡಿದೆ ಎಂದು ತಹಶೀಲ್ದಾರ್‌ ಕೆ. ಎನ್‌.ಸುಜಾತಾ ಹೇಳಿದರು.

Advertisement

ಪೀಲವಾರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಉದ್ಘಾಟಿಸಿ ಮಾತನಾಡಿ, ಸರ್ಕಾರ ಹಲವಾರು ಯೋಜನೆಗಳನ್ನುವಿವಿಧ ಇಲಾಖೆ ಮೂಲಕ ಜನರಿಗೆನೀಡು ತ್ತಿದೆ. ಕೆಲವು ಯೋಜನೆಗಳು ಜನರಿಗೆ ತಿಳಿದಿರುವುದಿಲ್ಲ. ತಿಳಿವಳಿಕೆ ಕೊರತೆ ಇರುತ್ತದೆ. ಹೀಗಾಗಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸ ಬೇಕೆಂ ಬುದು ನಮ್ಮ ಉದ್ದೇಶ. ಗ್ರಾಮಸ್ಥರು ಕಾರ್ಯಕ್ರಮವನ್ನು ಸದುಪಯೋಗ ಮಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮದಲ್ಲಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸ್ಮಶಾನ ಒತ್ತುವರಿ ತೆರವುಗೊಳಿಸಿ, ತಾಪಂ ವಶಕ್ಕೆ ಒಪ್ಪಿಸಲಾಯಿತು. ಅದೇ ರೀತಿಯ ನಂದ್ಯಾಲು ಗಟ್ಟ ಗ್ರಾಮದಲ್ಲಿ 2ಎಕರೆ ಜಾಗವನ್ನು ಸ್ಮಶಾನಕ್ಕೆ ನೀಡಲಾಯಿತು. ಶ್ರೀನಿವಾಸಸಂದ್ರ ಗ್ರಾಪಂಗೆ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ 5ಎಕರೆ ಜಮೀನು ನೀಡಲಾಯಿತು.

ಗ್ರಾಮದಲ್ಲಿ ಶಿಥಿಲವಾಗಿದ್ದ ಅಂಗನವಾಡಿ ಕೇಂದ್ರವನ್ನು ದುರಸ್ತಿ ಮಾಡಿ, ಶೌಚಾಲಯ ನಿರ್ಮಾಣ ಮಾಡ ಲಾಯಿತು. ಭಾಗ್ಯಲಕ್ಷ್ಮೀ ಬಾಂಡ್‌, ಕಂದಾಯ ಇಲಾಖೆಯ ವಿವಿಧ ಸವಲತ್ತು ವಿತರಣೆ ಮಾಡಲಾಯಿತು. ಆರೋಗ್ಯ ಇಲಾಖೆಯಿಂದ ಉಚಿತಕೋವಿಡ್‌ ಪರೀಕ್ಷೆ ನಡೆಸಲಾಯಿತು. ತಾಪಂ ಇಒ ಮಂಜುನಾಥ್‌, ಸಿಡಿ ಪಿಒ ನಾಗರತ್ನ, ಡಾ.ಸುನಿಲ್‌, ಉಪತಹ ಶೀಲ್ದಾರ್‌ ಶ್ರೀನಿವಾಸ್‌, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವೆಂಕಟೇಶ್ವರಲು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next