ತಿ.ನರಸೀಪುರ: ತಾಲೂಕು ದಂಡಾಧಿಕಾರಿ ಸಿ.ಜಿ.ಗೀತಾ ಅವರು ನಾಯಕ ಜನಾಂಗದ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ನಾಯಕ ಸಮುದಾಯಕ್ಕೆ ಅಪಮಾನ ಮಾಡಿದ್ದು ಅಲ್ಲದೆ ಜನ ಪ್ರತಿನಿಧಿ ಆದ ನನ್ನನ್ನು ಅಗೌರವದಿಂದ ನಡೆಸಿಕೊಂಡು ಅವಮಾನ ಮಾಡಿದ್ದಾರೆ ಎಂದು ಬಿ.ಶೆಟ್ಟಹಳ್ಳಿ ಗ್ರಾಪಂ ಸದಸ್ಯ ಶ್ರೀನಿವಾಸ್ ಮೂರ್ತಿ ತಹಶೀಲ್ದಾರ್ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ದಂಡಾಧಿಕಾರಿ ಗೀತಾರವರು ಚುನಾಯಿತ ಪ್ರತಿನಿಧಿಗಳು ಹಾಗೂ ಜನ ಸಾಮಾನ್ಯರ ಜೊತೆ ಸೌಜನ್ಯ ದಿಂದ ವರ್ತಿಸುವ ಸಾಮಾನ್ಯ ಜ್ಞಾನ ಕಲಿತಿಲ್ಲ. ನಾನೊಬ್ಬ ತಹಶೀಲ್ದಾರ್ ಅನ್ನುವ ಗತ್ತಿನಲ್ಲಿ ಆಡಳಿತ ನೆಡಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಶಾಸಕರ ಕೊಠಡಿಯಲ್ಲಿ ನಡೆದ ಕುಂದು ಕೊರತೆ ಸಭೆ ಸಭೆಯಲ್ಲಿ ನಾಯಕ ಜನಾಂಗದ ಪ್ರಮಾಣ ಪತ್ರ ನೀಡುವಲ್ಲಿ ತಾವು ಸರ್ಕಾರದ ಆದೇಶದ ಅನುಸಾರ ನೀಡದೆ ಹೊಸ ನಿಯಮಗಳನ್ನು ಜಾರಿ ತರುವ ಮೂಲಕ ನಮ್ಮ ಜನಾಂಗದ ವರಿಗೆ ತೊಂದರೆ ಕೂಡುತ್ತಿರುವುದು ಸರಿಯಲ್ಲ. ಹಿಂದಿನ ತಹಶೀಲ್ದಾರ್ ನಾಯಕ ಜನಾಂಗದ ಜಾತಿ ಪ್ರಮಾಣ ನೀಡುತಿದ್ದಂತ್ತೆ ತಾವು ನೀಡಬೇಕು ಎಂದು ಮನವಿ ಮಾಡಿದ್ದೆ ಅಷ್ಟಕ್ಕೆ ನನ್ನನ್ನು ಏಕ ವಚನದಲ್ಲಿ ನಿಂದಿಸಿದರಲ್ಲದೆ ನಾಯಕ ಜನಾಂಗದ ಬಗ್ಗೆ ನನಗೂ ಗೊತ್ತಿದೆ ಎಂದು ಏರು ಧ್ವನಿಯಲ್ಲಿ ಹೇಳುತ್ತ ನನ್ನ ಜಾತಿಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಕುಂದುಕೊರತೆ ಸಭೆಯಲ್ಲಿ ಶಾಸಕರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಸಾಮಾನ್ಯರ ನಡುವೆ ನನ್ನ ಮತ್ತು ನನ್ನ ನಾಯಕ ಜನಾಂಗದ ಬಗ್ಗೆ ಹಗುರವಾಗಿ ಮಾತನಾಡಿದ ತಹಶೀಲ್ದಾರ್ ಗೀತಾ ಅವರು ತಮ್ಮ ತಪ್ಪನ್ನ ತಿದ್ದಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಚಿದರವಳ್ಳಿ ಮಹೇಶ್, ಮುನಿಸ್ವಾಮಿ, ನಿರಂಜನ್, ಶ್ರೀನಿವಾಸ್ ಮೂರ್ತಿ, ಮಹದೇವಸ್ವಾಮಿ, ನಾಗರಾಜು, ರಾಮ ನಂಜಯ್ಯ,ನಾಗಲಗೇರೆ ಶಾಂತರಾಜು, ಕುಮಾರ, ಗಂಗಾಧರ, ನಾಗರಾಜು, ಶಾಂತರಾಜು, ಸರಸ್ವತಿ, ಚಂದ್ರಮ್ಮ, ನಂಜಮ್ಮ, ರತ್ನಮ್ಮ, ಕುಮಾರ, ಮರಯ್ಯ ಇತರರು ಇದ್ದರು.