Advertisement

ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ನಂತರ ಸಿಕ್ಕಿತು ವಿದ್ಯುತ್‌ ಭಾಗ್ಯ

08:20 PM Oct 24, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯ ತುಲೈ ಕಾ ನಾಗ್ಲಾ ಗ್ರಾಮಕ್ಕೆ ಈ ವರ್ಷದ ದೀಪಾವಳಿ ನಿಜಕ್ಕೂ ಸಂತಸ ತಂದಿದೆ. ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಕಳೆದರೂ ವಿದ್ಯುತ್‌ ಸಂಪರ್ಕ ಕಂಡಿರದ ಗ್ರಾಮಕ್ಕೆ ಇದೀಗ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡಲಾಗಿದೆ.

Advertisement

ಇತ್ತೀಚೆಗೆ ಈ ಗ್ರಾಮದ ಬಗ್ಗೆ ಮಾಧ್ಯಮಗಳು “ಕತ್ತಲಿನ ಗ್ರಾಮ’ ಎಂದು ವರದಿ ಮಾಡಿದ್ದವು. ಅದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಾಜಿ ವಿದ್ಯುತ್‌ ಸಚಿವ ಶ್ರೀಕಾಂತ್‌ ಶರ್ಮಾ ಅವರು ಕೂಡಲೇ ಗ್ರಾಮಕ್ಕೆ ವಿದ್ಯುತ್ಛಕ್ತಿ ಕಲ್ಪಿಸುವಂತೆ ಸೂಚಿಸಿದ್ದರು. ಅಲ್ಲಿನ ಅಲಿಗಂಜ್‌ ಕ್ಷೇತ್ರದ ಶಾಸಕರು ಈ ಯೋಜನೆಗೆಂದೇ 10 ಲಕ್ಷ ರೂ. ಕೊಟ್ಟಿದ್ದಾರೆ ಎಂದೂ ವರದಿಯಾಗಿದೆ.

“ವಿದ್ಯುತ್‌ ಬೇಕೆಂದು ಹಲವಾರು ಅಧಿಕಾರಿಗಳ ಬಳಿ ಬೇಡಿಕೆ ಇಟ್ಟಿದ್ದೇವೆ. ಸರ್ಕಾರಗಳು ಬದಲಾದವೇ ಹೊರತು ನಮಗೆ ಬೆಳಕು ಬಂದಿರಲಿಲ್ಲ. ಈಗ ನಮ್ಮೂರಿಗೆ ವಿದ್ಯುತ್‌ ಸಂಪರ್ಕ ಸಿಕ್ಕಿರುವುದರ ಬಗ್ಗೆ ಸಂತೋಷವಿದೆ’ ಎನ್ನುತ್ತಾರೆ ಗ್ರಾಮಸ್ಥರು.

 

Advertisement

Udayavani is now on Telegram. Click here to join our channel and stay updated with the latest news.

Next