Advertisement
ನಮ್ಮ ಆಡಳಿತದ ದುರಂತವೆಂದರೆ ಅನುಷ್ಠಾನದಲ್ಲಿ ದಕ್ಷತೆಯ ಕೊರತೆ. ದೋಷಪೂರಿತ ಯೋಜನೆ ಹಾಗೂ ತತ್ಪರಿಣಾಮದ ವೈಫಲ್ಯಗಳ ಸಂದರ್ಭ ಅತ್ಯಲ್ಪ. ಅದಕ್ಷತೆಯಿಂದಾಗುವ ವೈಫಲ್ಯದ ಪರಿಹಾರಕ್ಕೆ ಸರಕಾರ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಪರಿಹಾರ ಕಂಡುಕೊಳ್ಳುವ ವಿದ್ಯಮಾನ ಸೃಷ್ಟಿಸಿ, ನಾಳೆ ಒಳ್ಳೆಯದಾದೀತು ಎಂಬ ಭ್ರಮೆ ಯಾ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡುವುದು. ಹಾಲಿ ಯೋಜನೆಗಳ ಅನುಷ್ಠಾನದಲ್ಲಿ ದಕ್ಷತೆ ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ, ನಿರಕ್ಷರ ಕುಕ್ಷಿಯೂ, ನಾಳೆಯ ಒಳಿತನ್ನು ಹಾರೈ ಸುವುದು ಸ್ವಾಭಾವಿಕ. ಆಡಳಿತಗಾರರು ಆಗಾಗ ನೀಡುವ ಘೋಷಣೆಯ ಮೂಲಕ ಈ ಸ್ಥಿತಿ ಸದಾ ಜೀವಂತವಾಗಿರುತ್ತದೆ. ಇದರಿಂದ ಇಂದಿನ ದಿನ ನಯವಾಗಿ ಮುಗಿಯುತ್ತದೆ.ಈಗ ನಮ್ಮ ನ್ಯಾಯಾಂಗದ ಕಡೆ ಕಣ್ಣು ಹಾಯಿಸಿ ಸದ್ಯದ ವ್ಯವಸ್ಥೆಯನ್ನು ಅವಲೋಕಿಸುವ. ನಮ್ಮ ರಾಜ್ಯದ ಪ್ರತೀ ತಾಲೂಕಿನಲ್ಲಿ ಯೂ ಜುಡಿಶಿಯಲ್ ಕೋರ್ಟ್‌ಗಳಿದ್ದು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ತನಿಖೆ ನಡೆಸಿ ನ್ಯಾಯ ಪ್ರದಾನ ಮಾಡಲಾಗುತ್ತಿದೆ.
ನ್ಯಾಯಾಲಯದ ವಿಳಂಬ ನಿರ್ವ ಹಣೆಯೇ ಆತನ ಆರ್ಥಿಕ ಹಾಗೂ ನೆಮ್ಮದಿಯ ಜೀವನಕ್ಕೆ ಆತಂಕವಾದೀತು. ನ್ಯಾಯಾಲಯದಲ್ಲಿ ಪ್ರಕರಣ ಮುಂದೂಡಿದ ದಿನವೂ ಆತನ ದಿನ ನಷ್ಟವಾಗುವುದನ್ನು ತಪ್ಪಿಸಲಾದೀತೇ? ಪರಿಣಾಮ ಆರ್ಥಿಕ ಸಂಕಷ್ಟವಲ್ಲದೆ ಇತ್ತ ದುಡಿತದ ದಿನ ಕಡಿಮೆಯಾಗುವುದೆಂದರೆ ರಾಷ್ಟ್ರೀಯ ನಷ್ಟ (national loss)ವೂ ಆಗುತ್ತದೆ. ನ್ಯಾಯಾಲಯಗಳಲ್ಲಿ ಪ್ರಕರಣಗಳು ತ್ವರಿತಗತಿಯಲ್ಲಿ ಇತ್ಯರ್ಥವಾಗದಿರಲು ಮೂಲ ಸೌಕರ್ಯದ ಕೊರತೆ ಎಂದರೆ ಅವಸರದ ಹೇಳಿಕೆಯಾಗಲಾರದು. ರಾಜ್ಯ ದ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯವಿದೆ ಮತ್ತು ಧಾರ ವಾಡ ಹಾಗೂ ಕಲಬುರಗಿಯಲ್ಲಿ ಹೆಚ್ಚು ವರಿ ಪೀಠಗಳಿವೆ. ಒಟ್ಟು ಅನುಮೋದಿತ ನ್ಯಾಯಾಧೀಶರ ಹುದ್ದೆಗಳು 62. ಆದರೆ ಕೇವಲ 45 ಭರ್ತಿ ಸ್ಥಿತಿಯಲ್ಲಿವೆ. ಈ ನ್ಯಾಯಾಲಯಗಳಲ್ಲಿ ಒಟ್ಟು 2.71ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಮುಂದುವರಿದು ಕರ್ನಾಟಕದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧೀನ ನ್ಯಾಯಾಲಯಗಳಲ್ಲಿ 16.8 ಲಕ್ಷ ಪ್ರಕರಣ ಗಳು ಬಾಕಿ ಇವೆ ಎಂದು ಲಭ್ಯ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
Related Articles
Advertisement
ಸರಕಾರ ಈಗ ನ್ಯಾಯಾಲಯಗಳ ಸುಧಾರಣೆಗೆ ಹೆಚ್ಚು ಆದ್ಯತೆ ನೀಡಬೇ ಕಾಗಿದೆ. ಹಾಲಿ ನ್ಯಾಯಾಲಯಗಳಿಗೆ ಮೂಲ ಸೌಕರ್ಯವನ್ನು ಹೆಚ್ಚಿಸಿ, ಅವುಗಳ ದಕ್ಷತೆ ಹೆಚ್ಚಿಸುವಂತೆ ಮಾಡಬೇಕಾಗಿದೆ. ನ್ಯಾಯಾ ಧೀಶರ ಹಾಗೂ ಪೂರಕ ಸಿಬಂದಿಯ ಹುದ್ದೆ ಖಾಲಿ ಇರದಂತೆ ಕ್ರಮ ತೆಗೆದು ಕೊಳ್ಳುವುದು ಬಹು ಮುಖ್ಯ ವಾದ ಕ್ರಮ. ಹಾಗೆ ಪ್ರಮಾಣ ಬದ್ಧವಾಗಿ ಕಟ್ಟಡ, ಪೀಠೊಪಕರಣಗಳ ಪೂರೈಕೆ ನ್ಯಾಯ ಸ್ಥಾನಗಳು ಹೆಚ್ಚು ಸತ್ವಯುತವಾಗಿ ಕೆಲಸ ಮಾಡಲು ಸಹಕಾರಿ. ಇದರೊಂದಿಗೆ ಪ್ರಕರಣ ಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ತೊಡಕಾಗಿರುವ ಕಾನೂ ನಿನ ತಿದ್ದುಪಡಿ ಹಾಗೂ ಹೊಸ ಕಾನೂನನ್ನು ರೂಪಿಸುವ ಉಪಕ್ರಮ ಗಳು ನ್ಯಾಯಾಲಯಗಳ ದಕ್ಷತೆ ಹೆಚ್ಚಿಸಲು ಸಹಕಾರಿ.
ಈಗ ಉದ್ದೇಶಿಸಿದಂತೆ 2-3 ಗ್ರಾಮಗಳಿಗೊಂದು ಗ್ರಾಮ ನ್ಯಾಯಾಲ ಯಗಳು ಸ್ಥಾಪನೆಯಾದರೆ, ಭೂಮಸೂದೆ ಕಾಯಿದೆಯ ಅನುಷ್ಠಾನಕ್ಕೆ ರಚಿಸಿದ ಲ್ಯಾಂಡ್ ಟ್ರಿಬ್ಯುನಲ್‌ಗಳ ಪ್ರತಿ ಸ್ವರೂಪದ ಸಂಸ್ಥೆಗಳಂತಾದವು. ಅವುಗಳ ಪೀಠಾಧಿ ಕಾರಿಗಳ ಹಾಗೂ ಸಹಾಯಕರ ನೇಮ ಕಾತಿಗೆ ಸ್ಥಳೀಯ ಅಭ್ಯರ್ಥಿಗಳೇ ಮುಂದಾ ಗುವುದು ಸಹಜ. ಅಂಥ ನೇಮಕಾತಿಯನ್ನು ಆಯಾ ಕಾಲಕ್ಕೆ ಆಡಳಿತ ನಡೆಸುವ ರಾಜಕೀಯ ಪಕ್ಷದ ಮರ್ಜಿಗನುಸಾರ ಆದೀತೆಂಬುದರಲ್ಲಿ ಅನುಮಾನವಿಲ್ಲ. ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹಾಲಿ ಇರುವ ರಾಜಕೀಯ, ಗ್ರಾಮೀಣ ಪ್ರದೇಶಕ್ಕೆ ಸುಲಭದಲ್ಲಿ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಗ್ರಾಮ ನ್ಯಾಯಾ ಲಯಗಳು ನಿಜ ನ್ಯಾಯಸ್ಥಾನದ ನಿಷ್ಪಕ್ಷ ನಿಲುವು, ಘನತೆ, ಗೌರವ, ಕ್ಷಮತೆಯನ್ನು ಕಾಪಾಡಬಲ್ಲವೇ? ಸಾರ್ವಜನಿಕರಿಗೆ ಅನುಕೂಲಕ್ಕಿಂತ ತೊಂದರೆಯೇ ಅಧಿಕವಾಗುವ ಸಂಭವವೇ ಹೆಚ್ಚು.
ಅಲ್ಲದೆ, ನ್ಯಾಯ ಎಂದರೇನು? ಅದು ಅತ್ಯುನ್ನತ ನ್ಯಾಯಸ್ಥಾನದ ವ್ಯಾಖ್ಯಾನ. ಹಾಗಾಗಿ ಅಪೀಲಿಗೆ ಅವಕಾಶ ಒದಗಿ ಸಿಯೇ ಈ ಸಂಬಂಧಿತ ಕಾಯಿದೆ ರೂಪಿಸ ಬೇಕಾಗುತ್ತದೆ. ಇದರಿಂದ ನಗರದಲ್ಲಿರುವ ಮೇಲಿನ ನ್ಯಾಯಸ್ಥಾನಗಳಲ್ಲಿ ಪ್ರಕರಣಗಳ ರಾಶಿ ಬಿದ್ದು ಪರಿಸ್ಥಿತಿ ಇನ್ನೂ ಬಿಗಡಾ ಯಿಸಿತೇ ಹೊರತು ಸಾರ್ವಜನಿಕರಿಗೆ ಸುಲಭ ಹಾಗೂ ತ್ವರಿತ ನ್ಯಾಯ ದೊರೆ ಯುವುದು ಅಸಂಭವ. ಯೋಜನೆ ಫಲಪ್ರದವಾಗುವ ಸಾಧ್ಯತೆ ತೀರಾ ಕಡಿಮೆ. ನಮ್ಮ ಚುನಾಯಿತ ಪ್ರತಿನಿಧಿಗಳು ಕೇವಲ ರಾಜಕೀಯವನ್ನು ಬಿಟ್ಟು ವಾಸ್ತವದ ಬಗ್ಗೆ ಚಿಂತನೆ ನಡೆಸುವುದು ವಿಹಿತ.
ಬೇಳೂರು ರಾಘವ ಶೆಟ್ಟಿ,