ಮಧುಗಿರಿ: ಕಾರ್ಯದ ಒತ್ತಡದಲ್ಲಿ ತಹಶೀಲ್ದಾರ್ ನಿಂದಿಸಿದ್ದಾರೆಂದು ಆರೋಪಿಸಿ ಉಪವಿಭಾಗದ ನೂರಾರು ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಿದರು.
ತಹಶೀಲ್ದಾರ್ ನಂದೀಶ್ ಹಾಗೂ ಪತ್ನಿ ತನ್ನನ್ನು ನಿಂದಿಸಿದ್ದಾರೆಂದು ಆರೋ ಪಿಸಿರುವ ಮಿಡಿಗೇಶಿ ಗ್ರಾಮ ಲೆಕ್ಕಿಗರಾದ ಮಂಜುಳಾ ಆರೋಪಿಸಿದ್ದಾರೆ. ಈ ಬಗ್ಗೆ ಡೀಸಿ, ಗ್ರಾಮ ಸಹಾಯಕರ ಜಿಲ್ಲಾ ಸಂಘಕ್ಕೆ ದೂರು ನೀಡಿದ್ದಾರೆ.ಈ ವಿಚಾರ ವಾಗಿ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿ ಕಾರಿಗಳ ನೇತೃತ್ವದಲ್ಲಿ ನೂರಾರು ನೌಕರರು ಪ್ರತಿಭ ಟನೆ ನಡೆಸಿ ತಹಶೀಲ್ದಾರ್ ಕ್ಷಮೆಗೆ ಒತ್ತಾಯಿಸಿದರು.
ಹೋರಾಟ ಮಾಡುತ್ತೇವೆ: ಜಿಲ್ಲಾಧ್ಯಕ್ಷ ಮುರಳೀಧರ್, ಕೆಳ ಹಂತದ ಸಿಬ್ಬಂದಿ ಯನ್ನು ಕೀಳಾಗಿ ಕಾಣಬಾರದು. ಇದು ಅವರ ಘನತೆಗೆ ಸರಿಯಾಗಲ್ಲ. ತಮ್ಮ ನಡವಳಿಕೆ ಹೀಗೆ ಮುಂದುವರೆ ದರೆ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.
ಕ್ಷಮೆ ಕೋರಲಿ: ಕಾರ್ಯದರ್ಶಿ ಮಂಜುನಾಥ್, ಕೆಲಸ ಮಾಡಿಸಲುಒತ್ತಡ ಹಾಕುವ ಅವಶ್ಯಕತೆ ಯಿಲ್ಲ. ಪ್ರೀತಿ ವಿಶ್ವಾಸದಿಂದ ಸಿಬ್ಬಂದಿ ಗಳನ್ನು ಪರಿಗಣಿಸಿ ಕೆಲಸ ಮಾಡಿಸಬೇಕು. ನಿಂದನೆ ಸರಿ ಯಲ್ಲ. ಈ ಬಗ್ಗೆ ತಹಶೀಲ್ದಾರ್ ಕೂಡಲೇ ಕ್ಷಮೆ ಕೋರಬೇಕು ಎಂದರು.
ಈ ವೇಳೆ ಮಹಿಳಾ ಸಿಬ್ಬಂದಿಗೆ ಗೌರವ ಕೊಡಬೇಕು ಎಂದು ಒತ್ತಾಯಿ ಸಿದ ಕೆಲ ಪದಾಧಿಕಾರಿಗಳೇ ತಹಶೀಲ್ದಾರ್ ಹಾಗೂ ಪತ್ನಿಯನ್ನು ಏಕವಚನದಲ್ಲಿ ನಿಂದಿಸಿದ್ದು, ಕೆಲವರಲ್ಲಿ ಅಸಮಾಧಾನ ಮೂಡಿಸಿತು. ಧರಣಿಯಲ್ಲಿ ಕೆಲ ಕಾಂಗ್ರೆಸ್ ಮುಖಂ ಡರು ಭಾಗವಹಿ ಸಿದ್ದು, ರಾಜಕೀಯದ ಸ್ಪರ್ಶವಿದ್ದದ್ದು ಕಂಡುಬಂದಿತು.
ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿ ಕಾರಿ ಚಂದ್ರಶೇಖರಯ್ಯ ಮನವಿ ಸ್ವೀಕರಿಸಿದರು. ಮಹಿಳಾಧ್ಯಕ್ಷೆ ಹೇಮಾ ಮಾತನಾಡಿದರು. ಉಪವಿಭಾಗದ ಗ್ರಾಮ ಲೆಕ್ಕಿಗರು, ನೌಕರರು ಇದ್ದರು.