ಚಿಕ್ಕನಾಯಕನಹಳ್ಳಿ: ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಕೈ ಬಹುತೇಕವಾಗಿ ಮೇಲುಗೈ ಯಾಗಿರುತ್ತದೆ. ಪ್ರತಿ ಕೆಲಸಕ್ಕೂ ಮಧ್ಯವರ್ತಿಗಳು ಅವಶ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೆಲ ಅಧಿಕಾರಿಗಳು ಇದಕ್ಕೆ ಸಹಕಾರ ಕೊಡುತ್ತಿದ್ದಾರೆ.
ಆದರೆ, ಇಲ್ಲಿ ಒಬ್ಬ ಗ್ರಾಮಲೆಕ್ಕಾಧಿಕಾರಿ ತಮ್ಮಕಚೇರಿ ಮುಂಭಾಗ “ಮಧ್ಯವರ್ತಿಗಳಿಗೆ ಪ್ರವೇಶವಿಲ್ಲ’ ಎಂದು ನಾಮಫಲಕ ಹಾಕುವ ಮೂಲಕ ಮಧ್ಯವರ್ತಿಗಳಿಗೆ ಶಾಕ್ ನೀಡಿದ್ದಾರೆ.
ಗ್ರಾಮಲೆಕ್ಕಾಧಿಕಾರಿ, ಕಂದಾಯ, ಸರ್ವೆ ಅಧಿಕಾರಿಗಳ ಬಳಿ ಹೋಗಲು, ಫಹಣಿ, ಆಧಾರ್‌ತಿದ್ದುಪಡಿ, ಮರಣ ಪ್ರಮಾಣ ಪತ್ರ, ರೇಷನ್‌ಕಾರ್ಡ್ ಮಾಡಿಸಲು ಬಹುತೇಕರು ಮಧ್ಯವರ್ತಿ ಗಳ ಸಹಕಾರ ಪಡೆಯುತ್ತಾರೆ. ವೇಗವಾಗಿ ಕೆಲಸ ವಾಗಲು ಹಾಗೂ ದಾಖಲಾತಿಗಳಲ್ಲಿ ಹೆಚ್ಚುಕಡಿಮೆ ಯಾಗಿದ್ದರೂ ಕೆಲಸವಾಗುತ್ತದೆ ಎಂಬ ಕಾರಣದಿಂದ ಬಹುತೇಕ ಜನರು, ತಮ್ಮ ಕೈಯಲ್ಲಿದ್ದ ಹಣ ಕಳೆದುಕೊಂಡು ಮಧ್ಯವರ್ತಿಗಳನ್ನು ಆಶ್ರಹಿಸುತ್ತಾರೆ. ಇದಕ್ಕೆ ಕಡಿವಾಣ ಹಾಕುವ ಕಸಬಾ ಹೋಬಳಿ ಮಾಳಿಗೇಹಳ್ಳಿ ವೃತ್ತದ ಗ್ರಾಮಲೆಕ್ಕಾಧಿಕಾರಿ ಮರುಳಸಿದ್ದಗೌಡ ಅವರು ಮುಂದಾಗಿದ್ದಾರೆ.
ಮಧ್ಯವರ್ತಿಗಳು ಕಚೇರಿಗೆ ಬರುವ ಅವಶ್ಯವಿಲ್ಲ, ರೈತರು ನೇರವಾಗಿ ತಮ್ಮ ಕೆಲಸಕ್ಕೆ ಬನ್ನಿ ಎಂಬ ರೀತಿಯಲ್ಲಿ ನಾಮಫಲಕ ಹಾಕಿರುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ.
ರೈತರಿಂದ ಹಣ ವಸೂಲಿ ಮಾಡಬೇಡಿ: ಬೆಳೆ ಪರಿಹಾರ, ಸಂಧ್ಯಾಸುರಕ್ಷ ಯೋಜನೆ ಖಾತೆಬದಲಾವಣೆ, ವಿಧವ ವೇತನ ಸೇರಿದಂತೆ ಇನ್ನಿತರಕೆಲಸಗಳಿಗೆ ಮಧ್ಯವರ್ತಿಗಳು ಹಣ ಪಡೆದುಕೊಳ್ಳುತ್ತಾರೆ ಎಂಬ ದೂರು ರೈತರು ಹಾಗೂ ಸಾರ್ವಜನಿಕರಿಂದ ಕೇಳಿ ಬಂದಿದೆ. ಯಾರದೋವಂಶವೃಕ್ಷ ತಂದು ಖಾತೆ ಬದಲಾವಣೆಗೆ ಒತ್ತಡ ಹಾಕುತ್ತಿದ್ದರು. ಇದರಿಂದ ಕಿರಿಕಿರಿ ಉಂಟಾಗುತಿತ್ತು. ಹೀಗಾಗಿ ರೈತರು ಹಾಗೂ ಸಾರ್ವಜನಿಕರ ಕೆಲಸಗಳಿಗೆ ಅವರು ಅಥವಾ ಅವರ ಸಂಬಂಧಿಗಳು ಬಿಟ್ಟು ಬೇರೆಯವರು ಬಂದರೆ ನಾನು ಅವಕಾಶ ನೀಡುವುದಿಲ್ಲ. ಫಲಾನುಭವಿಗಳೇಮುಕ್ತವಾಗಿ ಕಚೇರಿಗೆ ಬಂದು ತಮ್ಮ ಕೆಲಸಗಳನ್ನುಸರ್ಕಾರದ ಮಾರ್ಗಸೂಚನೆಯಂತೆ ಮಾಡಿಸಿಕೊಳ್ಳಲು ಅವಕಾಶ ನೀಡಿದ್ದೇನೆ. ರೈತರಿಂದಹಣ ವಸೂಲಿಗೆ ಕಡಿವಾಣ ಹಾಕಲಾಗಿದೆ ಎಂದುಗ್ರಾಮ ಲೆಕ್ಕಾಧಿಕಾರಿ ಮರುಳಸಿದ್ದನಗೌಡತಿಳಿಸಿದ್ದಾರೆ.
ರಾಜಕೀಯ ಮುಖಂಡರ ಮೇಲೆ ಒತ್ತಡ ತರಬೇಡಿ: ಗ್ರಾಮಲೆಕ್ಕಾಧಿಕಾರಿ ರೈತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಧ್ಯವರ್ತಿ ಗಳನ್ನು ತಡೆಗಟ್ಟಿರುವುದರ ಬಗ್ಗೆ ಜಿದ್ದುಇಟ್ಟುಕೊಂಡು ಗ್ರಾಮಲೆಕ್ಕಾಧಿಕಾರಿ ಮೇಲೆ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಚಿವರು ಅಥವಾ ರಾಜಕೀಯ ಮುಖಂಡರ ಮೂಲಕ ವರ್ಗಾವಣೆ ಮಾಡಿಸುವ ಸಣ್ಣ ಬುದ್ಧಿಯನ್ನು ಪ್ರದರ್ಶಿಸಬಾರದು ಎಂದುಸಾರ್ವಜನಿಕರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಗ್ರಾಮಲೆಕ್ಕಾಧಿಕಾರಿಗಳು ತಮ್ಮ ವ್ಯವಸ್ಥೆಯಲ್ಲಿನ ಕೆಲಸಗಳನ್ನು ನೇರವಾಗಿಫಲಾನುಭವಿಗಳಿಗೆ ಯಾವುದೇ ಮಧ್ಯವರ್ತಿಗಳಸಹಾಯವಿಲ್ಲದೆ, ಮಾಡಿಕೊಡುವ ಸಾಹಸಮಾಡಿರುವುದು ಉತ್ತಮವಾಗಿದ್ದು, ಪ್ರಾಮಾಣಿಕಅಧಿಕಾರಿಗಳನ್ನು ಉಳಿಸಿ ಬಳಸಿಕೊಳ್ಳುವುದು ಎಲ್ಲಾರ ಜವಾಬ್ದಾರಿಯಾಗಿದೆ.
– ಚೇತನ್