Advertisement

ಇದು ಭಾರತೀಯ ಸಿನಿಮಾದ ಗೇಮ್ ಚೇಂಜರ್: ‘ವಿಕ್ರಾಂತ್ ರೋಣ’ನಿಗೆ ಜೈ ಎಂದ ಪ್ರೇಕ್ಷಕರು

03:50 PM Jul 28, 2022 | Team Udayavani |

ಕಿಚ್ಚ ಸುದೀಪ್ ಅಭಿನಯದ, ಅನುಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರ ಇಂದು ಬಿಡುಗಡೆಯಾಗಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಲಂ ಮತ್ತು ಹಿಂದಿ ಹೀಗೆ ವಿವಿಧ ಭಾಷೆಗಳಲ್ಲಿ ತೆರೆಕಂಡ ಚಿತ್ರದ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ.

Advertisement

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. 3ಡಿಯಲ್ಲಿ ಮೂಡಿ ಬಂದಿರುವ ಚಿತ್ರವನ್ನು ಜ್ಯಾಕ್ ಮಂಜು ನಿರ್ಮಿಸಿದ್ದಾರೆ. ಇಂದು ಚಿತ್ರವನ್ನು ನೋಡಿದ ಹಲವರು ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಕ್ರಾಂತ್ ರೋಣ ಚಿತ್ರ ನೋಡಿದೆ. ಮೊದಲಾರ್ಧ ಅದ್ಭುತ. ಎರಡನೇ ಭಾಗ ಆಶ್ಚರ್ಯಕರ. ಕ್ಲೈಮಾಕ್ಸ್ ಟ್ವಿಸ್ಟ್ ಗೆ ಫ್ಯೂಸ್ ಎಗರಿ ಹೋಯಿತು. ಹಾಡುಗಳು ಮತ್ತು ದೃಶ್ಯಗಳು ಅತ್ಯುತ್ತಮ ಎಂದು ನೇಮ್ ಈಸ್ ಗಬ್ಬರ್ ಸಿಂಗ್ ಎಂಬ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ:ಮಂಕಿಪಾಕ್ಸ್ ; ಸೆಕ್ಸ್ ಜತೆಗಾರರ ಸಂಖ್ಯೆ ಕಡಿಮೆ ಮಾಡಿ: ವಿಶ್ವ ಆರೋಗ್ಯ ಸಂಸ್ಥೆ ಸಲಹೆ

ವಿಕ್ರಾಂತ್ ರೋಣ ಭಾರತದ ಅತ್ಯುತ್ತಮ 3ಡಿ ಚಲನಚಿತ್ರಗಳಲ್ಲಿ ಒಂದಾಗಿದೆ, ಸಸ್ಪೆನ್ಸ್‌ ನೊಂದಿಗೆ ಬೆಸ್ಟ್ ಥ್ರಿಲ್, ಸಂಪೂರ್ಣವಾಗಿ ಪೈಸಾ ವಸೂಲ್‌. ಇದು ಒಂದು ಅದ್ಭುತ ಅನುಭವ, ಕನ್ನಡ ಇಂಡಸ್ಟ್ರಿ ಮತ್ತೊಂದು ಹಂತಕ್ಕೇರಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.