Advertisement

Bollywood: ವಿಕ್ರಾಂತ್ ಮಾಸ್ಸೆ‌ ’12th Fail’ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

03:50 PM Dec 24, 2023 | Team Udayavani |

ಮುಂಬಯಿ: ಈ ವರ್ಷ ಬಾಲಿವುಡ್‌ ನಲ್ಲಿ ಸಣ್ಣ ಬಜೆಟ್‌ ನಲ್ಲಿ ದೊಡ್ಡ ಹಿಟ್‌ ಆದ ವಿಕ್ರಾಂತ್ ಮಾಸ್ಸೆ ಅಭಿನಯದ ‘12th Fail’ ಥಿಯೇಟರ್‌ ನಲ್ಲಿ ಸಕ್ಸಸ್ ಫುಲ್‌ ಆಗಿ‌ ಓಡಿದ ಬಳಿಕ ಇದೀಗ ಓಟಿಟಿಯಲ್ಲಿ ತೆರೆ ಕಾಣಲು ಸಿದ್ದವಾಗಿದೆ.

Advertisement

ವಿದು ವಿನೋದ್ ಚೋಪ್ರಾ ನಿರ್ದೇಶನದ ‘12th Fail’ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಶಿ ಅವರ ಜೀವನಚರಿತ್ರೆಯ ಕಥೆಯನ್ನೊಳಗೊಂಡಿದೆ. ನಿಜ ಜೀವನದ ಕಥೆಯನ್ನು ತೆರೆ ಮೇಲೆ ಸ್ಪೂರ್ತಿದಾಯಕವಾಗಿ ವಿದು ವಿನೋದ್‌ ಅವರು ಹೇಳಿದ್ದಾರೆ.

ವಿಕ್ರಾಂತ್ ಮಾಸ್ಸೆ ಅವರ ಅಭಿನಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಥಿಯೇಟರ್‌ ನಲ್ಲಿ ಜನಮನವನ್ನು ಗೆದ್ದು 50 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ ಸಿನಿಮಾ ಇದೀಗ ಓಟಿಟಿಯಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಇದೇ ಡಿಸೆಂಬರ್ 29 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ.

ವಿಧು ವಿನೋದ್ ಚೋಪ್ರಾ ಅವರ ’12th ಫೇಲ್’ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅಕ್ಟೋಬರ್ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು. ಚಿತ್ರದಲ್ಲಿ ಮನೋಜ್ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ ನಟಿಸಿದ್ದಾರೆ ಮತ್ತು ಮೇಧಾ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next