Advertisement

22ರಂದು ವಿಕ್ರಮಾದಿತ್ಯ ವೀಕ್ಷಣೆಗೆ ಮುಕ್ತ ಅವಕಾಶ

02:46 PM Dec 18, 2019 | Team Udayavani |

ಕಾರವಾರ: ಪ್ರಸಕ್ತ ಸಾಲಿನ ನೌಕಾ ಸಪ್ತಾಹ ಆಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿ.22 ರಂದು ಭಾರತೀಯ ನೌಕಾ ಹಡಗು ವಿಕ್ರಮಾದಿತ್ಯ ವೀಕ್ಷಣೆಗೆ, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

Advertisement

ವೀಕ್ಷಕರ ಅನುಕೂಲಕ್ಕಾಗಿ ಕೆಲವು ಭದ್ರತಾ ನಿಯಮಗಳು ಜಾರಿಯಲ್ಲಿದ್ದು, ಅರಗಾ ಮುಖ್ಯ ಗೇಟ್‌ನಿಂದ ಮಾತ್ರ ಒಳಪ್ರವೇಶಕ್ಕೆ ಅನುಮತಿಯಿದೆ. ವೀಕ್ಷಕರು ತಮ್ಮ ಗುರುತಿನ ಚೀಟಿಗಳಾದ ಆಧಾರ್‌, ಮತದಾರರ ಗುರುತಿನ ಚೀಟಿ, ಸರ್ಕಾರದಿಂದ ನೀಡಿದ ಯಾವುದೇ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು. ನೌಕಾನೆಲೆ ಒಳಗೆ ಮೊಬೈಲ್‌, ಕ್ಯಾಮೆರಾ, ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್‌ ಸಾಧನ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ತಮ್ಮ ವಾಹನಗಳನ್ನುನಿಗದಿಪಡಿಸಿದ ಸ್ಥಳದಲ್ಲಿಯೇ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ನೌಕಾನೆಲೆ ಒಳಗಡೆ ವಾಹನ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಐಎನ್‌ ಎಸ್‌ ಕದಂಬ ನೌಕಾನೆಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಯ್‌ ಕಪೂರ್‌ ತಿಳಿಸಿದ್ದಾರೆ. ವೀಕ್ಷಕರು ನೌಕಾಪಡೆ ಅಧಿಕಾರಿಗಳೊಂದಿಗೆ ಸಹಕರಿಸಿ ಸಪ್ತಾಹ ಆಚರಣೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರವಾರ ನೌಕಾನೆಲೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next