Advertisement
ಹೌದು, “ತ್ರಿವಿಕ್ರಮ’ ಚಿತ್ರತಂಡ ಲವರ್ ಡೇಗೊಂದು ಸ್ಪೆಷಲ್ ಪ್ಲಾನ್ ಹಾಕಿಕೊಂಡಿದೆ. ಅದೇನೆಂದರೆ, ಫೆ.14 ಪ್ರೇಮಿಗಳ ದಿನ. ಈ ಹಿನ್ನೆಲೆಯಲ್ಲಿ, ವಾರವಿಡೀ ಪ್ರೇಮೋತ್ಸವ ಆಚರಿಸಲು ತಯಾರಿ ನಡೆಸಿದೆ. ಸಾಮಾನ್ಯವಾಗಿ ಫೆಬ್ರವರಿ 14 ಬಂದರೆ, ಯೂಥ್ಸ್ಗಂತೂ ಅದು ದೊಡ್ಡ ಹಬ್ಬ.
ಹುಡುಗಿಯರಿಗೆ ಕಾತರ. ಆದರೆ, “ತ್ರಿವಿಕ್ರಮ’ ಮಾತ್ರ, ಒಂದು ವಾರ ಮುನ್ನವೇ ಪ್ರೇಮಾಚರಣೆ ಶುರು ಮಾಡಿದ್ದಾನೆ. ಫೆ.7 ರಂದು ರೋಸ್ ಡೇ ಮಾಡಿಕೊಂಡರೆ, ಫೆ.8 ರಂದು ಪ್ರಪೋಸ್ ಡೇ ಮಾಡಿದ್ದಾನೆ. ಫೆ.9 ಚಾಕೋಲೇಟ್ ಡೇ, ಫೆ.10 ಟೆಡ್ಡಿ ಡೇ, ಫೆ.11 ಪ್ರಾಮೀಸ್ ಡೇ, ಫೆ.12 ಕಿಸ್ ಡೇ, ಫೆ.13 ಹಾಗೂ ಫೆ.14 ವ್ಯಾಲೆಂಟೈನ್ ಡೇ. ಈ ಮೂಲಕ ವಿಶೇಷವಾಗಿ ಪ್ರೇಮಿಗಳ ದಿನ ಆಚರಿಸಲು ಹೊರಟಿದ್ದಾನೆ. ಸದ್ಯಕ್ಕೆ ಚಿತ್ರೀಕರಣದಲ್ಲಿರುವ “ತ್ರಿವಿಕ್ರಮ’ ತಂಡ, ಪ್ರತಿ ದಿನ ಒಂದೊಂದು ಪೋಸ್ಟರ್ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದೆ. ಪ್ರತಿಯೊಂದು ದಿನವೂ ವಿಭಿನ್ನವಾದ ಪೋಸ್ಟರ್ ಮೂಲಕ ಕಾಣಿಸಿಕೊಂಡು ಪ್ರೇಮೋತ್ಸವ ಆಚರಿಸಲು ತುದಿಗಾಲ ಮೇಲೆ ನಿಂತಿದ್ದಾನೆ.
Related Articles
ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ ಹಾಗು ಸಂತೋಷ್ ರೇ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.
Advertisement