Advertisement

ಚೀನಕ್ಕೆ ಭಾರತದ ಹೊಸ ರಾಯಭಾರಿ: ವಿಕ್ರಂ ಮಿಸ್ರಿ ಅಧಿಕಾರ ಸ್ವೀಕಾರ

06:43 AM Jan 08, 2019 | Team Udayavani |

ಬೀಜಿಂಗ್‌ : ಚೀನಕ್ಕೆ ಭಾರತದ ನೂತನ ರಾಯಭಾರಿಯಾಗಿ ನೇಮಕಗೊಂಡಿರುವ ವಿಕ್ರಂ ಮಿಸ್ರಿ ಅವರು ಅಧಿಕಾರ ಸ್ವೀಕರಿಸಿದ್ದು ಉನ್ನತ ಚೀನೀ ನಾಯಕರನ್ನು ಭೇಟಿಯಾಗಿ ಭಾರತ-ಚೀನ ಸಂಬಂಧ ಕುರಿತು ಮಾತುಕತೆ ನಡೆಸಿದರು. 

Advertisement

ಬೀಜಿಂಗ್‌ನಲ್ಲಿರುವ ಚೀನದ ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿನ ಶಿಷ್ಟಾಚಾರಗಳ ಉಪ ಮಹಾ ನಿರ್ದೇಶಕ ಹಾಂಗ್‌ ಲೀ ಅವರಿಗೆ ಮಿಸ್ರಿ ಅವರು ತಮ್ಮ ಗುರುತು ಪತ್ರ ದಾಖಲೆ ಪ್ರತಿಗಳನ್ನು ಸಲ್ಲಿಸಿದರು. 

ಬಳಿಕ ಚೀನದ ವಿದೇಶ ವ್ಯವಹಾರಗಳ ಸಚಿವಾಲಯದ ಏಶ್ಯನ್‌ ವ್ಯವಹಾರಗಳ ಮಹಾ ನಿರ್ದೇಶಕ  ವು ಜಿಯಾಂಘಾವೋ ಅವರನ್ನು ಭೇಟಿಯಾದ ಮಿಸ್ರಿ ಅವರು ಭಾರತ-ಚೀನ ದ್ವಿಪಕ್ಷೀಯ ಸಂಬಂಧಗಳ ಕುರಿತಾದ ಅಭಿಪ್ರಾಯಗಳನ್ನು  ವಿನಿಮಯಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next