Advertisement

ವಿಕ್ರಂ ಜೈನ್‌ ಕೊಲೆ: ಮೂವರ ಬಂಧನ

10:40 AM May 30, 2019 | keerthan |

ಬೆಳ್ತಂಗಡಿ,: ಮುಂಡೂರು ಕೋಟಿಕಟ್ಟೆಯಲ್ಲಿ ಉಪನ್ಯಾಸಕ ವಿಕ್ರಮ್‌ ಜೈನ್‌ ಅವರ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಮುಖ ಆರೋಪಿ ಮುಂಡೂರಿನ ಉಜ್ರೆಬೈಲು ನಿವಾಸಿ ನಾಗೇಶ್‌ ಪೂಜಾರಿ (32), ಮುಂಡೂರಿನ ಪರನೀರು ನಿವಾಸಿ ಡೀಕಯ್ಯ ನಲ್ಕೆ (39) ಹಾಗೂ ಹಂತಕರು ಪರಾರಿ ಯಾಗಲು ಸಹಕರಿಸಿದ ಮಾಲಾಡಿ ಸಮೀಪದ ಊರ್ಲ ನಿವಾಸಿ ಗಣೇಶ್‌ ಪೂಜಾರಿ (34) ಬಂಧಿತರು.

ಇಬ್ಬರಿಗೂ ಇತ್ತು ದ್ವೇಷ
ತನ್ನ ಹತ್ತಿರದ ಸಂಬಂಧಿ ಮಹಿಳೆ ಜತೆ ವಿಕ್ರಂ ಜೈನ್‌ ಸ್ನೇಹ ಹೊಂದಿ ದ್ದಕ್ಕೆ ನಾಗೇಶ್‌ ತಗಾದೆ ಎತ್ತಿದ್ದ. ಇನ್ನೋರ್ವ ಆರೋಪಿ ಡೀಕಯ್ಯ ಮನೆ ಕಟ್ಟುತ್ತಿದ್ದು, ಈತನಿಗೆ ರಸ್ತೆ ಬಿಟ್ಟು ಕೊಡದಿದ್ದಕ್ಕೆ ದ್ವೇಷವಿದ್ದ ಕಾರಣ ಇಬ್ಬರು ಸೇರಿ ವಾರದ ಹಿಂದೆ ಕೊಲೆಗೆ ಸಂಚು ರೂಪಿ ಸಿದ್ದರು. ಆರೋಪಿಗಳು ವಿಕ್ರಂನ ನೆರೆಹೊರೆ ಯವರಾಗಿದ್ದರು. ವಿಕ್ರಮ್‌ ಜತೆ ಮಾತನಾಡುವ ನೆಪದಲ್ಲಿ ಮದ್ಯ ಕುಡಿಸಿ ನಾಗೇಶ್‌ ಚೂರಿಯಿಂದ ಇರಿ ದಿದ್ದು, ಪಕ್ಕದಲ್ಲಿ ಅಡಗಿ ಕುಳಿತಿದ್ದ ಡೀಕಯ್ಯ ಮಚ್ಚಿನಿಂದ ಕಡಿದಿದ್ದಾನೆ. ಈ ವೇಳೆ ವಿಕ್ರಂ ಆರೋಪಿಗಳ ಕೈಗೆ ಕಡಿದಿದ್ದರಿಂದ ಗಾಯವಾಗಿದೆ. ಬಳಿಕ ಬಿದ್ದ ವಿಕ್ರಂಗೆ ಆರೋಪಿಗಳು ಕಡಿದು ರೈಲಿನಲ್ಲಿ ಮುಂಬಯಿಗೆ ಪರಾರಿ ಯಾಗಲೆತ್ನಿಸಿದ್ದು, ಬೈಂದೂರು ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದರು.

ಕೊಲೆ ಬಳಿಕ ಆರೋಪಿಗಳು ಪರಾರಿಯಾಗಲು ನಾಗೇ ಶನ ಅಣ್ಣ ಮಾಲಾಡಿ ಗ್ರಾಮದ ಊರ್ಲ ನಿವಾಸಿ ಗಣೇಶ್‌ ಪೂಜಾರಿ(34)ಯ ಮನೆಗೆ ತೆರಳಿದ್ದರು. ರಾತ್ರಿ ಇಡೀ ಅಲ್ಲೇ ತಂಗಿದ್ದು, ಬೆಳಗ್ಗೆ 7 ಗಂಟೆಗೆ ಮೂರ್ಜೆ ಮೂಲಕ ಪರಾರಿಯಾಗಿದ್ದರು. ಆರೋಪಿಗಳು ಬಳಸಿದ್ದ ದ್ವಿಚಕ್ರ ವಾಹನ ಮತ್ತು ಕೃತ್ಯದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ಸುಟ್ಟ ಸ್ಥಿತಿಯಲ್ಲಿ ವಶಕ್ಕೆ ಪಡೆಯಲಾಗಿದೆ.

ಬಹುಮಾನ ಘೋಷಣೆ
ಆರೋಪಿಗಳನ್ನು 8 ಗಂಟೆಯೊಳಗೆ ಬಂಧಿಸಿದ ಬೆಳ್ತಂಗಡಿ ಸಿಐ ಸಂದೇಶ್‌ ಪಿ.ಜಿ., ಎಸ್‌.ಐ. ರವಿ ಬಿ.ಎಸ್‌. ಬಂಟ್ವಾಳ ಪ್ರಭಾರ ಡಿವೈಎಸ್‌ಪಿ ನಟರಾಜ್‌ ಅವರನ್ನು ಅಭಿನಂದಿಸಿದ ದ.ಕ. ಎಸ್‌ಪಿ ಬಹುಮಾನ ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next