ಶೃಂಗೇರಿ: ಎನ್ಕೌಂಟರ್ನಲ್ಲಿ ಮೃತಪಟ್ಟ ನಕ್ಸಲ್ ವಿಕ್ರಂ ಗೌಡನ ಸಹಚರರ ಶೋಧಕ್ಕಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯವನ್ನು ಮತ್ತೆ ಚುರುಕುಗೊಳಿಸಲಾಗಿದೆ.
ವಿಕ್ರಂ ಜತೆಯಲ್ಲಿದ್ದವರು ಪರಾರಿಯಾಗಿದ್ದು ರಾಷ್ಟ್ರೀಯ ಉದ್ಯಾನ ಪ್ರದೇಶಕ್ಕೆ ಬಂದಿರಬಹುದೆಂಬ ಶಂಕೆಯಲ್ಲಿ ಎಎನ್ಎಫ್ ಮತ್ತು ಪೊಲೀಸ್ ಸಿಬಂದಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ ವಾರವಷ್ಟೇ ಯಡಗುಂದದಲ್ಲಿ ನಾಡ ಬಂದೂಕು ವಶಪಡಿಸಿಕೊಂಡಿದ್ದು ಮುಂಡಗಾರು ಲತಾ ನೇತೃತ್ವದ ತಂಡ ಬಂದಿತ್ತು. ಈ ತಂಡ ಮತ್ತೆ ಕಾಡಿನಲ್ಲಿ ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಗಡಿ ಪ್ರದೇಶದಲ್ಲಿ ಚೆಕ್ಪೋಸ್ಟ್ ನಿರ್ಮಿಸಿದ್ದು ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣವನ್ನು ನಾವು ಹತ್ಯೆ ಎಂದೇ ಕರೆಯುತ್ತೇವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಸರಕಾರವನ್ನು ಆಗ್ರಹಿಸಲಾಗು ವುದು. ಘಟನೆ ಬಗ್ಗೆ ಯಾವುದೇ ರೀತಿಯ ವಿವರಣೆಗಳು ಇರಬಹುದು ಎಲ್ಲವೂ ತನಿಖೆಯಾಗಬೇಕು.
-ಡಾ| ಬಂಜಗೆರೆ ಜಯಪ್ರಕಾಶ್,
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಅಧ್ಯಕ್ಷ