Advertisement

ವಿಕಾಸಸೌಧ : ವಿದೇಶ ಸಂಪರ್ಕ ಕಾರ್ಯಾಗಾರ ಉದ್ಘಾಟನೆ

01:14 PM Feb 26, 2020 | Suhan S |

ಬೆಂಗಳೂರು: ವಿದೇಶ ಸಂಪರ್ಕ ಕಾರ್ಯಾಗಾರವನ್ನು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಮುರಳೀಧರನ್ ವಿಕಾಸಸೌಧದಲ್ಲಿ ಬುಧವಾರ ಉದ್ಘಾಟಿಸಿದರು.

Advertisement

ಕಾರ್ಯಾಗಾರದಲ್ಲಿ ಮಾತಾನಾಡಿದ ಸಚಿವ ಮಾಧುಸ್ವಾಮಿ ,ಪಾಸ್ ಪೋರ್ಟ್ ಕೊಡುವ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಬೇಕು.ವೀಸಾ ಪಡೆಯಲು ಚೆನ್ನೈಯಲ್ಲಿ ಉದ್ದದ ಸರದಿ ಸಾಲಿನಲ್ಲಿ‌ ನಿಲ್ಲುವ ಅನಿವಾರ್ಯತೆ ಇದೆ. ಇದನ್ನು ಸಹ ಸರಳೀಕರಣಗೊಳಿಸುವ ಅಗತ್ಯವಿದೆ. ವಿದೇಶದಲ್ಲಿ ಅನಿವಾಸಿ ಭಾರತೀಯರ ನಿಧನ ವೇಳೆಯೂ ತೊಡಕು ಆಗುತ್ತಿದ್ದು, ಮೃತರ ದೇಹವನ್ನು ವಿದೇಶದಿಂದ ತರುವ ಪ್ರಕ್ರಿಯೆ ಸುಲಭವಿಲ್ಲ. ಈ ವಿಷಯದಲ್ಲೂ ನಿಯಮಗಳ ಬದಲಾವಣೆಗಳು ಅಗತ್ಯ ರಾಜ್ಯದಲ್ಲಿ ಅಮೆರಿಕಕ್ಕೆ ವೀಸಾ ಕೊಡುವ ಕೇಂದ್ರ ತೆರೆಯಬೇಕು ವಲಸೆ ನಿಯಮಗಳಲ್ಲಿ ಬದಲಾವಣೆಗಳಾಗಬೇಕಿದೆ ಎಂದರು.

ಕಾರ್ಯಗಾಋ ಉದ್ಘಾಟಿಸಿ ಮಾತಾನಾಡಿದ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಮುರಳೀಧರನ್ , ವಿದೇಶದಲ್ಲಿ 3 ಕೋಟಿ ಅನಿವಾಸಿ ಭಾರತೀಯರು ವಾಸ ಪಾಸ್ ಪೋರ್ಟ್ ಮತ್ತು ವೀಸಾ ಸೇವೆಗಳನ್ನು ಜನಸ್ನೇಹಿ‌ಗೊಳಿಸಿದ್ದೇವೆ. 117 ದೇಶಗಳಲ್ಲಿ ಇ-ವೀಸಾ ಸೇವೆ ಲಭ್ಯ ಇ-ಪಾಸ್ ಪೋರ್ಟ್ ಸೇವೆಯನ್ನೂ ಆರಂಭಿಸಿದ್ದೇವೆ. ವಿದೇಶ ಪ್ರಯಾಣ ಈಗ‌ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ ವಿದೇಶಾಂಗ ಇಲಾಖೆ ಜೊತೆ ರಾಜ್ಯ ಸರ್ಕಾರದ ಸಹಕಾರ ಉತ್ತಮವಾಗಿದೆ. ಸಚಿವ ಮಾಧುಸ್ವಾಮಿ‌ ಇಲಾಖೆಯ ಗಮನಕ್ಕೆ ಕೆಲ ಸಮಸ್ಯೆಗಳನ್ನು ತಂದಿದ್ದಾರೆ. ಈ ಸಮಸ್ಯೆಗಳ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಕಾರ್ಯಗಾರದಲ್ಲಿ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next