Advertisement

ಬಾಕ್ಸರ್ ಡಿಂಗ್ಕೊ ಸಿಂಗ್ ಗೆ ವಿಜೇಂದರ್,ಮನೋಜ್ ನೆರವು: ವ್ಯಾಟ್ಸಪ್ ಗ್ರೂಪ್ ನಲ್ಲಿ ಹಣ ಸಂಗ್ರಹ

03:38 PM Apr 23, 2020 | keerthan |

ಹೊಸದಿಲ್ಲಿ: ಪಿತ್ತ ಜನಕಾಂಗದ ಕ್ಯಾನ್ಸರ್ ಗೆ ತುತ್ತಾಗಿ ಇದೀಗ ತೀವ್ರ ಸಂಕಷ್ಟದಲ್ಲಿರುವ ಮಾಜಿ ಬಾಕ್ಸರ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಝೇತ ಡಿಂಗ್ಕೊ ಸಿಂಗ್ ಗೆ ಖ್ಯಾತ ಬಾಕ್ಸರ್ ಗಳಾದ ವಿಜೇಂದರ್ ಸಿಂಗ್, ಮನೋಜ್ ಕುಮಾರ್ ಮತ್ತಿತರ ಸ್ನೇಹಿತರು ನೆರವಾಗಿದ್ದಾರೆ.

Advertisement

ವಿಜೇಂದರ್ ಸಿಂಗ್, ಮನೋಜ್ ಕುಮಾರ್ ಮತ್ತಿತರ ಸ್ನೇಹಿತರು ಡಿಂಗ್ಕೊ ಸಿಂಗ್ ಗೆ ಒಂದು ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ವ್ಯಾಟ್ಸಾಪ್ ಗುಂಪಿನ ಮೂಲಕ ಬಾಕ್ಸಿಂಗ್ ಕ್ಷೇತ್ರದ ಸ್ನೇಹಿತರೇ ಸೇರಿ ಹಣ ಸಂಗ್ರಹಿಸಿ ನೇರವಾಘಿ ಡಿಂಗ್ಕೊ ಸಿಂಗ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಈ ಬಗ್ಗೆ ಸ್ವತಃ ವಿಜೇಂದರ್ ಮತ್ತು ಮನೋಜ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ಸದ್ಯ ಇಂಪಾಲಗ ನಲ್ಲಿರುವ ಡಿಂಗ್ಕೊ ಸಿಂಗ್ ಲಾಕ್ ಡೌನ್ ಹಿನ್ನಲೆಯಲ್ಲಿ ರೇಡಿಯೇಶನ್ ಥೆರಪಿ ಮಾಡಿಸಿಕೊಳ್ಳಲು ಸಾಧ್ಯವಾಗದೆ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಏಪ್ರಿಲ್ 25ರಂದು ಏರ್ ಆಂಬುಲೆನ್ಸ್ ಮೂಲಕ ಅವರನ್ನು ಚಿಕಿತ್ಸೆಗೆ ನವದೆಹಲಿಗೆ ಕರೆದುಕೊಂಡು ಬರಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next