Advertisement
ತಮ್ಮ ಭಾಷಣ ಮುಗಿಸಿ ಜನತೆಯತ್ತ ಕೈಬೀಸಿದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮನ ಅರಿಯದೇ ರಾಹುಲ್ ಗಾಂಧಿ ವೇದಿಕೆಯಿಂದ ಇಳಿದು ಹೋದರು. ಇದರಿಂದಾಗಿ ಇನ್ನೊಂದು ಬದಿಯಿಂದ ವೇದಿಕೆ ಏರಿ ಬಂದ ಸಿದ್ಧರಾಮಯ್ಯ, ರಾಹುಲ್ ಹಿಂದೆಯೇ ದೌಡಾಯಿಸಿದರು. ಆದರೆ ಅಷ್ಟರಲ್ಲಾಗಲೇ ರಾಹುಲ್ ಗಾಂಧಿ ವೇದಿಕೆಯಿಂದ ಕೆಳಗೆ ಇಳಿದಾಗಿತ್ತು.
Related Articles
Advertisement
ರಾಹುಲ್ ಗಾಂಧಿ ಅವರಿಗೆ ವಿಜಯಪುರ ದ್ರಾಕ್ಷಿ ಬೆಳೆಯವಲ್ಲಿ ಮುಂಚೂಣಿ ಜಿಲ್ಲೆಯಾಗಿದ್ದು, ಆಸ್ಮಿತೆಗಾಗಿ ಒಣದ್ರಾಕ್ಷಿ ಹಾರ ಹಾಕಿ ವಿಶೇಷವಾಗಿ ಸ್ವಾಗತಿಸಲಾಯಿತು.
ಜಿಲ್ಲಾ ಉಸ್ತುವಾರಿ ಹೊಂದಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ರಾಹುಲ್ ಗಾಂಧಿ ಅವರಿಗೆ ಒಣದ್ರಾಕ್ಷಿ ಹಾರ ಹಾಕಿದರೆ, ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ ಸುರ್ಜೇವಾಲಾ ಅವರಿಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಒಣದ್ರಾಕ್ಷಿ ಹಾರ ಹಾಕಿ ಸ್ವಾಗತಿಸಿದರು.ಬಳಿಕ ವೇದಿಕೆ ಆಗಮಿಸಿದ ಸಿದ್ಧರಾಮಯ್ಯ ಅವರಿಗೂ ಸಚಿವ ಎಂ.ಬಿ.ಪಾಟೀಲ ಒಣದ್ರಾಕ್ಷಿ ಹಾರ ಹಾಕಿಯೇ ಸ್ವಾಗತಿಸಿದರು.
ಮತ್ತೊಂದೆಡೆ ವಿಜಯಪುರ ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಸಭೆಯ ವೇದಿಕೆಯಲ್ಲಿ ವಿಜಯಪುರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಪ್ರಚಾರದ ಬಹಿರಂಗ ಸಮಾವೇಶದ ವೇದಿಕೆಗೆ ಕಟ್ಟಿದ್ದ ಬ್ಯಾನರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಭಾವಚಿತ್ರ, ಹೆಸರೂ ಕೂಡ ಎಲ್ಲಿಯೂ ಬಳಸಿರಲಿಲ್ಲ. ಅಷ್ಟೇ ಏಕೆ ವೇದಿಕೆ ಮೇಲಿದ್ದ ನಾಯಕರು ಮಾತನಾಡುವಾಗ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರೆ ಹೊರತು, ಎಲ್ಲಿಯೂ ಅಭ್ಯರ್ಥಿ ರಾಜು ಆಗಲೂರ ಅವರನ್ನು ಗೆಲ್ಲಿಸಿ ಎಂದು ಹೆಸರು ಪ್ರಸ್ತಾಪಿಸಿ ಮತಯಾಚನೆ ಮಾಡಲಿಲ್ಲ. ಅಭ್ಯರ್ಥಿಯ ಭಾವಚಿತ್ರ, ಹೆಸರು ಹಾಗೂ ಅಭ್ಯರ್ಥಿ ವೇದಿಕೆಗೆ ಬಂದಲ್ಲಿ ಪ್ರಚಾರ ಸಭೆಯ ವೆಚ್ಚವೆಲ್ಲ ಅವರ ಚುನಾವಣಾ ಖರ್ಚಿನ ವೆಚ್ಚದ ಲೆಕ್ಕಕ್ಕೆ ಸೇರುತ್ತದೆ ಎಂಬ ಕಾರಣಕ್ಕೆ ಈ ರೀತಿ ಚುನಾವಣಾ ಪ್ರಚಾರ ತಂತ್ರ ಅನುಸರಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾರ್ಯಕ್ರಮದ ವೆಚ್ಚದ ಕುರಿತು “ಉದಯವಾಣಿ”ಗೆ ಮಾಹಿತಿ ನೀಡಿದ ವಿಜಯಪುರ ನಗರದಲ್ಲಿ ಕಾಂಗ್ರೆಸ್ ನಡೆಸಿದ ಚುನಾವಣಾ ಪ್ರಚಾರ ಸಭೆಯ ವೆಚ್ಚದ ಕುರಿತು ಚುನಾವಣಾ ವೆಚ್ಚ ಸಮಿತಿ ನೀಡುವ ವರದಿ ಆಧರಿಸಿ, ಈ ಬಗ್ಗೆ ನಿಖರ ಮಾಹಿತಿ ನೀಡುವುದಾಗಿ ವಿವರಿಸಿದ್ದಾರೆ.