Advertisement
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿದ್ದ ರಮೇಶ ಜಿಗಜಿಣಗಿ, ಕ್ಷೇತ್ರ ಮರುವಿಂಗಡಣೆ ಬಳಿಕ ವಿಜಯಪುರ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದಾಗ ತವರಿಗೆ ಮರಳಿದ್ದರು. ಈ ಸಲವೂ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement
ಹಿಂದಿನ ಎರಡೂವರೆ ದಶಕದ ಚುನಾವಣೆ ಅವಲೋಕಿಸಿದರೆ ಬಿಜೆಪಿ ಭದ್ರಕೋಟೆ ಬೇಧಿಸುವುದು ಕಾಂಗ್ರೆಸ್‌ಗೆ ಈಗಲೂ ಸುಲಭವಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಪ್ರಭಾವಿ ನಾಯಕರಾಗಿದ್ದು, ಸಚಿವರಾಗಿರುವ ಎಂ.ಬಿ.ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಸಹಿತ ಆರು ಮಂದಿ ಪಕ್ಷದ ಶಾಸಕರಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕೈಮೇಲಾಗುವುದು ಖಚಿತ ಎಂಬ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು.
ಈ ಬಾರಿ ಬಿಜೆಪಿಗೆ ಕಾಂಗ್ರೆಸ್ ನೇರ ಎದುರಾಳಿ ಆಗಲಿದ್ದು, ಕೈ ಪಾಳೆಯ ದಿಂದ ಕೆಪಿಸಿಸಿಗೆ ಕಳಿಸಿರುವ ಪಟ್ಟಿಯಂತೆ 10 ಸ್ಪರ್ಧಾಕಾಂಕ್ಷಿಗಳಿದ್ದಾರೆ. ರಮೇಶ ಜಿಗಜಿಣಗಿ ವಿರುದ್ಧ ಸತತ ಎರಡು ಸೋಲು ಸಹಿತ ಮೂರು ಬಾರಿ ಪರಾಭವಗೊಂಡಿರುವ ಮೇಲ್ಮನೆ ಶಾಸಕ ಪ್ರಕಾಶ ರಾಠೊಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಆರ್.ಆಲಗೂರು, ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೊಡ, ಬಲರಾಮ ನಾಯಕ, ಕಾಂತಾ ನಾಯಕ, ಡಿ.ಎಲ್.ಚೌವ್ಹಾಣ್, ಮಾಜಿ ಅಧಿಕಾರಿ ರಾಜಶೇಖರ ಯಡಳ್ಳಿ ಹಾಗೂ ಮಾಜಿ ಶಾಸಕ ಮನೋಹರ ಐನಾಪುರ ಸಹಿತ 10 ಮಂದಿ ಆಕಾಂಕ್ಷಿಗಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಜಿಗಜಿಣಗಿ ವಿರುದ್ಧ ಸ್ಪಧಿìಸಿ ಸೋತಿದ್ದ ಸುನೀತಾ ಚೌವ್ಹಾಣ್ ಹಾಗೂ ಪ್ರಕಾಶ ರಾಠೊಡ ಇಬ್ಬರೂ ಬಂಜಾರಾ ಸಮುದಾಯದವರು. ಹೀಗಾಗಿ ಹೊಸಮುಖಕ್ಕೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಂಜಾರಾ ಸಮುದಾಯದ ಟಿಕೆಟ್ ಆಕಾಂಕ್ಷಿಗಳಿಂದ ಕೇಳಿಬಂದಿದೆ.
ಈ ಪಟ್ಟಿಯಲ್ಲಿ ಕಾಂತಾ ನಾಯಕ ಮಹಿಳಾ ಕೋಟದಲ್ಲಿ ಕೊಡಿ ಎನ್ನುತ್ತಿ ದ್ದಾರೆ. ಬಲರಾಮ ನಾಯಕ, ಅರ್ಜುನ ರಾಠೊಡ, ಡಿ.ಎಲ್.ಚೌವ್ಹಾಣ್ ನಮಗೊಂದು ಅವಕಾಶ ಕೊಟ್ಟು ನೋಡಿ ಎಂಬ ಬೇಡಿಕೆ ಸಲ್ಲಿಸಿದ್ದಾರೆ. ಹೊರಗಿನ ಜಿಲ್ಲೆಯವರೂ ಮೀಸಲು ಕ್ಷೇತ್ರದಿಂದ ಲೋಕಸಭೆ ಪ್ರವೇಶಕ್ಕೆ ಪ್ರಯತ್ನ ನಡೆಸಿದ್ದಾರೆ.
ಜಿ.ಎಸ್.ಕಮತರ