Advertisement

Vijaypur: ಕರ್ತವ್ಯ ಲೋಪ ಡಿಡಿಪಿಐ ನಾಗೂರ ಮತ್ತೆ ಸಸ್ಪೆಂಡ್

12:01 AM Apr 16, 2024 | Vishnudas Patil |

ವಿಜಯಪುರ : ಕರ್ತವ್ಯ ಲೋಪ ಆರೋಪ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವಿಜುಯಪುರ ಉಪ ನಿರ್ದೇಶಕ ಎನ್.ಎಚ್.ನಾಗೂರು ಸೇವೆಯಿಂದ ಅಮಾನತ್ತು ಆಗಿದ್ದಾರೆ.

Advertisement

ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಧಿನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರ ಇವರು ಡಿಡಿಪಿಐ ಹುದ್ದೆಯಿಂದ ಎನ್.ಎಚ್.ನಾಗೂರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ವಲಯದ ಅಪರ ಆಯುಕ್ತರು ಇಲಾಖೆಯ ಮೇಲಾಧಿಕಾರಿಗಳಿಗೆ ಮಾಡಿದ ಶಿಫಾರಸ್ಸಿನ ಮೇಲೆ ನಾಗೂರ ಅವರನ್ನು ಡಿಡಿಪಿಐ ಹುದ್ದೆಯಿಂದ ಅಮಾನತ್ತು ಮಾಡಲಾಗಿದೆ.

ಎಸ್.ಎಸ್.ಎಲ್.ಸಿ. ಪರೀಕ್ಷೆ ವೇಳೆ ಸಿಸಿ ಕೆಮೆರಾ ದೃಷ್ಯಾವಳಿ ಪರಿಶೀಲನೆ ಮಾಡಿಲ್ಲ, ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಜನ ಜಂಗುಳಿ ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡದೇ ಪರೀಕ್ಷಾ ಕೇಂದ್ರದೊಳಗೆ ಬಿಡಲಾಗಿದೆ ಎಂಬ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ಇದಲ್ಲದೇ ಪರೀಕ್ಷಾ ಕೇಂದ್ರದ ಶಾಲಾ ಶಿಕ್ಷಕರನ್ನೇ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನಾಗಿ ಸ್ಥಾನಿಕ ಜಾಗೃತ ದಳ ಆಧಿಕಾರಿಗಳನ್ನಾಗಿ ನೇಮಕ ಮಾಡಿರುವ ಆರೋಪ ಸಾಬೀತಾಗಿದ್ದು, ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ವಿವರಿಸಲಾಗಿದೆ.

Advertisement

ಅಮಾನತಾಗಿರುವ ಎನ್.ಎಚ್.ನಾಗೂರ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಬಾರದು ಸಸ್ಪೆಂಡ್ ಆದೇಶದಲ್ಲಿ ಸೂಚಿಸಲಾಗಿದೆ.

ಕೆಲವೇ ಫೆಬ್ರವರಿ 1 ರಂದು ಇದೇ ಡಿಡಿಪಿಐ ಹುದ್ದೆಗೆ ಬಡ್ತಿ ಪಡೆದರೂ ನಾಗೂರ ಅವರು ಕೆಳ ಹಂತದ ಅಧಿಕಾರಿಯಾಗಿದ್ದಾಗ ಮಾಡಿದ ಆರ್ಥಿಕ ದುರ್ಬಳಕೆ ಆರೋಪದಲ್ಲಿ ಸಸ್ಪೆಂಡ್ ಆಗಿದ್ದರು. ಇದರ ವಿರುದ್ಧ ಕೆಎಟಿ ನ್ಯಾಯಾಲದಿಂದ ತಮ್ಮ ಸಸ್ಪೆಂಡ್‍ಗೆ ತಡೆಯಾಜ್ಞೆ ತಂದಿದ್ದರು.

ಸಸ್ಪೆಂಡ್ ಆದ ತಮ್ಮ ಹುದ್ದೆಯಲ್ಲಿದ್ದ ಪ್ರಭಾರಿ ಡಿಡಿಪಿಐ ಅವರಿಗೆ ಕುರ್ಚಿ ಬಿಟ್ಟುಕೊಡುವಂತೆ ಫೆ.9 ರಂದು ಡಿಡಿಪಿಐ ಕಛೇರಿಗೆ ತೆರಳಿ ಪ್ರಭಾರಿ ಡಿಡಿಪಿಐ ಆಗಿದ್ದ ಉಮಾದೇವಿ ಅವರೊಂದಿಗೆ ರಂಪಾಟ ಮಾಡಿಕೊಂಡು ನಾಗೂರ ಸುದ್ದಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next