Advertisement
ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಚಾರದಲ್ಲಿ ಅನ್ವಯವಾಗುವ ಮಾತಿದು.
Related Articles
Advertisement
ವರುಣದಲ್ಲಿ ಈ ಬಾರಿ ಸ್ಪರ್ಧಿಸಲು ವಿಜಯೇಂದ್ರ ಅವರಿಗೆ ಆಸಕ್ತಿ ಇಲ್ಲ. ಕಳೆದ ಚುನಾವಣೆಯಲ್ಲಿ ಇಲ್ಲಿ ಟಿಕೆಟ್ ನಿರಾಕರಿಸಿದ ಅನಂತರ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಸಕ್ತಿ ಕಳೆದುಕೊಂಡರು. ವರುಣ ಕ್ಷೇತ್ರಕ್ಕೆ ಭೇಟಿ ಕಡಿಮೆಯಾಯಿತು. ಯಡಿಯೂರಪ್ಪ ಅವರು ಚುನಾವಣ ರಾಜಕಾರಣದಿಂದ ದೂರ ಸರಿದ ಅನಂತರ ಅವರು ಪ್ರತಿನಿಧಿಸಿರುವ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕೆ ಧಮುಕಲು ವಿಜಯೇಂದ್ರ ತಯಾರಿ ನಡೆಸಿದ್ದಾರೆ. ಹೀಗಿರುವಾಗ, ವರುಣ ಕ್ಷೇತ್ರದಿಂದ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಲು ಹೈಕಮಾಂಡ್ ಚಿಂತಿಸಿರುವುದು ವಿಜಯೇಂದ್ರ ಅವರ ಆಪ್ತರಲ್ಲಿ ಬೇಸರ ಮೂಡಿಸಿದೆ.
ಸಿದ್ದರಾಮಯ್ಯ ಅವರು ಈಗ ಮುಖ್ಯಮಂತ್ರಿಯಲ್ಲ, ವಿಪಕ್ಷದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಆಗ ಮುಖ್ಯಮಂತ್ರಿಯಾಗಿದ್ದರಿಂದ ಅವರ ವಿರುದ್ಧ ಕಣಕ್ಕಿಳಿಯುವ ಆಸಕ್ತಿಯನ್ನು ವಿಜಯೇಂದ್ರ ತೋರಿದ್ದರು. ಆಗ ಬಿಜೆಪಿ ವಿಪಕ್ಷದಲ್ಲಿತ್ತು. ಈಗ ಪರಿಸ್ಥಿತಿ ಭಿನ್ನವಾಗಿದೆ. ಸಿªದರಾಮಯ್ಯ ವಿರುದ್ಧ ಸ್ಪರ್ಧಿಸಬೇಕೆಂದು ಸ್ವಕ್ಷೇತ್ರ ಶಿಕಾರಿಪುರ ಬಿಟ್ಟು ವರುಣಾಗೆ ಏಕೆ ಬರಬೇಕು? ಮಾಸ್ ಲೀಡರ್ ಆಗಿರುವ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ವಿಜಯೇಂದ್ರ ಅವರೇ ಏಕೆ ಗುರಾಣಿ ಆಗಬೇಕು? ಪಕ್ಷದಲ್ಲಿ ಅನೇಕ ಹಿರಿಯ ನಾಯಕರು, ಸಚಿವರು ತಮ್ಮ ಸುರಕ್ಷಿತ ಕ್ಷೇತ್ರ ಬಿಟ್ಟು ಬರದಿದ್ದಾಗ ವಿಜಯೇಂದ್ರ ಅವರ ವಿಚಾರದಲ್ಲಿಯೇ ಏಕೆ ಹೈಕಮಾಂಡ್ ಈ ಧೋರಣೆ ತಳೆದಿದೆ? ಸಿದ್ದರಾಮಯ್ಯ ವಿರುದ್ಧ ನಿಂತು ವಿಜಯೇಂದ್ರ ಅವರೇಕೆ ಬಲಿಪಶುವಾಗಬೇಕು? ಎಂಬ ಪ್ರಶ್ನೆಗಳು ವಿಜಯೇಂದ್ರ ಅವರ ಬೆಂಬಲಿಗರನ್ನು ಕಾಡಿದೆ.
ವಿಜಯೇಂದ್ರ ವರುಣದಲ್ಲಿ ಕಣಕ್ಕಿಳಿದರೆ ಶಿಕಾರಿಪುರದಲ್ಲೂ ಅವರ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್ ಅವಕಾಶ ಕಲ್ಪಿಸುತ್ತದೆಯೇ? ಆಗ ಅವಕಾಶ ಕಲ್ಪಿಸಿದರೆ ಬಿಜೆಪಿಯ ಇನ್ನೂ ಕೆಲವು ಹಿರಿಯ ನಾಯಕರು ಇಂಥದ್ದೇ ಅವಕಾಶಕ್ಕೆ ಬೇಡಿಕೆ ಮುಂದಿಡಬಹುದು.
ಒಟ್ಟಿನಲ್ಲಿ ವಿಜಯೇಂದ್ರ ಅವರ ವರುಣ ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ತಳೆಯುವ ನಿಲುವು ಕುತೂಹಲ ಮೂಡಿಸಿದೆ.
ಹೈಕಮಾಂಡ್ ನಿರ್ಧಾರ ಅಂತಿಮ
ವರುಣ ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆ ಕುರಿತು ಹೈಕಮಾಂಡ್ ನಿಲುವಿಗೆ ಬದ್ಧರಾಗಿರುವುದಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಬೆಂಬಲಿಗರ ಬಳಿ ಹೇಳಿಕೊಂಡಿದ್ದಾರೆ. ವರುಣ ಸ್ಪರ್ಧೆ ಕುರಿತು ವಿಜಯೇಂದ್ರ ವರುಣ ಕ್ಷೇತ್ರದ ತಮ್ಮ ಬೆಂಬಲಿಗರ ಜತೆ ಮಾತುಕತೆ ನಡೆಸಿದ್ದಾರೆ. ವರುಣದಲ್ಲಿ ಸ್ಪರ್ಧಿಸುವ ಆಸಕ್ತಿ ತಮಗಿಲ್ಲ. ಆದರೆ ಹೈಕಮಾಂಡ್ ತಮ್ಮ ಸ್ಪರ್ಧೆ ವಿಚಾರದಲ್ಲಿ ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದು ವಿಜಯೇಂದ್ರ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.
– ಕೂಡ್ಲಿ ಗುರುರಾಜ