ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ತಪ್ಪಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ವಿಲ್ಲ, ವಿಜಯೇಂದ್ರನಿಗೆ ಭವಿಷ್ಯದಲ್ಲಿ ದೊಡ್ಡ ಅವಕಾಶ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ .ಯಡಿಯೂರಪ್ಪ ಬುಧವಾರ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ವಿಜಯೇಂದ್ರಗೆ ಮುಂದೆ ಬೇರೆ ಬೇರೆ ಅವಕಾಶ ಗಳು ಇದ್ದಾವೆ. ಇವಾಗ ಬಿಜೆಪಿ ಉಪಾಧ್ಯಕ್ಷ ರಾಗಿದ್ದಾರೆ. ಮುಂದೆ ಅವಕಾಶ ಗಳನ್ನು ಹೈಕಮಾಂಡ್ ಮಾಡಿಕೊಡುತ್ತದೆ ಎಂದರು.
ಮುಂದಿನ ಚುನಾವಣೆ ವಿಜಯೇಂದ್ರ ಸ್ಪರ್ಧೆ ಬಗ್ಗೆ ಪ್ರಶ್ನಿಸಿದಾಗ, ಆ ಬಗ್ಗೆ ಇವಾಗಲೇ ಯಾಕೇ ಚರ್ಚೆ.ಸಂದರ್ಭ ಬಂದಾಗ ನೋಡೋಣ ಎಂದರು.
ಟಿಕೆಟ್ ತಪ್ಪಿಸಿದ್ದರಲ್ಲಿ ಬಿ.ಎಲ್.ಸಂತೋಷ್ ಅವರ ಪಾತ್ರ ಇದೆಯೇ ಎಂದು ಕೇಳಿದಾಗ, ಅದಕ್ಕೇನೂ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ಅನಗತ್ಯ ಸುದ್ದಿ ಹಬ್ಬಿಸಲಾಗಿದೆ.
Related Articles
ಪ್ರಧಾನಿ ನರೇಂದ್ರ ಮೋದಿ, ನಡ್ಡಾ ಅವರ ನೇತೃತ್ವದಲ್ಲಿ ಶೀಘ್ರದಲ್ಲಿ ಪಕ್ಷದಲ್ಲಿ ಕೆಲವು ಮಾರ್ಪಾಡುಗಳಾಗುವ ವಿಶ್ವಾಸವಿದೆ ಎಂದರು.