Advertisement
ಹಾಗಾಗಿಯೇ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಪ್ರವೇಶಿಸಿದ್ದಾರೆ. ಮುಂಬರುವ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಕೇಸರಿ ಧ್ವಜ ಹಾರಿಸಲು ರಣಕಹಳೆ ಮೊಳಗಿಸಿದರು. ಇದು ಬಿಜೆಪಿ ಕಾರ್ಯಕರ್ತ ರಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿದೆ.
Related Articles
Advertisement
ಮಂಡ್ಯದ ಮೇಲೆ ಇಷ್ಟೊಂದು ಕಣ್ಣಿಟ್ಟಿರುವುದರಿಂದಲೇ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಉಸ್ತುವಾರಿ ಯಾಗಿ ನಿಯೋಜಿಸಲಾಗಿತ್ತು. ಆದರೆ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾದ್ದರಿಂದ ಆ ಪ್ರಯೋಗ ಫಲ ಕೂಡಲಿಲ್ಲ. ಈಗ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿದ್ದಾರೆ ಬಿಜೆಪಿ ಹೈಕಮಾಂಡ್.
ಕೆ.ಆರ್.ಪೇಟೆಯಂತೆ ಜಿಲ್ಲೆ ಗೆಲ್ಲಲು ರಣತಂತ್ರ: 2020ರ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ವಿಜಯೇಂದ್ರ ಅವರ ಮಾಸ್ಟರ್ ಪ್ಲ್ಯಾನ್ ಅನ್ನೇ ಜಿಲ್ಲೆಗೆ ವಿಸ್ತರಿಸಲು ಸಜಾjಗಿದ್ದಾರೆನ್ನಲಾಗಿದೆ. ಅದರಂತೆ ಮಂಗಳವಾರ ಮಂಡ್ಯಕ್ಕೆ ಆಗಮಿಸಿದ ಸಂದ ರ್ಭ ದಲ್ಲಿಯೂ ಮಂಡ್ಯ ಚುನಾವಣೆ ಉಸ್ತುವಾರಿ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದು ವಿಜಯೇಂದ್ರ ಹೇಳಿದ್ದರು.
ಹೈಕಮಾಂಡ್ ಸೂಚಿಸಿದರೆ ಮಂಡ್ಯದಲ್ಲೂ ಸ್ಪರ್ಧೆ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿಜಯೇಂದ್ರ ಮಂಡ್ಯದಲ್ಲಿ ಮನೆ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬುಧವಾರ ನೀಡಿರುವ ಹೇಳಿಕೆ ಸಾಕ್ಷೀಕರಿಸುವಂತಿದೆ. ನನಗೆ ಮಂಡ್ಯ, ವರುಣಾ, ಶಿಕಾರಿಪುರ ಕ್ಷೇತ್ರ ಅಂತಾ ಏನೂ ಇಲ್ಲ. ಹೈಕಮಾಂಡ್ ಸೂಚಿಸಿದರೆ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವೆ. ಮಂಡ್ಯದಲ್ಲಿ ಮನೆ ಮಾಡುವುದು ಮುಖ್ಯವಲ್ಲ. ಜಿಲ್ಲೆಯ ಜನರ ಮನಸ್ಸಿನಲ್ಲಿ ಮನೆ ಮಾಡಿದರೆ ಅಷ್ಟೇ ಸಾಕು ಎಂದು ಹೇಳಿದ್ದಾರೆ.
-ಎಚ್.ಶಿವರಾಜು