Advertisement

ಸರ್ಕಾರದ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಇಲ್ಲ: ಎಸ್.ಟಿ ಸೋಮಶೇಖರ್ ಸ್ಪಷ್ಟನೆ

12:04 PM Apr 05, 2021 | Team Udayavani |

ಮೈಸೂರು: ಸರ್ಕಾರದ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಇಲ್ಲ. ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ಕಿಡಿಕಾರಿದ್ದಾರೆ.

Advertisement

ವಿಜಯೇಂದ್ರ ವಿರುದ್ದ ಕಾಂಗ್ರೆಸ್ ಶಾಸಕರ ಆರೋಪ ವಿಚಾರವಾಗಿ ಮಾತನಾಡಿದ ಅವರು. ಮೈಸೂರು ಉಸ್ತುವಾರಿಯಾಗಿ ಸಿಎಂ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಎರಡು ವರ್ಷದ ಅವಧಿಯಲ್ಲಿ ಇಲ್ಲದ ಹಸ್ತಕ್ಷೇಪ ಈಗ ಬಂತಾ? ಮುಖ್ಯಮಂತ್ರಿಗಳು ರಬ್ಬರ್ ಸ್ಟ್ಯಾಂಪ್ ಅಲ್ಲ. ಅವರಿಗೆ 45 ವರ್ಷಗಳ ರಾಜಕೀಯ ಅನುಭವ ಇದೆ.

ಯಾವ್ಯಾವ ಮುಖ್ಯಮಂತ್ರಿಗಳ ಕುಟುಂಬದವರು ಏನು ಮಾಡಿದ್ರು ಎಂಬುದು ಜನರಿಗೆ ಗೊತ್ತಿದೆ. ಈವರೆಗೂ ನನ್ನ ಅವಧಿಯಲ್ಲಿ ಎಂದೂ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಕೋವಿಡ್ 19 ಸೋಂಕು ದೃಢ; ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಸ್ಪತ್ರೆಗೆ ದಾಖಲು

ಮಂತ್ರಿಗಳು,  ಶಾಸಕರಿಗೆ ಸ್ಪಂದಿಸದಿದ್ದರೆ ಸಿಎಂ ಮಧ್ಯಪ್ರವೇಶ ಮಾಡ್ತಾರೆ. ಅದು ಸಿಎಂ ಅವರ ಪರಮಾಧಿಕಾರ. ಮಂತ್ರಿಗಳು ತಕ್ಷಣ ಸ್ಪಂದಿಸಿದ್ರೆ ಸಿಎಂಗೆ ಯಾರು ದೂರು ಕೊಡೋದಿಲ್ಲ. ನಾನು ಸಹಕಾರಿ ಸಚಿವನಾಗಿದ್ದೇನೆ. ನಾನು ಸಹಕಾರಿಗಳಿಗೆ, ಶಾಸಕರಿಗೆ ಸ್ಪಂದಿಸೋದು ನನ್ನ ಕೆಲಸ. ನಾನು ಸ್ಪಂದಿಸದಿದ್ದರೆ ಸಿಎಂ ಮಧ್ಯ ಪ್ರವೇಶ ಮಾಡ್ತಾರೆ ಎಂದು ಈಶ್ವರಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಟಿ.ಸೋಮಶೇಖರ್ ಮಾರ್ಮಿಕ ಉತ್ತರ ನೀಡಿದರು.

Advertisement

ಈಶ್ಚರಪ್ಪ ಪ್ರಕರಣ ಅಂತಲ್ಲ, ಎಲ್ಲ ಸಚಿವರ ವಿಷಯದಲ್ಲೂ ಇದೆ ಆಗುವುದು. ಯಾವ ಮಂತ್ರಿಯೇ ಆಗಲಿ ಅವರ ಕೆಲಸ ಮಾಡಬೇಕು. ಮಂತ್ರಿಗಳು ಸ್ಪಂದಿಸದಿದ್ದರೆ ಸಿಎಂ ಮಧ್ಯ ಪ್ರವೇಶ ಮಾಡುವುದರಲ್ಲಿ ತಪ್ಪೇನಿಲ್ಲ. ಸಾರ್ವಜನಿಕರು, ಶಾಸಕರು ಯಾವ ಇಲಾಖೆ ಮೇಲೆ ಹೆಚ್ಚು ದೂರು ಕೊಡ್ತಾರೆ ಆಗ ಸಿಎಂ ಮಧ್ಯಪ್ರವೇಶ ಮಾಡುತ್ತಾರೆ.

ಈಶ್ವರಪ್ಪ ಪ್ರಕರಣದಲ್ಲಿ ಕೆಲವು ಶಾಸಕರು ದೂರು ನೀಡಿದ್ದಾರೆ. ನೀವು ಹಣ ಬಿಡುಗಡೆ ಮಾಡಿದರು ಆರ್‌ಡಿಪಿಆರ್ ಬಿಡುಗಡೆ ಮಾಡ್ತಿಲ್ಲ ಅಂತ ದೂರಿದ್ದಾರೆ. ಅದಕ್ಕೆ ಸಿಎಂ ಮಧ್ಯಪ್ರವೇಶ ಮಾಡಿದ್ದಾರೆ. ಇದರಲ್ಲಿ ತಪ್ಪೆನಿಲ್ಲ ಎಂದು ಸಿಎಂ ಯಡಿಯೂರಪ್ಪರವರನ್ನು  ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡರು.

ಇದನ್ನೂ ಓದಿ:  ಕರುಣೆ ತೋರೋಣ : ಸುಡು ಬಿಸಿಲಿಗೆ ನಿತ್ರಾಣಗೊಂಡಿದೆ ಮೂಕ ಪ್ರಾಣಿ- ಪಕ್ಷಿ ಸಂಕುಲ

Advertisement

Udayavani is now on Telegram. Click here to join our channel and stay updated with the latest news.

Next