Advertisement
ಸಿಎಂ ಬಿ.ಎಸ್.ವೈ. ಪುತ್ರ ವಿಜಯೇಂದ್ರ, ಸಂಸದೆ ಶೋಭಾ ಕರಂದ್ಲಾಜೆ ಉಪಾಧ್ಯಕ್ಷ ಸ್ಥಾನಕ್ಕೆ ಭಡ್ತಿ ಹೊಂದಿದ್ದಾರೆ.
Related Articles
ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾದ ಅಶೋಕ್ ಗಸ್ತಿ ಅವರನ್ನು ಹಿಂದುಳಿದ ವರ್ಗಗಳ ಮೋರ್ಚಾ ಮತ್ತು ಈರಣ್ಣ ಕಡಾಡಿ ಅವರನ್ನು ರೈತ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಹಿಂದುಳಿದ ಸಮುದಾಯಗಳಿಗೆ ಒತ್ತು ನೀಡುವ ಜತೆಗೆ ಸಂಘಟನೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹೆಚ್ಚುವರಿ ಜವಾಬ್ದಾರಿ ನೀಡಿದಂತಾಗಿದೆ.
Advertisement
ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದ ಡಾ| ಸಂದೀಪ್ ಅವರು ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡು ಭಡ್ತಿ ಪಡೆದಿದ್ದಾರೆ. ಹಾಗೆಯೇ ಕಾಂಗ್ರೆಸ್‌ನಿಂದ ಬಂದರೂ ಪಕ್ಷ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದ ಚಲವಾದಿ ನಾರಾಯಣಸ್ವಾಮಿ ಅವರಿಗೆ ಎಸ್.ಸಿ. ಮೋರ್ಚಾ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಒಟ್ಟಾರೆ ಸಂಘಟನೆ, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ತೆರೆಮರೆಯಲ್ಲೇ ಇದ್ದವರನ್ನು ಗುರುತಿಸಿ ಅನುಭವ, ಸಾಮರ್ಥ್ಯಕ್ಕೆ ತಕ್ಕ ಜವಾಬ್ದಾರಿ ನೀಡಲಾಗಿದೆ. ಹಾಗೆಯೇ ರಾಜ್ಯಾದ್ಯಂತ ಪಕ್ಷವನ್ನು ಇನ್ನಷ್ಟು ಬಲಪಡಿಸಲು, ಜಿಲ್ಲೆಗಳಲ್ಲೂ ಪಕ್ಷವನ್ನು ಸದೃಢವಾಗಿ ಕಟ್ಟಲು, ಸಾಮಾಜಿಕ ನ್ಯಾಯ ಪಾಲನೆಗೂ ಒತ್ತು ನೀಡಲಾಗಿದೆ ಎಂಬ ಮಾತು ಪಕ್ಷದಲ್ಲಿ ಕೇಳಿಬಂದಿದೆ.
ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ವಿವರರಾಜ್ಯ ಉಪಾಧ್ಯಕ್ಷರು: ಅರವಿಂದ ಲಿಂಬಾವಳಿ, ನಿರ್ಮಲ್ ಕುಮಾರ್ ಸುರಾನ, ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್, ತೇಜಸ್ವಿನಿ ಅನಂತ ಕುಮಾರ್, ಪ್ರತಾಪಸಿಂಹ, ಎಂ.ಬಿ. ನಂದೀಶ್, ಬಿ.ವೈ. ವಿಜಯೇಂದ್ರ, ಎಂ. ಶಂಕರಪ್ಪ, ಎಂ. ರಾಜೇಂದ್ರ. ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ಎನ್. ರವಿಕುಮಾರ್, ಸಿದ್ದರಾಜು, ಅಶ್ವತ್ಥ ನಾರಾಯಣ, ಮಹೇಶ್ ಟೆಂಗಿನಕಾಯಿ. ರಾಜ್ಯ ಕಾರ್ಯದರ್ಶಿಗಳು: ಸತೀಶ್ ರೆಡ್ಡಿ, ತುಳಸಿ ಮುನಿರಾಜುಗೌಡ, ಎಸ್. ಕೇಶವ ಪ್ರಸಾದ್, ಜಗದೀಶ್ ಹಿರೇಮನಿ, ಸುಧಾ ಜಯರುದ್ರೇಶ್, ಭಾರತಿ ಮಗ್ದುಂ, ಹೇಮಲತಾ ನಾಯಕ್, ಉಜ್ವಲಾ ಬಡವಣ್ಣಾಚೆ, ಕೆ.ಎಸ್. ನವೀನ್, ವಿನಯ್ ಬಿದರೆ. ರಾಜ್ಯ ಖಜಾಂಚಿ: ಸುಬ್ಬ ನರಸಿಂಹ, ಲೆಹರ್ ಸಿಂಗ್ ಸಿರೋಯಾ; ರಾಜ್ಯ ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್ ಅಂಬೇಕಲ್ಲು; ರಾಜ್ಯ ವಕ್ತಾರರು: ಕ್ಯಾ| ಗಣೇಶ್ ಕಾರ್ಣಿಕ್; ಪ್ರಕೋಷ್ಠಗಳ ಸಂಯೋಜಕರು: ಎಂ.ಬಿ. ಭಾನುಪ್ರಕಾಶ್, ಡಾ| ಎ.ಎಚ್. ಶಿವಯೋಗಿಸ್ವಾಮಿ
ಮೋರ್ಚಾ ಅಧ್ಯಕ್ಷರು
ಯುವ ಮೋರ್ಚಾ- ಡಾ| ಸಂದೀಪ್
ಮಹಿಳಾ ಮೋರ್ಚಾ- ಗೀತಾ ವಿವೇಕಾನಂದ
ರೈತ ಮೋರ್ಚಾ- ಈರಣ್ಣ ಕಡಾಡಿ
ಹಿಂದುಳಿದ ವರ್ಗಗಳ ಮೋರ್ಚಾ- ಅಶೋಕ್ ಗಸ್ತಿ
ಎಸ್.ಸಿ. ಮೋರ್ಚಾ- ಚಲವಾದಿ ನಾರಾಯಣಸ್ವಾಮಿ
ಎಸ್.ಟಿ. ಮೋರ್ಚಾ- ತಿಪ್ಪರಾಜು ಹವಾಲ್ದಾರ್
ಅಲ್ಪಸಂಖ್ಯಾಕರ ಮೋರ್ಚಾ- ಮುಜಾØಮಿಲ್ ಬಾಬು. 10 ಮಂದಿ ಉಪಾಧ್ಯಕ್ಷರು
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ ಉಪಾಧ್ಯಕ್ಷ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆೆ. ಜತೆಗೆ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಪ್ರತಾಪ ಸಿಂಹ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ವೈ. ವಿಜಯೇಂದ್ರ ಅವರು ಹೆಚ್ಚಿನ ಜವಾಬ್ದಾರಿಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ತೇಜಸ್ವಿನಿ ಅನಂತ ಕುಮಾರ್, ನಿರ್ಮಲ್ ಕುಮಾರ್ ಸುರಾನ ಉಪಾಧ್ಯಕ್ಷರಾಗಿ ಮುಂದುವರಿದಿದ್ದು, ಒಟ್ಟು 10 ಮಂದಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.