Advertisement

ಕನಸುಗಳ ಸಾಕಾರಕ್ಕೆ ಶ್ರಮಿಸಿ: ಡಾ|ಸಬಿಹಾ

05:21 PM May 04, 2019 | Naveen |

ವಿಜಯಪುರ: ವಿದ್ಯಾರ್ಥಿನಿಯರು ಕನಸುಗಾರ ರಾಗಿರಬೇಕು. ಕಂಡ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಪರಿಶ್ರಮದಿಂದ ಗುರಿ ಸಾಧನೆಗೆ ಮುಂದಾಗಬೇಕು. ಇದಕ್ಕಾಗಿ ದಿಟ್ಟ ಹೆಜ್ಜೆಯನ್ನಿಡಲು ಇಂದಿನಿಂದಲೇ ಸನ್ನದ್ಧರಾಗಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ|ಸಬಿಹಾ ಸಲಹೆ ನೀಡಿದರು.

Advertisement

ಶುಕ್ರವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇತಿಹಾಸ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಇತಿಹಾಸ ಕ್ಲಬ್‌ಗ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸಕ್ತ ಸಂದರ್ಭದಲ್ಲಿ ಮಕ್ಕಳಲ್ಲಿ ನವೀನ ಕೌಶಲ್ಯಗಳು ಮನೆ ಮಾಡಬೇಕು. ಪಠ್ಯೇತರ ಹಾಗೂ ಪಠ್ಯಪೂರಕ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯದ ಓದು, ಬರಹದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಸಕಾರಾತ್ಮಕ ಚಿಂತನೆಗೆ ನಮ್ಮ ಚೈತನ್ಯ ಉದ್ದೀಪನಗೊಳ್ಳಲು ಸಹಕಾರಿ ಅಗಲಿದೆ ಎಂದರು.

ನಾವು ಸಣ್ಣ ಮನಸ್ಸಿನವರಾಗದೇ, ನಮ್ಮಲ್ಲಿನ ಕುಬ್ಜ ವಿಚಾರಗಳನ್ನು ಬಿಟ್ಟು ಜಗತ್ತಿನ ಆಗು ಹೋಗುಗಳ ಕಡೆಗೆ ಗಮನ ಕೊಟ್ಟು ನಮ್ಮ ಜ್ಞಾನವನ್ನು ಇಮ್ಮಡಿಗೊಳಿಸಿಕೊಳ್ಳಬೇಕು. ಪ್ರಮುಖ ವ್ಯಕ್ತಿಗಳ ಸಂದರ್ಶನ, ಹೊಸದಾದ ವಿಚಾರಗಳನ್ನು ಕರಗñ ‌ಮಾಡಿಕೊಂಡು ಬುದ್ಧಿಮತ್ತೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಸಮಾಜ ವಿಜ್ಞಾನ ನಿಕಾಯದ ಡೀನ್‌ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ, ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ನವೀನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಕಲಿಕೆ ಮಟ್ಟ ಹೆಚ್ಚಾದಂತೆ ನಮ್ಮ ಅಭಿವೃದ್ಧಿ ಹೆಚ್ಚುತ್ತದೆ ಎಂದು ಹೇಳಿದರು.

Advertisement

ಇತಿಹಾಸ ವಿಭಾಗದ ಉಪನ್ಯಾಸಕ ಡಾ| ಆನಂದ ಕುಲಕರ್ಣಿ ನಿರೂಪಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಡಾ| ಎಂ.ಎಸ್‌. ಮುಜಾವರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next