Advertisement

ಪತ್ರಿಕೋದ್ಯಮದಲ್ಲಿವೆ ವಿಫ‌ುಲ ಅವಕಾಶ

03:07 PM Sep 25, 2019 | Naveen |

ವಿಜಯಪುರ: ಸ್ವಾತಂತ್ರ್ಯ ಪೂರ್ವದಲ್ಲೇ ಪತ್ರಿಕೋದ್ಯಮದಲ್ಲಿ ಪ್ರವೇಶ ಪಡೆದಿರುವ ಭಾರತೀಯ ಮಹಿಳೆಯರು, ಆಧುನಿಕ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ. ಪುರುಷರಿಗೆ ಸಮನಾಗಿ ಸ್ಪರ್ಧೆಯೊಡುತ್ತಿರುವುದು
ಪತ್ರಿಕೋದ್ಯಮದಲ್ಲಿ ಮಹಿಳೆಯ ಗಟ್ಟಿ ನೆಲೆಗೆ ಸಾಕ್ಷಿ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್‌.ಎನ್‌. ಸಿದ್ದರಾಮಪ್ಪ ಅಭಿಪ್ರಾಯಪಟ್ಟರು.

Advertisement

ಮಂಗಳವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಕೌಶಲ್ಯಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ಮಾಧ್ಯಮಗಳು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ ಎಂದರು. ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿಗೊಳಿಸಲು ಇಂತಹ ಕಾರ್ಯಾಗಾರ ಸಹಕಾರಿ ಆಗಲಿದ್ದು, ಯಾವುದೇ ಹುದ್ದೆಯನ್ನು ಸಾಮರ್ಥ್ಯದ ಆಧಾರದ ಮೇಲೆ ನೀಡಿದ್ದೇ ಆದಲ್ಲಿ ಮಹಿಳೆಯರು ಹಲವಾರು ಉನ್ನತ ರಂಗಗಳಲ್ಲಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಲ್ಲರು. ಮಹಿಳೆಯರು ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸುವ ಜೊತೆಗೆ ಸ್ಪರ್ಧಾತ್ಮಕ ಕ್ಷೇತ್ರವಾದ ಮಾಧ್ಯಮ ರಂಗದಲ್ಲಿಯೂ ಯಶಸ್ಸು ಕಾಣುತ್ತಿರುವುದು ಹೆಮ್ಮೆಯ ವಿಚಾರ. ಆಧುನಿಕ ಮಾಧ್ಯಮಗಳು ಬಹುಬೇಗ ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ನೀಡುವಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿವೆ ಎಂದು ಹೇಳಿದರು.

ಗ್ರಾಫಿಕ್‌ ಡಿಸೈನಿಂಗ್‌ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ “ಕನ್ನಡ ಪ್ರಭ’ ಪ್ರಧಾನ ಸಂಪಾದಕ ರವಿ ಹೆಗ ಡೆ, ಆಧುನಿಕ ಮಾಧ್ಯಮ ಲೋಕದಲ್ಲಿ ಪತ್ರಕರ್ತೆಯರ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆ ಸಂತಸದ ಸಂಗತಿ. ಆದರೆ ಎಲ್ಲ ರಂಗಳಲ್ಲಿ ಇರುವಂತೆ ಪತ್ರಿಕೆಯ ಕೆಲಸದ ಸ್ಥಳದಲ್ಲಿ ಕೂಡ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ, ಅಷ್ಟೆ ಹೆಚ್ಚುತ್ತಿದೆ
ಎಂಬುದು ವಿಷಾದನೀಯ ಎಂದರು.

ಮಹಿಳೆಯರು ಮಾಧ್ಯಮ ಕೌಶಲ್ಯಗಳಾದ ಗ್ರಾಫಿಕ್‌ ಡಿಸೈನ್‌ ಮತ್ತು ಆಧುನಿಕ ಮಾಧ್ಯಮ ತಂತ್ರಜ್ಞಾನಗಳ ಕುರಿತು ಪ್ರಾಯೋಗಿಕ ಜ್ಞಾನ ಹಾಗೂ ವೃತ್ತಿ ಕೌಶಲ್ಯತೆಯೊಂದಿಗೆ ಮಾಧ್ಯಮ
ಕ್ಷೇತ್ರ ಪ್ರವೇಶಿಸುವರಿಗೆ ಉತ್ತಮ ಉದ್ಯೋಗ ಅವಕಾಶಗಳಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಆಯುಕ್ತ ಎಸ್‌.ಎನ್‌. ಸಿದ್ದರಾಮಪ್ಪ ಹಾಗೂ “ಕನ್ನಡ ಪ್ರಭ’ ಪ್ರಧಾನ ಸಂಪಾ ದಕ ರವಿ ಹೆಗಡೆ ಅವರನ್ನು ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.

Advertisement

ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ಹಾಗೂ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಸ್ವಾಗತಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ| ತಹಮೀನಾ ಕೋಲಾರ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಸುವರ್ಣಾ ಕಂಬಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next