Advertisement

ವಿಶ್ವ ಸ್ಮಾರಕ ಸಂರಕ್ಷ ಣೆ ನಿಧಿಗೆ ಜಲಸುರಂಗ

12:06 PM Oct 31, 2019 | Naveen |

ಜಿ.ಎಸ್‌. ಕಮತರ
ವಿಜಯಪುರ:
ಅಮೆರಿಕ ಮೂಲದ ವರ್ಲ್ಡ್ ಮೋನುಮೆಂಟ್‌ ವಾಚ್‌ ಸಂಸ್ಥೆ ಪ್ರಕಟಿಸಿದ ಅತಿ ಜರೂರು ಸಂರಕ್ಷಣೆಯ ಅಗತ್ಯ ಇರುವ ವಿಶ್ವದ 25 ಸ್ಮಾರಕಗಳ ಪಟ್ಟಿಯಲ್ಲಿ ದುಸ್ಥಿತಿಯಲ್ಲಿರುವ ವಿಜಯಪುರ ಆದಿಲ್‌ ಶಾಹಿಗಳ ಪಾರಂಪರಿಕ ಜಲ ಸಂರಕ್ಷಣೆ-ಜಲಸುರಂಗ ತಂತ್ರಜ್ಞಾನ ಮಾರ್ಗವೂ ಸೇರಿದೆ. ಅ. 29ರಂದು ಸದರಿ ಸಂಸ್ಥೆ ಪ್ರಕಟಿಸಿದ ದ್ವೈ ವಾರ್ಷಿಕ ಪಟ್ಟಿಯಲ್ಲಿ ಭಾರತದ ಎರಡು ಪಾರಂಪರಿಕ ಸ್ಮಾರಕಗಳು ಸಂರಕ್ಷಣೆ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Advertisement

ವಿಜಯಪುರ ಆದಿಲ್‌ ಶಾಹಿಗಳಿಂದ ನಿರ್ಮಿತ ಜಲ ಸಂರಕ್ಷಣೆ ವಿಭಿನ್ನ ಹಾಗೂ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿದೆ. ಆದರೆ ಪಾರಂಪರಿಕ ಈ ಜಲ ಸಂರಕ್ಷಣೆ ಸ್ಮಾರಕಗಳು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದು, ತುರ್ತು ಸಂರಕ್ಷಣೆ ಅಗತ್ಯ ಇದೆ ಎಂಬುದನ್ನು ವರ್ಲ್ಡ್ ಮೋನುಮೆಂಟ್‌ ವಾಚ್‌ ಸಂಸ್ಥೆ ಮನಗಂಡಿದೆ.

ವಿಶ್ವದಲ್ಲಿ ಅತ್ಯಂತ ಅಪಾಯಕರ ಸ್ಥಿತಿಯಲ್ಲಿರುವ ಸಾಂಸ್ಕೃತಿಕತೆ ಹೊಂದಿರುವ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗೆ ಸಮುದಾಯಗಳ ಸಹಭಾಗಿತ್ವದಲ್ಲಿ ಜನಜಾಗೃತಿ ಮೂಡಿಸುವ ಜೊತೆಗೆ ಅಯಾ ದೇಶಗಳ ಸರ್ಕಾರಗಳೊಂದಿಗೆ ಸಹಭಾಗಿತ್ವದಲ್ಲಿ ಸ್ಮಾರಕರಳ ಸಂರಕ್ಷಣೆಗೂ ಆದ್ಯತೆ ನೀಡುತ್ತದೆ. ಸದರಿ ಸಂಸ್ಥೆ ಇಂಥ ಸ್ಮಾರಕಗಳ ಸಂರಕ್ಷಣೆಗೆ ಆಮೆರಿಕೆಯ 2,500 ಸಾವಿರ ಡಾಲರ್‌ (50 ಕೋಟಿ ರೂ.) ನೆರವು ನೀಡುವ ಜೊತೆಗೆ ಅಗತ್ಯಕ್ಕೆ ತಕ್ಕಂತೆ ಯೋಜನೆಯ ಆರ್ಥಿಕ ಸ್ಥಿತಿ ಬೇಡಿಕೆಗೆ ತಕ್ಕಂತೆ ಅನುದಾನ ಹೆಚ್ಚಿಸಿ ಬಿಡುಗಡೆ ಮಾಡುತ್ತದೆ.

ಪ್ರತಿ ಎರಡು ವರ್ಷಕ್ಕೆ ಒಮ್ಮೆ ಜಗತ್ತಿನಲ್ಲಿ ಅತ್ಯಂತ ಅಪಾಯಕರ ಸ್ಥಿತಿಯಲ್ಲಿರುವ ಪಾರಂಪರಿಕ ಹಾಗೂ ಅಪರೂಪದ ಸಾಂಸ್ಕೃತಿಕ ಹಿರಿಮೆಗಳನ್ನು ತುರ್ತು ಸಂರಕ್ಷಿಸುವ ಕುರಿತು ಪಟ್ಟಿ ಮಾಡಿ ಪ್ರಕಟಿಸುತ್ತದೆ. ಈ ಬಾರಿ ಅಕ್ಟೋಬರ್‌ 29ರಂದು ಪ್ರಕಟಿಸಿದ 2020ರ ದ್ವೈ ವಾರ್ಷಿಕ ಸಂರಕ್ಷಣೆ ಅಗತ್ಯದ 25 ಪಟ್ಟಿಯಲ್ಲಿ ದುಸ್ಥಿತಿಯಲ್ಲಿರುವ ವಿಜಯಪುರ ಆದಿಲ್‌ ಶಾಹಿ ಅರಸರ ಜಲ ಸಂರಕ್ಷಣೆ ತಂತ್ರಜ್ಞಾನ ಸಂರಕ್ಷಣೆಗೆ ಪಟ್ಟಿಗೆ ಆಯ್ಕೆಯಾಗಿದೆ.

ಫ‌ಲ ನೀಡಿದ ಯುಕವರ ಪ್ರಯತ್ನ : ವಲ್ರ್ಡ ಮೋನುಮೆಂಟ್‌ ವಾಚ್‌ ಸಂಸ್ಥೆ ಪ್ರತಿ ವರ್ಷ ಜಗತ್ತಿನಲ್ಲಿ ತುರ್ತು ಸಂರಕ್ಷಣೆ ಅಗತ್ಯ ಇರುವ ಪಾರಂಪರಿಕ ಸಂಗತಿಗಳ ಕುರಿತು ಅರ್ಜಿ ಅಹ್ವಾನಿಸುತ್ತದೆ. ಈ ಬಾರಿ 2019 ಮಾರ್ಚ್‌ ತಿಂಗಳಲ್ಲಿ ಅರ್ಜಿ ಅಹ್ವಾನಿಸಿದಾಗ ವಿಜಯಪುರ ಯುವಕರ ಗುಂಪೊಂದು ಸದರಿ ಸಂಸ್ಥೆಯ ಮಾರ್ಗಸೂಚಿಗಳಂತೆ ಅಗತ್ಯ ದಾಖಲೆಗಳ ಸಮೇತ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದು, ಯುಕವರ ಪಾರಂಪರಿಕ ಕಾಳಜಿಗೆ ಪ್ರಶಂಸೆ ವ್ಯಕ್ತವಾಗಿದೆ.

Advertisement

ಕಳೆದ ವರ್ಷ ಇಲ್ಲಿನ ದುಸ್ಥಿಯಲ್ಲಿರುವ ಪಾರಂಪರಿಕ ಸುರಂಗದ ಅಧ್ಯಯನಕ್ಕಾಗಿ ದೇಶ-ವಿದೇಶಿ ಜಲ-ವಾಸ್ತು ತಜ್ಞರು, ಸಂಶೋಧಕರು, ಆಸಕ್ತ ಪ್ರವಾಸಿಗರು ಭೇಟಿ ನೀಡಿದ್ದರು. ವಿಜಯಪುರ ನಗರದಲ್ಲಿ ಆದಿಲ್‌ ಶಾಹಿ ಅರಸರು 6-7 ಶತಮಾನದ ಹಿಂದೆಯೇ ವಿವಿಧ ವಿನ್ಯಾಸ, ವಿಶಿಷ್ಟತೆಯ ತಂತ್ರಜ್ಞಾನದೊಂದಿಗೆ ಜಲ ಸಂರಕ್ಷಣೆಗೆ ಕೆರೆ, ಭಾವಿಗಳು, ಪರಸ್ಪರ ಸಂಪರ್ಕ, ಜಲಸುರಂಗದ ತಂತ್ರಜ್ಞಾನದ ವೈಭವ ಹಾಗೂ ಅದರ ದುಸ್ಥಿತಿ ಕಂಡು ಮರುಗಿದ್ದರು. ಇರಾನ್‌ ಮಾಜೀದ್‌ ಲೇಬಾ, ಕೇರಳದ ಗೋವಿಂದ ಕುಟ್ಟಿ ಸೇರಿದಂತೆ ಹಲವರು ಭೇಡಿ ನೀಡಿ ಅಧ್ಯಯನ ನಡೆಸಿದ್ದಾರೆ.

ಪರಂಪರೆಯ ಆಸ್ತಿಯೊಂದು ಹಾಳಾಗುವುದನ್ನು ಕಂಡು ಮರುಗಿದ್ದಾರೆ. ಸ್ಥಳೀಯರು ಹಾಗೂ ಸರ್ಕಾರಗಳ ನಿರ್ಲಕ್ಷ್ಯ ಕುರಿತು ಅಸಹ್ಯ ವ್ಯಕ್ತಪಡಿಸಿದ್ದರು.

ಪ್ರಿಯಾಂಕಾಸಿಂಗ್‌ ಸಲಹೆ: ಇವರಂತೆಯೇ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ವಿಷಯದಲ್ಲಿ ಅಧ್ಯಯನ ನಡೆಸುತ್ತಿರುವ ದೆಹಲಿ ಮೂಲದ ಪ್ರಿಯಾಂಕಾಸಿಂಗ್‌ ಜಲ ಸುರಂಗದ ಅಧ್ಯಯನಕ್ಕೆ ವಿಜಯಪುರಕ್ಕೂ ಬಂದಿದ್ದರು. ಜಿಲ್ಲೆಯ ಪಾರಂಪರಿಕ ಸ್ಮಾರಕ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಯುವಕರ ತಂಡವನ್ನು ಸಂಪರ್ಕಿಸಿ ಹಲವು ಸಲಹೆಗಳನ್ನು ನೀಡಿದ್ದರು.

ವಿಶ್ವದಲ್ಲಿ ದುಸ್ಥಿತಿಯಲ್ಲಿರುವ ಇಂಥ ಪಾರಂಪರಿಕ ಸಂಸ್ಕ್ರುತಿ ಸಂರಕ್ಷಣೆಗೆಂದೇ ಜಗತ್ತಿನಲ್ಲಿ ಹಲವು ಸಂಸ್ಥೆಗಳಿವೆ. ಅದರಲ್ಲಿ ಅಮೆರಿಕ ಮೂಲಕ ವರ್ಲ್ಡ್ ಮೋನುಮೆಂಟ್‌ ವಾಚ್‌ ಸಂಸ್ಥೆಯೂ ಒಂದು. ಈ ಸಂಸ್ಥೆಗೆ ನಿಮ್ಮ ನಗರಗಳ ಸ್ಮಾರಕಗಳ ಸಂರಕ್ಷಣೆಗೆ ಅರ್ಜಿ ಸಲ್ಲಿಸುವಂತೆ ಪಾರಂಪರಿಕ ಸ್ಮಾರಕ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಯುವಕರ ಪ್ರಮುಖರಾದ ಅಮಿತ್‌ ಹುದ್ದಾರ, ಹಮಝಾ ಮೆಹಬೂಬ್‌ ಮೆಹಬೂಬ್‌ ಅವರಿಗೆ ವರ್ಲ್ಡ್ಮೋ ನುಮೆಂಟ್‌ ವಾಚ್‌ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರು.

ಪ್ರಿಯಾಂಕಾಸಿಂಗ್‌ ಸಲಹೆ ಮೇರೆಗೆ ವಿಜಯಪುರ ಜಲ ಸುರಂಗ ಮಾತ್ರವಲ್ಲ, ಆದಿಲ್‌ ಶಾಹಿ ಅರಸರ ಪಾರಂಪರಿಕ ಜಲ ಸಂರಕ್ಷಣೆ ಕುರಿತು ಅಗತ್ಯ ದಾಖಲೆಗಳು, ಫೋಟೋಗಳೊಂದಿಗೆ ಕಳೆದ ಮಾರ್ಚ್‌ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು.

ಸಂರಕ್ಷಣೆ-ಜಾಗೃತಿ: ಸದರಿ ಸಂಸ್ಥೆ ತಾನು ಪ್ರಕಟಿಸಿದ ಸಂರಕ್ಷಣೆ ಆಗತ್ಯ ಇರುವ ಕ್ರಮಗಳನ್ನು ಕೈಗೊಳ್ಳುವ ಕುರಿತು ಆಯಾ ದೇಶಗಳ ಸರ್ಕಾರಗಳು, ಸ್ಥಾನಿಕ ಆಡಳಿತ ವ್ಯವಸ್ಥೆ ಜೊತೆ ಸಂಪರ್ಕ ಸಾಧಿಸುತ್ತದೆ. ನಂತರ ಸ್ಥಳೀಯರ ಸಹಭಾಗಿತ್ವದಲ್ಲಿ ಆಯಾ ದೇಶಗಳ ಸ್ಮಾರಕಗಳ ಸಂರಕ್ಷಣೆ ಕಾಯ್ದೆಗೆ ತಕ್ಕಂತೆ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತೆ ಪುನರುಜ್ಜೀವನಕ್ಕೆ ಮುಂದಾಗುತ್ತದೆ.

ಸಮುದಾಯ ಸಹಭಾಗಿತ್ವದಲ್ಲಿ ಸ್ಥಳೀಯರ ಸಹಯೋಗ ಪಡೆದು ಸಂರಕ್ಷಣೆ ಜೊತೆಗೆ ಇವುಗಳನ್ನು ಮುಂದಿನ ಪೀಳಿಗೆ ಕೊಂಡೊಯ್ಯುವ ಜವಾಬ್ದಾರಿಗಾಗಿ ಈ ಸ್ಮಾರಕಗಳ ನಮ್ಮ ಆಸ್ತಿ ಎಂದು ಜನಜಾಗೃತಿ ಮೂಲಕ ಮನವರಿಕೆ ಮಾಡಿಕೊಡುತ್ತದೆ.

ಸಂರಕ್ಷಿತ ಹಾಗೂ ಪುನರುಜ್ಜೀವನಗೊಂಡ ಈ ಪರಂಪರೆಗಳ ಕುರಿತು ವಿಶ್ವದ ಗಮನ ಸಳೆದು, ಪ್ರವಾಸಿಗರನ್ನು ಆಕರ್ಷಿಸುವಲ್ಲಿ ನೆರವು ನೀಡುತ್ತದೆ. ಸರ್ಕಾರಿ, ಖಾಸಗಿ ಸೇರಿದಂತೆ ಆಯಾ ಸರ್ಕಾರಗಳ ನಿಯಮಗಳಂತೆ ನಿರ್ವಹಣೆಗೆ ಕಾರ್ಯಕ್ರಮ ರೂಪಿಸುತ್ತದೆ.

ಇದರಿಂದ ಸ್ಥಾನಿಕ ಸ್ಮಾರಕ ವೀಕ್ಷಣೆಗೆ ಜಾಗತಿಕ ಮಟ್ಟದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ನೆರವಾಗುತ್ತದೆ. ಇದರ ಪರಿಣಾಮ ಸ್ಥಳೀಯರಿಗೆ ಉದ್ಯೋಗವಕಾಶಗಳು ಹೆಚ್ಚುವ ಜೊತೆಗೆ ಆರ್ಥಿಕ-ಸಾಮಾಜಿಕ ಸ್ಥಾನಮಾನ ಬಲವರ್ಧನೆಗೆ ಸಹಕಾರಿ ಆಗಲಿದೆ.

ಪಟೇಲ್‌ ಸ್ಟೇಡಿಯಂ ಕೂಡ ಪಟ್ಟಿಯಲ್ಲಿ: ಸ್ವತಂತ್ರ ಭಾರತದಲ್ಲಿ ನಿರ್ಮಾಣಗೊಂಡಿರುವ ಅಪರೂಪ ವಿನ್ಯಾಸದ ಬೃಹತ್‌ ಕ್ರೀಡಾಂಗಣ ಎಂಬ ಹಿರಿಮೆ ಗುಜರಾತ್‌ನ ಅಹ್ಮದಾಬಾದ್‌ ನಗರದಲ್ಲಿರುವ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಕ್ರೀಡಾಂಗಣಕ್ಕಿದೆ. ಸದರಿ ಕ್ರೀಡಾಂಗಣ ಐಕ್ಯ ಭಾರತದ ಪ್ರಗತಿಪರ ಚಿಂತನೆಗಳನ್ನು ಪ್ರಸ್ತುತ ಪಡಿಸುವ ಮಹತ್ವದ ತಾಣ ಎನಿಸಿದೆ.

1960ರಲ್ಲಿ ಕೋರಿಯಾದ ಚಾರ್ಲ್ಸ್‌, ಭಾರತದ ಮಹೇಂದ್ರ ರಾಜ್‌ ಎಂಬ ವಾಸ್ತು ವಿನ್ಯಾಸಕರಿಂದ ರೂಪುಗೊಂಡಿರುವ ಈ ಕ್ರೀಡಾಂಗಣ ಮುಂಬೈ ರಾಜ್ಯದಿಂದ ವಿಭಜನೆಗೊಂಡ ನಂತರದ ಗುಜರಾತ್‌ ರಾಜ್ಯದ ವಿಶಿಷ್ಟತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಲಾಗಿದೆ.

ಆದರೆ ಸ್ವಾತಂತ್ರ್ಯ ವೀರನೊಬ್ಬರನ ಹೆಸರಿನಲ್ಲಿ ಅಪರೂಪದ ವಾಸ್ತು ವಿನ್ಯಾಸದೊಂದಿಗೆ ರೂಪುಗೊಂಡಿರುವ ಈ ಸ್ಟೇಡಿಯಂ ಮೂಲ ಉದ್ದೇಶ ಈಡೇರಿಸುವಲ್ಲಿ ವಿಫ‌ಲವಾಗಿ ಅತಿಕ್ರಮಕ್ಕೊಳಗಾಗಿದೆ. 20ನೇ ಶತಮಾನದ ಆಧುನಿಕ ವಿನ್ಯಾಸದ ಅಪರೂಪದ ಈ ಸ್ಟೇಡಿಯಂ ಸಂರಕ್ಷಣೆ ಅಗತ್ಯವನ್ನು ಅಮೆರಿಕೆಯ ವರ್ಲ್ಡ್ ಮೋನುಮೆಂಟ್‌ ಸಂಸ್ಥೆ ಮನಗಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next