Advertisement
ಜಿಲ್ಲಾಡಳಿತ ಮತ್ತು ಜಿಪಂ ಸಂಯುಕ್ತಾಶ್ರಯದಲ್ಲಿ ಜಿಪಂ ಸಭಾಭವನದಲ್ಲಿ ನಡೆದ ಸಕಾಲ ಯೋಜನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ, ಸಾರ್ವಜನಿಕರ ಹಣ ಮತ್ತು ಸಮಯದ ಉಳಿತಾಯ, ಜವಾಬ್ದಾರಿ ಸೇವೆಗಳ ತ್ವರಿತ ವಿತರಣೆಗಾಗಿ ಸಕಾಲ ಯೋಜನೆಯನ್ನು ಜಾರಿ ಮಾಡಲಾಗಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಅದನ್ನು ನಮೂದಿಸಬೇಕು ಎಂದರು.
Related Articles
Advertisement
ಇದೇ ಮೊದಲ ಬಾರಿಗೆ ಜನಗಣತಿಯಲ್ಲಿ ಮೊಬೈಲ್ ಆ್ಯಪ್ ತಾಂತ್ರಿಕತೆ ಬಳಸಲಾಗುತ್ತಿದೆ. ಜೊತೆಗೆ ಒಎಂಆರ್ ಹಾಳೆಯ ಪಟ್ಟಿ ನೀಡಲಾಗುತ್ತದೆ. ದೆಹಲಿ, ಪಟ್ನಾ ಹಾಗೂ ಬೆಂಗಳೂರಿನ ಕಚೇರಿಗಳಲ್ಲಿ ಮಾಹಿತಿ ಸಂಗ್ರಹವಾಗಲಿದ್ದು ನೆಟ್‌ವರ್ಕ್ ಇಲ್ಲದ ಸ್ಥಳದಲ್ಲಿಯೂ ಮೊಬೈಲ್ ಆ್ಯಪ್‌ನಲ್ಲಿ ಗಣತಿ ಕಾರ್ಯ ಮಾಡಬಹುದಾಗಿದೆ. ತದ ನಂತರ ನೆಟ್‌ವರ್ಕ್ ಬಂದತಕ್ಷಣ ನೇರವಾಗಿ ಅವುಗಳು ಮೂರು ಕಚೇರಿಗಳ ಸ್ಟೋರ್ ಆಗಲಿವೆ ಎಂದರು.
ಜನಗಣತಿಯಿಂದ ವೈಯಕ್ತಿಕ ಮಾಹಿತಿಗಳಿಗೆ ಯಾವುದೇ ಧಕ್ಕೆಯಾಗದೆ ಭದ್ರವಾಗಿ ಇರುವಂತೆ ತಾಂತ್ರಿಕತೆಯನ್ನು ಬಲಪಡಿಸಲಾಗಿದೆ. ಜನಗಣತಿಯಲ್ಲಿ ಪಾರದರ್ಶಕತೆ ಹಾಗೂ ವಸ್ತುನಿಷ್ಠ ಅಂಕಿ ಅಂಶ ಒದಗಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು ಅವರ ಮಾರ್ಗದರ್ಶನದಲ್ಲಿ ಜನಗಣತಿ ಅಧ್ಯಯನ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಡಿಐಒ ಹಾಗೂ ಎನ್ ಐಸಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ರಾಜ್ಯದ ಹಾಗೂ ರಾಷ್ಟ್ರದ ಗಣ್ಯವ್ಯಕ್ತಿಗಳು ಆಗಮಿಸಿದಾಗ ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತಿಸುವುದು. ಆಮಂತ್ರಣ ಪತ್ರಿಕೆಗಳಲ್ಲಿ ಮತ್ತು ಸಭಾಂಗಣದಲ್ಲಿ ಸರ್ಕಾರಿ ಶಿಷ್ಠಾಚಾರದಂತೆ ಗೌರವಿಸುವುದು, ಎಲ್ಲ ಇಲಾಖೆ ಕರ್ತವ್ಯವಾಗಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಸರ್ಕಾರಿ ಶಿಷ್ಠಾಚಾರ ಕಡ್ಡಾಯವಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಿದರು.