Advertisement

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

11:56 PM Apr 22, 2024 | Team Udayavani |

ವಿಜಯಪುರ : ಸೋಮವಾರ ಸಂಜೆ ಸಿಡಿಲ‌ ಅಬ್ಬರಕ್ಕೆ ಎಮ್ಮೆ ಬಲಿಯಾಗಿದ್ದು, ಬಿರುಗಾಳಿಗೆ ಮೊಬೈಲ್ ಟಾವರ್ ಮನೆಗಳ ಮೇಲೆ ಮುರಿದು ಬಿದ್ದಿದ್ದರೆ,ಮರವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬಿರುಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

Advertisement

ಮುಂಗಾರು ಆರಂಭಕ್ಕೂ ಮುನ್ನವೇ ಬಿರುಗಾಳಿ, ಸಿಡಿಲ ಅಬ್ಬರ ಸಹಿತ ಮಳೆ ಆರಂಭಗೊಂಡಿದೆ. ಸೋಮವಾರ ಸಂಜೆ ನಿಡಗುಂದಿ ತಾಲೂಕಿನ ಆಲಮಟ್ಟಿ ರಾಕ್ ಗಾರ್ಡನ್ ಪರಿಸರದಲ್ಲಿ ಸಿಡಿಲಿನಿಂದ ಮರವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದರೆ, ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಎಮ್ಮೆ ಬಲಿಯಾಗಿದೆ.

ಬಿರುಗಾಳಿಗೆ ಚಡಚಣ ಗ್ರಾಮೀಣ ಭಾಗದ ಡೋಣಿ ಐಪಿ ಪ್ರದೇಶದಲ್ಲಿ ಹಾಗೂ ತೊರವಿ ಬಳಿ 11 ಕೆ.ವಿ. ವಿದ್ಯುತ್ ಕಂಬಗಳು ನೆಲಕ್ಕುರುಳಿ ಈ ಮಾರ್ಗದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಚಡಚಣ ತಾಲೂಕಿನ ರೇವತಗಾಂವ ಗ್ರಾಮದಲ್ಲಿ ಬಿರುಗಾಳಿಗೆ ಮನೆಗಳ ಮೆರಲೆ ಮೊಬೈಲ್ ಟವರ್ ಮುರಿದು ಬಿದ್ದಿದೆ.ಘಟನೆಯಿಂದ ಐದಾರು ಮನೆಗಳಿಗೆ ಹಾನಿಯಾದರೂ ಸುದೈವಶಾತ್ ಯಾವುದೇ ಜೀವಹಾನಿ, ಅಪಾಯ ಸಂಭವಿಸಿಲ್ಲ. ಮಳೆ ಸುರಿಯುವುದಕ್ಕಿಂತ ಸಿಡಿಲು ಹಾಗೂ ಬಿರುಗಾಳಿಯ ಅಬ್ಬರವೇ ಜೋರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next