Advertisement

Vijayapura; ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ- ಅತೃಪ್ತಿಯಿಲ್ಲ: ಎಂ.ಬಿ ಪಾಟೀಲ

01:33 PM Oct 17, 2023 | keerthan |

ವಿಜಯಪುರ: ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತ ಶಾಸಕರು ಸಭೆ ಸೇರಲಿದ್ದಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ, ಅತೃಪ್ತಿ ಇಲ್ಲ ಎಂದು ಪುನರುಚ್ಚರಿಸಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಲಿಂಗಾಯತ ವಿಷಯದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರಸ್ಪರ ಚರ್ಚೆ ನಡೆಸಲಿದ್ದಾರೆ ಎಂದರು.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಥದ್ದೇನಿದ್ದರೂ ಸತೀಶ ಜಾರಕಿಹಳಿ ನನ್ನ ಆತ್ಮೀಯರು, ಏನಿದ್ದರೂ ನನ್ನೊಂದಿಗೆ ಹಂಚಿಕೊಳ್ಳಲಿದ್ದಾರೆ, ಅವರ ವಿಷಯ ಏನಿದ್ದರೂ ಮೊದಲು ನನಗೆ ತಿಳಿಯಲಿದೆ ಎಂದರು.

ಮಾಧ್ಯಮಗಳು ಬರೆಯುವುದೇ ಆದರೆ ಬಿಜೆಪಿ ಪಕ್ಷದಲ್ಲಿ ವಿಪಕ್ಷದ ನಾಯಕನ ನೇಮಕವಾಗಿಲ್ಲ, ರಾಜ್ಯಾಧ್ಯಕ್ಷರ ನೇಮಕವಾಗಿಲ್ಲ. ಆ ಪಕ್ಷದಲ್ಲಿನ ಅತೃಪ್ತಿ ಬಗ್ಗೆ ಬರೆಯಿರಿ. ಶಾಮನೂರು ಶಿವಶಂಕರಪ್ಪ, ಸಿದ್ಧರಾಮಯ್ಯ ಅವರ ವಿಷಯಗಳನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಇಬ್ಬರು ನಾಯಕರು ಪರಸ್ಪರ ಚರ್ಚಿಸಿ, ತಮ್ಮಲ್ಲಿರುವ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದರು.

ಇತರೆ ಸಮುದಾಯಗಳಂತೆ ವೀರಶೈವ ಮಹಾಸಭಾ ಕೂಡ ಸಮವೇಶ ನಡೆಸುವುದು ಶಕ್ತಿ ಪ್ರದರ್ಶನವಲ್ಲ. ಪಕ್ಷಾತೀತವಾಗಿರುವ ವೀರಶೈವ ಮಹಾಸಭಾದಲ್ಲಿ ಶಾಮನೂರು ಶಿವಶಂಕರಪ್ಪ, ಪ್ರಭಾಕರ ಕೋರೆ, ಈಶ್ವರ ಖಂಡ್ರೆ, ವಿನಯ ಕುಲಕರ್ಣಿ, ವೀರಣ್ಣ ಚರಂತಿಮಠ ಇವರೆಲ್ಲ ಇದ್ದಾರೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ಬದ್ಧತೆ ಇರುವ ವ್ಯಕ್ತಿ, ಅವರ ವಿರುದ್ಧ ವಿಕ್ಷಗಳ ನಾಯಕರು ಅನಗತ್ಯವಾಗಿ ಟೀಕೆ ಮಾಡುವುದು ಸಲ್ಲದು. ರಾಜ್ಯದಲ್ಲಿ ಪಕ್ಷದ ಸಂಘಟನೆ ಜವಾಬ್ದಾರಿ ಹೊತ್ತಿರುವ ಅವರು ರಾಜ್ಯಕ್ಕೆ ಭೇಟಿ ನೀಡುವುದು ಸಾಮಾನ್ಯ ಎಂದರು.

Advertisement

ನಿಗಮ-ಮಂಡಳಿ ನೇಮಕವೇ ಆಗಿಲ್ಲ. ಹೀಗಾಗಿ ದಲಿತ ಸಮುದಾಯದ ಎಡ-ಬಲ ಎಂದೆಲ್ಲ ಪೈಪೋಟಿ ನಡೆದಿದೆ ಎಂಬುದು ಸುಳ್ಳು ಎಂದರು.

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವುದು ಖಚಿತ. ಇದಕ್ಕಾಗಿ ಬಿಜೆಪಿ ಸದಸ್ಯರೂ ನಮ್ಮೊಂದಿಗೆ ಕೈ ಜೋಡಿಸಲಿದ್ದು, ಎಷ್ಟು ಸದಸ್ಯರು, ಯಾರ್ಯಾರು ಎಂದೆಲ್ಲ ತಿಳಯಲು ಕಾಯಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ರಾಜಕೀಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:LGBTQIA+; ಸುಪ್ರೀಂ ಐತಿಹಾಸಿಕ ತೀರ್ಪು: ಸಲಿಂಗ ವಿವಾಹಕ್ಕೆ ಸಿಗದ ಕಾನೂನು ಮಾನ್ಯತೆ

ಕಾಂಗ್ರೆಸ್ ಸೇರಿರುವ ಪಾಲಿಕೆಯ ಪಕ್ಷೇತರ ಎಲೂ ಸದಸ್ಯರು ಮೂಲ ಕಾಂಗ್ರೆಸ್ ಪಕ್ಷದವರೇ. ಪಕ್ಷದಲ್ಲಿ ಟಿಕೆಟ್ ಹಂಚಿಕೆ ಹಂಚಿಕೆ ಸಂದರ್ಭದಲ್ಲಿ ಒತ್ತಡ ಇದ್ದ ಕಾರಣ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಸಮಜಾಯಿಸಿ ನೀಡಿದರು.

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ. ಜಾತ್ಯಾತೀತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳೆಲ್ಲ ಒಂದು ಗೂಡಲು ಇದು ನೆರವಾಗಲಿದೆ. ಹೀಗಾಗಿ ಯಾರೇ ಮೈತ್ರಿ ಮಾಡಿಕೊಂಡರೂ ನಮಗೇನೂ ವ್ಯತ್ಯಾಸವಾಗದು. ನಾವು ಜನರನ್ನು ನಂಬಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಅವರು ತಮ್ಮ ಪಕ್ಷದ ಜಾತ್ಯಾತೀತ ತತ್ವ ರಕ್ಷಣೆಗೆ ಮುಂದಾಗಿರಬಹುದು, ಅದು ಅವರ ಪಕ್ಷದ ಆಂತರಿಕ ವಿಷಯ. ನಾವು ಜೆಡಿಎಸ್, ಬಿಜೆಪಿ ಒಡೆಯುವುದರ ಮೇಲೆ ನಮ್ಮ ರಾಜಕೀಯ ಅವಲಂಬಿತವಾಗಿಲ್ಲ, ನಾವು ರಾಜ್ಯದ ಜನತೆಯ ಮೇಲೆ ಅವಲಂಬಿತರಾಗಿದ್ದೇವೆ ಎಂದರು.

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆಗೆ ಪ್ರಕ್ರಿಯೆ ನಡೆದಿದೆ. ವಿಜಯಪುರ ಜಿಲ್ಲೆಗೆ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪಕ್ಷದ ಸಂಘಟನೆ ನಡೆದಿದೆ. ನನ್ನನ್ನು ಕಲಬುರ್ಗಿ ಜಿಲ್ಲೆಗೆ ನಿಯೋಜಿಸಿದ್ದರು. ಆದರೆ ನಾನು ವಿದೇಶ ಪ್ರವಾಸಕ್ಕೆ ಹೋಗುವ ಕೆಲಸವಿದ್ದ ಕಾರಣ ಬೇರೆಯವರನ್ನು ನೇಮಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next