Advertisement
ಘಟನೆಯ ಪ್ರತ್ಯಕ್ಷದರ್ಶಿಗಳು ಹಾಗೂ ನದಿಯಲ್ಲು ಮುಳುಗುತ್ತಿದ್ದವರ ರಕ್ಷಣೆಗೆ ದಾವಿಸಿದ ತಾವೇ ಸಮಸ್ಯೆಗೆ ಸಿಲುಕಿದ್ದಾಗಿ ಗೋಳು ಹೇಳಿಕೊಂಡಿದ್ದಾರೆ. ನದಿಯಲ್ಲಿ ತೆಪ್ಪ ಮುಳುಗಿದ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಿದ್ದ ಸ್ಥಳೀಯರಾದ ಶ್ರೀಧರ ಅಂಬಿಗೇರ ಹಾಗೂ ಶಿವಾನಂದ ಹುದ್ದಾರ ತಮ್ಮ ಬೆಲೆ ಬಾಳುವ ಮೊಬೈಲ್ ಕಳೆದುಕೊಂಡು ಸಂಕಷ್ಟ ನಿವೇದಿಸಿಕೊಂಡಿದ್ದು ಹೀಗೆ.
Related Articles
Advertisement
ಇದರಿಂದ ವಿಚಲಿತರಾದ ಪೊಲೀಸರು, ಕೂಡಲೇ ಮಗುಚಿಬಿದ್ದ ತೆಪ್ಪದಲ್ಲಿದ್ದವರ ರಕ್ಷಣೆ ಮಾಡುವಂತೆ ನಮ್ಮನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ ನದಿಗೆ ಇಳಿಯುವ ಮುನ್ನ ನಾವು ಬೆಲೆ ಬಾಳುವ ನಮ್ಮ ಮೊಬೈಲ್‍ಗಳನ್ನು ಪೊಲೀಸರಿಗೆ ನೀಡಿ, ನದಿಯಲ್ಲಿ ಮುಳುಗಿದ್ದವರ ರಕ್ಷಣೆಗಾಗಿ ಮತ್ತೊಂದು ತೆಪ್ಪದಲ್ಲಿ ತೆರಳಿದೆವು.
ರಕ್ಷಣೆಗೆ ಮುಂದಾದ ನಮಗೆ ತೆಪ್ಪ ಮಗುಚಿದ ಸ್ಥಳದಲ್ಲಿ ಓರ್ವ ಮಾತ್ರ ಕಾಣಿಸಿದಾಗ ಆತನನ್ನು ರಕ್ಷಿಸಿ ನದಿ ತೀರಕ್ಕೆ ತಂದೆವು. ನದಿ ತೀರದಲ್ಲಿ ಇದ್ದ ಇನ್ನಿಬ್ಬರು ಆತನನ್ನು ನೀರಿನಿಂದ ಹೊರಗೆ ಎಳೆಕೊಂಡು ಹೋದರು ಎಂದು ವಿವರಿಸಿದ್ದಾರೆ.
ಆದರೆ ಮಗುಚಿದ ತೆಪ್ಪದಲ್ಲಿದ್ದ ಇತರರು ನಮಗೆ ನದಿಯಲ್ಲಿ ಕಾಣಸಲಿಲ್ಲ. ಈ ವಿಷಯ ತಿಳಿಯುತ್ತಲೇ ನಮ್ಮ ಮೊಬೈಲ್ ಸಮೇತ ಸ್ಥಳದಲ್ಲಿದ್ದ ಪೊಲೀಸರು ಓಡಿ ಹೋದರು. ನದಿಯ ತೀರಕ್ಕೆ ಬಂದು ನಾವು ನಮ್ಮ ಮೊಬೈಲ್ ಕುರಿತು ಕೇಳಲು ಪೊಲೀಸರಿಗೆ ಕರೆ ಮಾಡಿದರೆ ಅವರ ಹಾಗೂ ನಮ್ಮ ಮೊಬೈಲ್‍ಗಳೂ ಸ್ವಿಚ್ ಆಫ್ ಆಗಿವೆ. ಈ ವರೆಗೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಗೋಳು ನಿವೇದಿಸಿಕೊಂಡಿದ್ದಾರೆ.
ಸದರಿ ಘಟನೆಯಿಂದ ಸ್ಥಳೀಯರು ರೊಚ್ಚಿಗೇಳುವ ಭೀತಿಯಿಂದ ಕೊಲ್ಹಾರ ಠಾಣೆ ಪೊಲೀಸರು ಯಾರೂ ರಕ್ಷಣಾ ಕಾರ್ಯಾಚರಣೆಯ ಸ್ಥಳಕ್ಕೆ ಬಂದಿಲ್ಲ. ಬೇರೆ ಬೇರೆ ಠಾಣೆಗಳ ಪೊಲೀಸರು ಸ್ಥಳದಲ್ಲಿ ರಕ್ಷಣೆಗೆ ನಿಂತಿದ್ದಾರೆ ಎಂದು ಇಡೀ ಘಟನೆಯನ್ನು ವಿವರಿಸಿದ್ದಾರೆ.
ಪೊಲೀಸರ ಮನವಿಯ ಮೇರೆಗೆ ನದಿಯಲ್ಲಿ ಮುಳುಗುತ್ತಿರುವವರ ರಕ್ಷಣೆಗೆ ಮುಂದಾಗಿದ್ದ ನಾವು, ಪೊಲೀಸರಿಗೆ ಮೊಬೈಲ್ ನೀಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ನಮ್ಮ ಮೊಬೈಲ್ ಮರಳಿ ಕೊಡಿಸಬೇಕು ಎಂದು ಶಿವಾನಂದ ಹಾಗೂ ಶ್ರೀಧರ ಮನವಿ ಮಾಡಿದ್ದಾರೆ.
ಈ ಕುರಿತು ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲಿರುವ ಯಾವುದೇ ಹಿರಿಯ ಪೊಲೀಸ್ ಅಧಿಕಾರಿಗಲು ಪ್ರತಿಕ್ರಿಯೆ ನೀಡಿಲ್ಲ, ಯುವಕರಿಗೆ ಸಮಾಧಾನದ ಮಾತನಾಡಿಲ್ಲ.
ಇದನ್ನೂ ಓದಿ: Jharkhand: ಚಂಪೈ ಸೊರೇನ್ ರಾಜೀನಾಮೆ…ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಸಿಎಂ?