Advertisement

ಸಿದ್ದೇಶ್ವರ ಜಾತ್ರೋತ್ಸವಕ್ಕೆ ನಾಡಿದ್ದು ಚಾಲನೆ

04:10 PM Jan 10, 2020 | Naveen |

ವಿಜಯಪುರ: ನಗರದೇವತೆ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಜ. 12ರಿಂದ ಚಾಲನೆ ದೊರೆಯಲಿದ್ದು, ಒಂದು ವಾರ ನಡೆಯುವ ಜಾತ್ರೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಗ್ರಾಮೀಣ-ಸಾಹಸ ಕ್ರೀಡೆಗಳು, ಕುಸ್ತಿ, ಶ್ವಾನ ಪ್ರರ್ದಶನ, ಜಾನುವಾರು ಜಾತ್ರೆಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Advertisement

ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಜಾತ್ರೆ ವಿವರ ನೀಡಿದ ಶಾಸಕರಾದ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರಾದ ಬಸನಗೌಡ ಪಾಟೀಲ ಯತ್ನಾಳ, ಚೇರಮನ್‌ ಬಸಯ್ಯ ಹಿರೇಮಠ, ಜ. 12ರಂದು ನಗರದಲ್ಲಿ ನಂದಿ ಧ್ವಜಗಳ ಮೆರವಣಿಗೆಯೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದ್ದು, 13ರಂದು 770 ಲಿಂಗಗಳ ಎಣ್ಣೆ ಮಜ್ಜನ ಹಾಗೂ ನಂದಿಧ್ವಜ ಮೆರವಣಿಗೆ ನಡೆಯಲಿದೆ. 14ರಂದು ಅಕ್ಷತಾ ಭೋಗಿ ಹಾಗೂ 15ರಂದು ಮಕರ ಸಂಕ್ರಮಣ, ಹೋಮ-ಹವನ ಹಾಗೂ ಸಿದ್ದೇಶ್ವರ ಉತ್ಸವ ಮೂರ್ತಿ ಪಲ್ಲಕ್ಕಿ ಉತ್ಸವ ಹಾಗೂ ನಂದಿಧ್ವಜ ಉತ್ಸವ ನಡೆಯಲಿದೆ ಎಂದರು.

16ರಂದು ಡಾ| ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಸಿದ್ದೇಶ್ವರ ರತ್ನ ಪ್ರಶಸ್ತಿ ವಿತರಿಸಲಿದ್ದಾರೆ. ಮದ್ದು ಸುಡುವ ಕಾರ್ಯಕ್ರಮ ಹಾಗೂ ಜ.17 ರಂದು ದೇವಸ್ಥಾನದ ಆವರಣದಲ್ಲಿ ಗ್ರಾಮೀಣ ಸಾಹಸದ ಭಾರ ಎತ್ತುವ ಸ್ಪರ್ಧೆ, ಜ. 18ರಂದು ನಗರದ ಎಸ್‌.ಎಸ್‌. ಹೈಸ್ಕೂಲ್‌ ಮೈದಾನದಲ್ಲಿ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ ಎಂದು ವಿವರಿಸಿದರು.

ಕುಸ್ತಿ ಪಂದ್ಯಾವಳಿಗೆ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಚಾಲನೆ ನೀಡಲಿದ್ದಾರೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ಆಯೋಜನೆ ಮಾಡಲಾಗಿದ್ದು, ಖ್ಯಾತ ಪೈಲ್ವಾನರಾದ ನವದೆಹಲಿಯ ಬಂಟಿಕುಮಾರ, ಕೊಲ್ಹಾಪುರದ ಸಚೀನ ಲೋಟೆ, ವಿಜಯಪುರದ ಅಮಗೊಂಡ ನಿರ್ವಾಣಿ, ಕೊಲ್ಹಾಪುರದ ಮಾರುತಿ ತೋರನಹಳ್ಳಿ ಭಾಗವಹಿಸಲಿದ್ದು, ಅದೇ
ತೆರನಾಗಿ ಮಹಿಳಾ ವಿಭಾಗದಲ್ಲಿ ಜಮಖಂಡಿಯ ಅನಿತಾ ಹಳ್ಳಿ, ಗಂಗಮ್ಮ ಚಿಕ್ಕಲಕಿ, ಲಕ್ಷ್ಮೀ ಮುಧೋಳ, ಭಾಗ್ಯ ಮುಧೋಳ, ಪ್ರತ್ಯೇಕ್ಷಾ ಚಿಕ್ಕಲಕಿ, ಅಪರ್ಣಾ ಚಿಕ್ಕಲಕಿ ಸ್ಪರ್ಧೆಯಲ್ಲಿ ಭಾಗಹಿಸಲಿದ್ದಾರೆ ಎಂದು ವಿವರಣೆ ನೀಡಿದರು.

ಸಿದ್ದೇಶ್ವರ ಜಾತ್ರೆ ನಿಮಿತ್ತ ತೊರವಿ ಗ್ರಾಮದ ಹೊರ ವಲಯದಲ್ಲಿ ಜಾನುವಾರು ಜಾತ್ರೆ ಹಮ್ಮಿಕೊಂಡಿದ್ದು ಈ ವರ್ಷ ಯಾವುದೆ ರೋಗ ಬಾಧೆ ಇಲ್ಲದ ಕಾರಣ ರೈತರು ಮುಕ್ತವಾಗಿ ಜಾತ್ರೆಯಲ್ಲಿ ಜಾನುವಾರುಗಳೊಂದಿಗೆ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಸಿದ್ದೇಶ್ವರ ಸಂಸ್ಥೆ ಹಾಗೂ ಜಾತ್ರಾ ಮಹೋತ್ಸವದ ವಿವಿಧ ಸಮಿತಿಗಳ ಪ್ರಮುಖರಾದ ಸಂ.ಗು. ಸಜ್ಜನ, ಸಿದ್ದರಾಮಪ್ಪ ಉಪ್ಪಿನ, ಮಲ್ಲಿಕಾರ್ಜುನ ಸಜ್ಜನ, ಬಸವರಾಜ ಸೂಗುರ, ಸದಾನಂದ ದೇಸಾಯಿ, ಶಶಿಧರ ಹಕ್ಕಾಪಕ್ಕಿ, ಮಡಿವಾಳಪ್ಪ ಕರಡಿ, ರಾಘವ ಅಣ್ಣಿಗೇರಿ, ಸೋಮಶೇಖರ ವಾಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next