Advertisement

ಶೂಟೌಟ್‌ಗೆ ವಿಜಯಪುರದ ಲಿಂಕ್‌ 

11:24 AM Feb 24, 2017 | |

ಬೆಂಗಳೂರು: ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಮೇಲೆ ನಡೆದಿದ್ದ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದ ಕಾರಾಗೃಹದಲ್ಲಿರುವ ಇಬ್ಬರು ಆರೋಪಿಗಳಿಗೆ ಬೆಂಗಳೂರು ಪೊಲೀಸರು ಬಾಡಿ ವಾರೆಂಟ್‌ ಕೇಳಿದ್ದಾರೆ.

Advertisement

ಕೃತ್ಯಕ್ಕೆ ಬಳಸಿದ ಪಿಸ್ತೂಲ್‌ ಇನ್ನಿತರ ಶಸ್ತ್ರಾಸ್ತ್ರಗಳು ವಿಜಯಪುರದಿಂದ ಅಕ್ರಮವಾಗಿ ಪೂರೈಕೆಯಾಗಿವೆ ಎನ್ನಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ವಿಜಯಪುರ ಜೈನಲ್ಲಿರುವ ವಿಚಾರಣಾಧೀನ ಕೈದಿಗಳಾದ ಇಂಡಿ ತಾಲೂಕಿನ ಇಜಾಜ್‌ ಅಹ್ಮದ್‌ ಪಟೇಲ್‌ ಹಾಗೂ ಅಬ್ಟಾಸ್‌ ಅಲಿ ಪೂರೈಸಿದ್ದಾರೆ ಎಂದು ಶಂಕಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ನಗರ ಪೊಲೀಸರು ಬಾಡಿ ವಾರೆಂಟ್‌ ಕೇಳಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನಲ್ಲಿರುವ ಇಜಾಜ್‌ ಅಹ್ಮದ್‌ ಪಟೇಲ್‌ ಹಾಗೂ ಅಬ್ಟಾಸ್‌ ಅಲಿ ಕೆಲ ದಿನಗಳಿಂದ ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಆರೋಪದಡಿ ಬಂಧಿತರಾಗಿ ವಿಜಯಪುರ ಜೈಲು ಸೇರಿದ್ದಾರೆ. 

ಕಳೆದ ನಾಲ್ಕು ದಿನಗಳ ಹಿಂದೆ ಬಂಧನಕ್ಕೊಳಧಿಗಾಗಿರುವ ಸೈಲಂಟ್‌ ಸುನೀಲ ಮತ್ತು ಒಂಟೆ ರೋಹಿತ ಸಹಚರರಾದ ಮೋಹನ್‌ ಅಲಿಯಾಸ್‌ ಬಡ್ಡಿ ಮೋಹನ್‌, ನಾಗರಾಜ್‌ ಅಲಿಯಾಸ್‌ ನಾಗನನ್ನು ಬಂಧಿಸಿ ಅವರ ಬಳಿಯಿದ್ದ ಪಿಸ್ತೂಲ್‌ ಹಾಗೂ ಜಕೀನ್‌ನನ್ನು ಜಪ್ತಿ ಮಾಡಿದ್ದರು. ಕೃತ್ಯದಲ್ಲಿ ಇವರು ಭಾಗಿಯಾಗಿರುವ ಶಂಕೆಯಿದ್ದು, ಇವರು ನೀಡಿದ ಮಾಹಿತಿ ಮೇರೆಗೆ ಇದೀಗ ಇಜಾಜ್‌ ಅಹ್ಮದ್‌ ಪಟೇಲ್‌ ಮತ್ತು ಅಬ್ಟಾಸ್‌ ಅಲಿಯನ್ನು ವಶಕ್ಕೆ ಪಡೆಯಲಾಗುತ್ತಿದೆ ಎನ್ನಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next