Advertisement

ಸಮಾನತೆ ಸಾರಿದವರು ಹೇಮರಡ್ಡಿ ಮಲ್ಲಮ್ಮ

11:59 AM May 11, 2020 | Naveen |

ವಿಜಯಪುರ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕಿತ್ತೂರು ಚೆನ್ನಮ್ಮ, ಅಕ್ಕಮಹಾದೇವಿ ಅವರಂತೆ ಸಮಾಜದ ಸುಧಾರಣೆಗೆ ತಮ್ಮನ್ನು ಸಮರ್ಪಿಸಿಕೊಂಡ ಶ್ರೇಷ್ಠ ವೀರಶರಣೆಯಾಗಿ ಕೀರ್ತಿ ಗಳಿಸಿದ್ದರು.

Advertisement

ಅವರು ಸರ್ವರನ್ನು ಸಮನಾಗಿ ಕಂಡಿದ್ದರು ಎಂದು ಜಿಲ್ಲಾಧಿಕಾರಿ ವೈ. ಎಸ್‌. ಪಾಟೀಲ ಹೇಳಿದರು. ರವಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇಮನ ಎಂಬ ಸಾಮಾನ್ಯ ವ್ಯಕ್ತಿಯನ್ನು ತತ್ವಜ್ಞಾನಿಯಾಗಿ ಪರಿವರ್ತಿಸಿದ ಕೀರ್ತಿ ಹೇಮರಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ ಎಂದರು.

ರಡ್ಡಿ ಸಮಾಜ ಸಂಘದ ಅಧ್ಯಕ್ಷ ಸುರೇಶ ದೇಸಾಯಿ ಮಾತನಾಡಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನ ದೇವರನ್ನು ಆರಾಧಿಸಿ, ಧ್ಯಾನಿಸಿ ಸದ್ಗತಿ ಹೊಂದಿದಳು. ತನ್ನ ರಡ್ಡಿ ಸಮುದಾಯಕ್ಕೆ ಸಂಪತ್ತಿನಿಂದ ಸೊಕ್ಕದೇ ದಾನ ಗುಣ ಬೆಳೆಸಿಕೊಳ್ಳುವ ಸಂದೇಶ ನೀಡಿದ್ದಾರೆ. ಹೇಮರಡ್ಡಿ ಮಲ್ಲಮ್ಮ ಸಾರಿದ ಸಂದೇಶದಂತೆ ನಮ್ಮ ಸಮುದಾಯ ಸಮಾಜಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ ಎಂದರು.

ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ್‌ ಅಗರವಾಲ್‌, ಎಡಿಸಿ ಡಾ| ಔದ್ರಾಮ್‌, ತಹಶೀಲ್ದಾರ್‌ ಮೋಹನಕುಮಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತ್ದಾರ, ಡಾ| ಕರಿಗೌಡರ, ಡಾ| ಕಂಠೀರವ ಕುಲ್ಲೊಳ್ಳಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next