Advertisement

ಅಪ್ಪಣ್ಣ ಶರಣರ ಆದರ್ಶ ಮೈಗೂಡಿಸಿಕೊಳ್ಳಿ

10:32 AM Jul 17, 2019 | Naveen |

ವಿಜಯಪುರ: ಜಯಂತಿಗಳನ್ನು ಆಚರಿಸುವ ಮೂಲ ಉದ್ದೇಶವೆಂದರೆ ತಮ್ಮಲ್ಲಿ ಸಾಹಿತ್ಯದ ಅಭಿರುಚಿ ಹಾಗೂ ಆಧ್ಯಾತ್ಮ ವ್ಯಕ್ತಿಗಳ ಸೂಕ್ಷ್ಮ ಸಂಕೀರ್ಣತೆ ಉತ್ತಮ ವ್ಯಕ್ತಿತ್ವ ಮತ್ತು ಅವರ ಆಶಯೋಕ್ತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು.

Advertisement

ಮಂಗಳವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ರಚನೆಯಾಗಿದ್ದ ಅನುಭವ ಮಂಟಪದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಮುಖ್ಯವಾಗಿತ್ತು. ಬಸವಣ್ಣನವರಿಗೆ ಅಲ್ಲಮ ಪ್ರಭುಗಳ ಪರಿಚಯ ಮಾಡಿಕೊಟ್ಟಿದ್ದರು. ಅದರಂತೆ ವಚನ ಸಾಹಿತ್ಯದ ಅಭಿವೃದ್ಧಿಗೆ ಮೊದಲರಾಗಿದ್ದರು ಎಂದು ಹೇಳಿದರು.

ಹಡಪದ ಅಪ್ಪಣ್ಣ 243 ವಚನ ಸಾಹಿತ್ಯಗಳನ್ನು ರಚಿಸಿದ್ದು, ಅವರು ರಚಿಸಿದ ಸಾಹಿತ್ಯಗಳಲ್ಲಿ ಸತ್ಯಾಂಶವುಳ್ಳ ಸಂದೇಶಗಳಿವೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಂತಹ ಮೂಲ ಉದ್ದೇಶಗಳಿವೆ. ಇಂತಹ ಸಮಾಜ ಸುಧಾರಕರ, ಸಾಹಿತ್ಯ ಚಿಂತಕರ ಜೀವನಧಾರೆ ಕಥನಾ ಚಿಂತನೆಗಳನ್ನು ಅಭ್ಯಸಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಶಿವಶರಣ ಹಡಪದ ಅಪ್ಪಣ್ಣ ಅವರು ವಚನಗಳ ಮೂಲಕ ಕ್ರಾಂತಿ ಬೀಜ ಬಿತ್ತಿದವರು ಈ ವಚನಕಾರರಾಗಿದ್ದು, ಶರಣರ ಸಾಹಿತ್ಯ ಈ ಲೋಕದಲ್ಲಿ ಇಂದೇ ಇದ್ದಿದ್ದರೆ ಭಾರತೀಯ ಸಂಸ್ಕೃತಿ ಅಭಿವೃದ್ಧಿ ವಿಜೃಂಭಿಸಲು ಸಾಧ್ಯವಾಗುತ್ತಿರಲಿಲ್ಲ. ಘನ ವ್ಯಕ್ತಿತ್ವ ಹೊಂದಿ ಕೂಡಲಸಂಗಯ್ಯ ಎಂಬ ಅಂಕಿತನಾಮದೊಂದಿಗೆ ಜೀವನದಲ್ಲಿ ನಿಜಸುಖೀ ಎಂದೇ ಪ್ರಖ್ಯಾತಿ ಹೊಂದಿದ್ದರು. ಬಸವಣ್ಣನವರಿಗೆ ಅತಿ ಪ್ರೀತಿಯ ಹತ್ತಿರದ ವ್ಯಕ್ತಿಗಳಾಗಿದ್ದರು.

Advertisement

ಅನುಭವ ಮಂಟಪದಲ್ಲಿ ತಮ್ಮ ಅಧ್ಯಾತ್ಮ ಚಿಂತನೆಯ ಸೆಲೆಯನ್ನು ಸಾಬೀತುಪಡಿಸುವಲ್ಲಿ ಮೊದಲಿಗರಾಗಿದ್ದರು. 12ನೇ ಶತಮಾನದ ಶರಣರ ವಚನಗಳಲ್ಲಿ ಅಡಗಿರುವ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಅಡಿವೆಪ್ಪ ಸಾಲಗಲ್ ಮಾತನಾಡಿ, ತಮ್ಮ ಜ್ಞಾನದಿಂದ ಚಳವಳಿಗಳ ಮುಖಾಂತರ ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದಿ, ಸಮಾಜದ ಎಲ್ಲ ಜನರು ಸಮಾನರು ಎಂಬ ಸಂದೇಶವನ್ನು ಸಾರಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವುಗಳನ್ನು ನಾವು ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಅಶೋಕ ನಾವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಬಿ. ವಿದ್ಯಾವತಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಹುಮಾಯೂನ್‌ ಮಮದಾಪುರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next