Advertisement

ಶೈಕ್ಷಣಿಕ ಕ್ಷೇತ್ರಕ್ಕೆ ಮಠಾಧೀಶರ ಕೊಡುಗೆ ಅಪಾರ

06:33 PM Oct 21, 2019 | Naveen |

ವಿಜಯಪುರ: ಉತ್ತಮ ಸಮಾಜ ನಿರ್ಮಿಸುವಲ್ಲಿ ಮಠಗಳ ಪಾತ್ರ ಬಹಳ ಮುಖ್ಯವಾದುದು. ಸರ್ಕಾರ ಮಾಡುವ ಕೆಲಸವನ್ನು ಮೀರಿ ಮಠಗಳು ಮಾಡಿವೆ. ಕರ್ನಾಟಕವು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರಲು ಮಠಾಧೀಶರ ಕೊಡುಗೆ ಅಪಾರ. ಮಠ ಹಾಗೂ ಮಠಾಧೀಶರಿಗೆ ನಾವು ಋಣಿಯಾಗಿರಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

Advertisement

ರವಿವಾರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾಜ ಪರಿವರ್ತನೆಯಲ್ಲಿ ಮಠಗಳ ಪಾತ್ರ ವಿಷಯದ ಕುರಿತ ವಿಚಾರ ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರಿಗೆ, ಹಾಸ್ಟೆಲ್‌, ಶಾಲೆಗಳು ಇಲ್ಲದ ಅಂದಿನ ದಿನಗಳಲ್ಲಿ ಮಠಗಳು ನಿರ್ವಹಿಸಿರುವ ಕಾರ್ಯ ಅನುಪಮವಾದುದು. ಕನ್ನಡಪರ, ರೈತ ಪರ, ನೀರಾವರಿ ಹೋರಾಟಗಳಲ್ಲಿ ಮಠಾಧಿಧೀಶರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಕರ್ನಾಟಕದ ಮಠಗಳು ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿವೆ.

ಮಠಾಧಿ ಶರೆಂದರೇ ಸರ್ವಜನಾಂಗದ ತಾಯಿ ಇದ್ದಂತೆ ಎಂದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿದರು.ಸಾನ್ನಿಧ್ಯ ವಹಿಸಿದ್ದ ಬಬಲೇಶ್ವರ ಬೃಹನ್ಮಠದ ಡಾ| ಮಹಾದೇವ ಶ್ರೀಗಳು ಮಾತನಾಡಿ, ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಮಠಾಧೀಶರೂ ಕೂಡಾ ಪಾಲ್ಗೊಂಡು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ರಾಜ ಮಹಾರಾಜರಿಗೆ ಗುರು ಉಪದೇಶ ನೀಡಿ ಉತ್ತಮ ಸಮಾಜ ಕಟ್ಟಲು ಪ್ರಯತ್ನಿಸಿದ್ದಾರೆ ಎಂದರು.

ತೆಲಸಂಗ ಹಿರೇಮಠ ಸಂಸ್ಥಾನದ ವೀರೇಶ್ವರ ದೇವರು, ಹಂಗಡಗೇರಿ ಪವಾಡ ಬಸವೇಶ್ವರ ಆಶ್ರಮದ ಗುರುಬಸವ ಸ್ವಾಮೀಜಿ, ಸಿಂದಗಿ ಗುರುದೇವ ಆಶ್ರಮದ ಶಾಂತಗಂಗಾಧರ ಶ್ರೀಗಳು, ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಡಾ| ಫಕೀರ ಸಿದ್ದರಾಮ ಶ್ರೀಗಳು ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next