ವಿಜಯಪುರ: ಹತ್ತಾರೆ ಎಕರೆ ಹೊಲ ಇದ್ರೂ ತೋಟದಾಗಿನ ಹಣ್ಣಿನ ಬೆಳಿ ಒಣಗಿ ನಿಂತಾವ್,. ಟಾೖಂಕರ್ ನೀರಾಕಿ ಗಿಡ ಬದಕಿಸೋಣ ಅಂದ್ರ ನೀರು ಸಿಗುತ್ತಿಲ್ಲ. ಪರಿಹಾರ ಕೊಡ್ತೀವಿ ಅಂತ ಹೆಳಿಕೊಂಡ ಎಮ್ಮೆಲ್ಲೆ, ಮಿನಿಸ್ಟರ್, ದೊಡ್ಡ ದೊಡ್ಡ ಆಫೀಸರ್ ಎಲ್ಲ ರೋಡ್ ಮಾೖಲೆ ನಿಂತ ನೋಡಿ ಹೊಕ್ಕಾರ. ಏನೂ ಮಾಡಿಲ್ಲ. ಮುಂದ ಬದುಕೋದ್ಹೆಂಗ್ ಅನ್ನಾದ ತಿಳಿದಂಗಗೇತಿ…
ಜಿಲ್ಲೆಯಲ್ಲಿ ಆವರಿಸಿರುವ ಬರ ಪರಿಸ್ಥಿತಿ ಅತ್ಯಂತ ಗಂಭೀರ ಸ್ವರೂಪ ತಾಳಿರುವ ಹಂತದಲ್ಲಿ ರವಿವಾರ ಕಂದಾಯ ಖಾತೆ ಸಚಿವ ಆರ್.ವಿ. ದೇಶಪಾಂಡೆ ಬರ ಅಧ್ಯಯನಕ್ಕೆ ಬಂದಿದ್ದ ಸಂದರ್ಭದಲ್ಲಿ ರೈತರು ಕಂಗಾಲಾಗಿ, ಕಣ್ಣೀರು ಹಾಕಿ ಹೇಳಿಕೊಂಡ ಕಥೆ ಇದು.
12 ಎಕರೆ ಜಮೀನಿದೆ. 10 ವರ್ಷದ ಹಿಂದೆ 6 ಎಕರೆ ಪ್ರದೇಶದಲ್ಲಿ ಲಿಂಬೆ ಬೆಳೆದಿದ್ದೇನೆ. ಆದರೆ ನಿರಂತರ ಬರ ಆವರಿಸಿರುವ ಕಾರಣ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಯಿತು. ಕಳೆದ ಕೆಲ ತಿಂಗಳಿಂದ ಟಾೖಂಕರ್ ಮೂಲಕ ನೀರು ಹಾಕಿ ಲಕ್ಷಾಂತರ ರೂ. ಖರ್ಚು ಮಾಡಿದರೂ ಈಗ ಹಣ ಕೊಟ್ಟರೂ ಸಿಗದ ಕಾರಣ ತೋಟದಲ್ಲಿದ್ದ ಸಂಪೂರ್ಣ ಲಿಂಬೆ ಬೆಳೆ ಒಣಗಿ ಹೋಗಿದೆ. ಇದಕ್ಕಾಗಿ ಮಾಡಿಕೊಂಡ ಲಕ್ಷಾಂತರ ರೂ. ಸಾಲ ಇನ್ನೂ ಹಾಗೇ ಇದೆ. ಭವಿಷೖದಲ್ಲಿ ಸಾಲ ತೀರಿಸೋದು ಹೇಗೆ? ಕುಟುಂಬವನ್ನು ಬದುಕಿಸುವುದು ಹೇಗೆ? ಭವಿಷೖವನ್ನು ಕಳೆಯುವುದು ಹೇಗೆ ಎಂಬುದು ತಿಳಿಯದಾಗಿದೆ ಎಂದು ತಡವಲಗಾ ಗ್ರಾಮದ ರೈತ ಶರಣಪ್ಪ ಸಿದ್ದಪ್ಪ ಮೇತ್ರಿ ಕಣ್ಣೀರು ಹಾಕಿದರು.
ಎಲೆಕ್ಷನ್ ಬಂದಾಗ ಓಡೋಡಿ ಬಂದಿದ್ರು. ನಾವು ನಿಮ್ಮವರೇ ಎಂದು ಕೈ ಮುಗಿದು ನಿಂತಿದ್ದು. ಈಗ ಅವರೆಲ್ಲ ಕಾಣೆಯಾಗಿದ್ದಾರೆ. ಗಾಡ್ಯಾಗ್ ಹಿಂಗ್ ಬಂದ್ ಹಂಗ್ ಹೋಗ್ತಾರ. ಏನು ಮಾಡುತ್ತಿಲ್ಲ. ಟ್ಯಾಂಕರ್ ನೀರು ಬರುತ್ತಿತ್ತು. ಕುಡಿಯಲು ಯೋಗ್ಯವಲ್ಲದ ರಾಡಿ ನೀರು ಬರುತ್ತಿವೆ ಎಂದು ಹೇಳಿದ್ದಕ್ಕೆ ಅದನ್ನೂ ನಿಲ್ಲಿಸಿದ್ದಾರೆ. ಇನ್ನು ಯಾವುದೇ ರಾಜಕೀಯ ಮಂದಿ ನಮ್ಮೂರಿಗೆ ಬಾರದಂತೆ ತಡೆಯುತ್ತೇವೆ. ತಿಂಗಳಾತು ತಾಂಡಾದಾಗ ಕೂಲಿ ಇಲ್ದ ಬಹಳ ಜನರು ದುಡಿಲಾಕ ಮುಂಬೈ, ಗೋವಾಕ್ಕ ಗುಳೇ ಹೋಗ್ಯಾರ. ನಮ್ಮಂಥ ದುಡಿಯಲು ಆಗದ ವೃದ್ದರು ತಾಂಡಾದಲ್ಲಿದ್ದು, ಕುಡಿಯಾಕ ನೀರೂ ಸಿಗದಿದ್ದರೆ ಇಲ್ಲಿ ಬದುಕೋದು ಹೇಗೆ ಎಂದು ಚಂದೂನ ತಾಂಡಾ ರೇಣುಕಾಬಾಯಿ ಆಕ್ರೋಶ ಹೊರಹಾಕಿದರು.
3 ಎಕರೆ ಜಮೀನು ಇದೆ. ಮಳೆ ಇಲ್ಲದೇ ಬೆಳೆ ಒಣಗಿ ಆರ್ಥಿಕ ನಷ್ಟ ಸೃಷ್ಟಿಸಿತು. ಹೀಗಾಗಿ ಕೈಸುಟ್ಟುಕೊಂಡಿದ್ದೇನೆ. ಮತ್ತೂಂದೆಡೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ದುಡಿಮೆ ಹಾಗೂ ನೀರು ಇಲ್ಲದ ಈ ಊರಲ್ಲಿ ಬದುಕುವುದು ದುಸ್ತರವಾಗಿದ್ದರೂ ಯಾರೊಬ್ಬರೂ ನಮ್ಮತ್ತ ಚಿತ್ತ ಹರಿಸುತ್ತಿಲ್ಲ. ಈಗ ಸಚಿವರು ಬಂದಿದ್ದರೂ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಅಸಾಧ್ಯ. ಹಿಂದೆಲ್ಲ ಇಂಥ ಭರವಸೆ ಕೊಟ್ಟು ಒಂದನ್ನೂ ಈಡೇರಿಸಿಲ್ಲದ ಇವರ ಮಾತು ನಂಬಿಕೊಂಡು ಕುಳಿತುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ನಾನು ಕೂಡ ಕುಟುಂಬ ಸಮೇತ ಗುಳೇ ಹೋಗಲು ಸಿದ್ದವಾಗಿದ್ದೇನೆ ಎಂದು ಗೋಳು ಹೇಳಿಕೊಳ್ಳುತ್ತಾರೆ ಮತ್ತೂಬ್ಬ ರೈತ.