Advertisement

ಗ್ಯಾಸ್‌ ವಿತರಣಾ ಕೇಂದ್ರದಲ್ಲಿ ಸ್ಯಾನಿಟೈಸರ್‌ ಸಿಂಪರಣೆ ಕೇಂದ್ರ

05:26 PM Apr 08, 2020 | Naveen |

ವಿಜಯಪುರ: ನಗರದಲ್ಲಿ 32 ಸಾವಿರ ಗ್ರಾಹಕರನ್ನು ಹೊಂದಿರುವ ಭಾರತ ಗ್ಯಾಸ್‌ನ ವಿತರಣಾ ಸಂಸ್ಥೆಯಾದ ಸಾಯಿ ಹೋಂ ನೀಡ್ಸ್‌ ಸಂಸ್ಥೆ ತನ್ನ ಗ್ರಾಹಕರು-ಸಿಬ್ಬಂದಿ ಸುರಕ್ಷತೆಗಾಗಿ ಸ್ಯಾನಿಟೈಸರ್‌ ಸಿಂಪಡಣೆ ಬಾಕ್ಸ್‌ ಅಳವಡಿಕೆ ಹಾಗೂ ಮಾಸ್ಕ್ ವಿತರಣೆಗೆ ಕ್ರಮ ಕೈಗೊಂಡಿದೆ.

Advertisement

ಸ್ಯಾನಿಟೈಸರ್‌ ಸಿಂಪಡಣೆ ಬಾಕ್ಸ್‌ಗೆ ಜಿಲ್ಲಾ  ಧಿಕಾರಿ ವೈ.ಎಸ್‌.ಪಾಟೀಲ, ಎಸ್ಪಿ ಅನುಪಮ ಅಗರವಾಲ್‌ ಹಾಗೂ ಸಿಇಒ ಗೋವಿಂದರೆಡ್ಡಿ ಜಂಟಿಯಾಗಿ ಚಾಲನೆ ನೀಡಿದರು. ಸಿಲಿಂಡರ್‌ ಸಾಗಿಸುವ ವಾಹನ ಕೇಂದ್ರದಿಂದ ಹೊರ ಹೋಗುವಾಗ ಹಾಗೂ ಕೇಂದ್ರಕ್ಕೆ ಮರಳುವಾಗ ಸ್ಯಾನಿಟೈಸರ್‌ ಸಿಂಪಡಣೆ ಮಾಡಲಾಗುತ್ತದೆ. ಸಿಬ್ಬಂದಿ ಹಾಗೂ ಗ್ರಾಹಕರು ಸಹ ಬಾಕ್ಸ್‌ ಒಳಗೆ ಪ್ರವೇಶಿಸಿಯೇ ಗ್ಯಾಸ್‌ ಸಿಲಿಂಡರ್‌ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ.

ಗ್ಯಾಸ್‌ ಸಿಲಿಂಡರ್‌ ವಿತರಣೆ ವೇಳೆ ಸಿಬ್ಬಂದಿ ಮತ್ತು ಗ್ರಾಹಕರು ಮಾಸ್ಕ್ ಧರಿಸುವುದು ಹಾಗೂ ಕೈಗೆ ಸ್ಯಾನಿಟೈಸರ್‌ ಬಳಕೆ ಕಡ್ಡಾಯ ಮಾಡಿದೆ. ಇದಕ್ಕಾಗಿ ನಮ್ಮ ಎಲ್ಲ ಗ್ರಾಹಕರಿಗೆ ಮಾಸ್ಕ್ ವಿತರಣೆ ಹಾಗೂ ಕೈಗಳಿಗೆ ಸ್ಯಾನಿಟೈಸರ್‌ ಬಳಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾಯಿ ಹೋಂ ನೀಡ್ಸ್‌ನ ಮುಖ್ಯಸ್ಥ ಉಮೇಶ ಕಾರಜೋಳ ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next