Advertisement

ಸ್ಯಾನಿಟೈಜರ್‌ ಸ್ಪ್ರೇ ಬೂತ್‌ಗೆ ಚಾಲನೆ

05:13 PM Apr 10, 2020 | Naveen |

ವಿಜಯಪುರ: ಕೊರೊನಾ ರೋಗ ನಿಗ್ರಹಕ್ಕಾಗಿ ಜಿಲ್ಲಾಡಳಿತ ಸಾರ್ವಜನಿಕರ ಹಿತಕ್ಕಾಗಿ ಹಲವು ಕ್ರಮ ಕೈಗೊಂಡಿದ್ದು, ಇದೀಗ ನಗರದ ಎಪಿಎಂಸಿ ಆವರಣದಲ್ಲಿರುವ ತರಕಾರಿ ಮಾರುಕಟ್ಟೆ ಮತ್ತು ನಗರದ ಕಿರಾಣಾ ಬಜಾರನಲ್ಲಿ ಸಾರ್ವಜನಿಕರ ಬಳಕೆಗೆ ಸ್ಯಾನಿಟೈಜರ್‌ ಸ್ಪ್ರೇ  ಬೂತ್‌ ಸ್ಥಾಪಿಸಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ ಚಾಲನೆ ನೀಡಿದರು.

Advertisement

ಸ್ಯಾನಿಟೈಜರ್‌ ಸ್ಪ್ರೆà ಬೂತ್‌ಗೆ ಚಾಲನೆ ನೀಡಿ ಮಾತನಾಡಿದ ಜೆ.ರವಿಶಂಕರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸರ್ಕಾರೇತರ ಸಂಘ, ಸಂಸ್ಥೆಗಳ ನೆರವಿನೊಂದಿಗೆ ಜನಸಂದಣಿ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಬರುವವರ ಹಿತದೃಷ್ಟಿಯಿಂದ ಎಪಿಎಂಸಿ ಆವರಣ, ಕಿರಾಣಾ ಬಜಾರದಲ್ಲಿ ಸ್ಥಾಪಿಸಿದ ಸ್ಯಾನಿಟೈಜರ್‌ಸ್ಪ್ರೇ ಬೂತ್‌ ಆರಂಭಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ಮಾದರಿಯಾಗಿವೆ ಎಂದು ಬಣ್ಣಿಸಿದರು.

ಭವಿಷ್ಯದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ, ಸರ್ಕಾರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ಯಾನಿಟೈಸರ್‌ ಸ್ಪ್ರೆà ಬೂತ್‌ ಸ್ಥಾಪಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಅವರಿಗೆ ಸೂಚಿಸಿ, ವಿಜಯಪುರ ಜಿಲ್ಲಾಡಳಿತ ವಿರುದ್ಧದ ಹೋರಾಟಕ್ಕಾಗಿ ಕೈಗೊಂಡ ಹಲವು ಪರಿಣಾಮಕಾರಿ ಕ್ರಮಗಳು ರಾಜ್ಯದ ಗಮನ ಸೆಳೆದಿದ್ದು, ಪ್ರಶಂಸೆ ಪಡೆದಿವೆ. ವಿಜಯಪುರ ಜಿಲ್ಲೆಯ ಜನರು ಸರ್ಕಾರ ರೂಪಿಸಿರುವ ಲಾಕ್‌ಡೌನ್‌ ನಿರ್ಬಂಧದ ನಿಯಮಗಳನ್ನು ಹಾಗೂ ಸಾಮಾಜಿಕ ಅಂತರ, ಸ್ಯಾನಿಟೈಜರ್‌ಗಳ ಬಳಕೆ, ಮಾಸ್ಕ್ ಬಳಕೆ ಸೇರಿದಂತೆ ಕಟ್ಟುನಿಟ್ಟಾಗಿ ಎಲ್ಲ ಸೂಚನೆಗಳನ್ನು ಪಾಲಿಸುವ ಮೂಲಕ ಜಿಲ್ಲೆಗೆ ಕೊರೊನಾ ಸೋಂಕು ಪ್ರವೇಶಿಸದಂತೆ ಸಹಕರಿಸಬೇಕು ಎಂದು ಕಿವಿ ಮಾತು ಹೇಳಿದರು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಎಸ್ಪಿ ಅನುಪಮ್‌ ಅಗರವಾಲ್‌, ಜಿಪಂ ಸಿಇಒ ಗೋವಿಂದರೆಡ್ಡಿ, ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಎಪಿಎಂಸಿ ಕಾರ್ಯದರ್ಶಿ ಕುಮಾರಸ್ವಾಮಿ ಸಹಾಯಕ ನಿರ್ದೇಶಕ ಚಬನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next