Advertisement
ಜಿಪಂ ಮಹಾದ್ವಾರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಇಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಾಸಿಕ ವೇತನ 12 ಸಾವಿರ ರೂ. ನಿಗದಿ ಮಾಡಿ, ಕಾರ್ಮಿಕ ವಿರೋಧಿ ಸರಕಾರಕ್ಕೆ ಧಿಕ್ಕಾರ, ಕಾರ್ಮಿಕರೇ ಒಂದಾಗಿ ಹೋರಾಟಕ್ಕೆ ಮುಂದಾಗಿ, ಪುಡಿಗಾಸಿನಲ್ಲಿ ದುಡಿಸುಕೊಳ್ಳುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಪ್ರತಿಭಟನಾಕಾರರು ಮೊಳಗಿಸಿದರು.
ಶಿಕ್ಷಣ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಬಿಸಿಯೂಟದ ಜೊತೆಗೆ ಕ್ಷೀರ ಭಾಗ್ಯದ ಯೋಜನೆಯಿಂದಾಗಿ ಮಕ್ಕಳ ಅಪೌಷ್ಟಿಕತೆ ಕಡಿಮೆಯಾಗಿದೆ ಹಾಗೂ ಶಾಲೆ ಬಿಡುವ ಮಕ್ಕಳ ಸಂಖ್ಯೆ ಕೂಡ ಕಡಿಮೆಯಾಗಿರುವುದಾಗಿ ಸರಕಾರದ ಅಂಕಿ ಅಂಶಗಳು ತಿಳಿಸುತ್ತವೆ ಎಂದರು. ಪ್ರತಿಭಟನೆ ಬೆಂಬಲಿಸಿದ ಎಸ್ ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ಮಾತನಾಡಿ, ಕಾರ್ಮಿಕರ ಶೊಷಣೆಗೆ ಇಲ್ಲಿವರೆಗೆ ಆಡಳಿತ ನಡೆಸಿರುವ ಎಲ್ಲ
ಸರಕಾರಗಳು ಮತ್ತು ಈ ದೇಶದ ಬಂಡವಾಳಶಾಹಿ ಪರವಾದ ನೀತಿ ಜಾರಿಗೋಳಿಸಿರುವುದರಿಂದ ಎಲ್ಲ ಕ್ಷೇತ್ರದ ಕಾರ್ಮಿಕರ ಸ್ಥಿತಿ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯಡಿ ಬಿಸಿಯೂಟ ಸಿಬ್ಬಂದಿಗೆ 12 ಸಾವಿರ ರೂ. ವೇತನ ನೀಡುವುದು, ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ಪಿಂಚಣಿ ಯೋಜನೆಯ ಕಂತುಗಳನ್ನು ಸರ್ಕಾರವೇ ಭರಿಸಿ ಬಿಸಿಯೂಟ ಕಾರ್ಯಕರ್ತರಿಗೆ ನೀಡುವುದು ವಾಜಪೇಯಿ ಆರೋಗ್ಯಶ್ರೀ ವೈದ್ಯಕೀಯ ಸೌಲಭ್ಯದ ಕಾರ್ಡ್ ಒದಗಿಸುವುದು ಹಾಗೂ ವಯೋನಿವೃತ್ತಿ ಹೊಂದಿದ ನೌಕರರಿಗೆ ಇಡಿಗಂಟಿನ ಗೌರವ ಧನ ನೀಡುವುದು ಸೇರಿದಂತೆ ಬಿಸಿಯೂಟ ನೌಕರರ ಪರವಾದ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.
ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಅಕ್ಷಯ, ಶಶಿಕಲಾ ಮ್ಯಾಗೆರಿ, ಬಸಮ್ಮ ಆಲಮಟ್ಟಿ, ಪಾರ್ವತಿ ಪಠಪತಿ, ಗಂಗು ಉಳಾಗಡ್ಡಿ, ಜಾಮಕ್ಕಾ ಹಟ್ಟಿ, ಸಂಗಿತಾ ಹೊನವಾಡ, ಭಾಗೀರಥಿ ಬಡಿಗೇರ, ಸುಲೋಚನಾ ಬೆಲ್ಲದ, ಚನ್ನಮ್ಮ ಪೆಂಟದ, ಪ್ರೇಮಾ ಇಂಗಳೇಶ್ವರ, ಅಮೀನಾ ಬಾಗೇವಾಡಿ ಪಾಲ್ಗೊಂಡಿದ್ದರು.