Advertisement

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

02:49 PM Jul 12, 2019 | Naveen |

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ನರಗದ ಸಿದ್ಧೇಶ್ವರ ದೇವಸ್ಥಾನದಿಂದ ಮಹಾತ್ಮಾ ಗಾಂಧೀಜಿ ವೃತ್ತ, ಬಸವೇಶ್ವರ ವೃತ್ತ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, 6 ವರ್ಷದೊಳಗಿನ ಮಕ್ಕಳಲ್ಲಿ ಶೇ.40 ದೈಹಿಕ ಬೆಳವಣಿಗೆ ಶೇ.80 ಮಾನಸಿಕ ಬೆಳವಣಿಗೆ ಸಂದರ್ಭದಲ್ಲಿ ಅಪೌಷ್ಟಿಕ ಆಹಾರ ಮತ್ತು ಪ್ರಾಥಮಿಕ ಆರೋಗ್ಯ ಪೂರೈಕೆಗಾಗಿ 1975ರಲ್ಲಿ ಪ್ರಾರಂಭವಾದ ಯೋಜನೆ ಐಸಿಡಿಎಸ್‌. 3 ವರ್ಷದೊಳಗಿನ ಮಗು ತಾಯಿಯ ಆರೈಕೆಯಲ್ಲಿ ಇರಬೇಕಾಗಿದ್ದರಿಂದ ಮಕ್ಕಳ ಮನೆಗೆ ಪೌಷ್ಟಿಕ ಆಹಾರ ಕೊಟ್ಟು ಮಕ್ಕಳಿಗೆ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ಕಲಿಕೆ ನೀಡುವಲ್ಲಿ ಅಂಗನವಾಡಿ ಕೇಂದ್ರಗಳು ಕೆಲಸ ಮಾಡುತ್ತಿವೆ ಎಂದರು.

ಇಂಥ ಮಹತ್ವದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ನೌಕರರಿಗೆ ಹಲವು ಜಿಲ್ಲೆಗಳಲ್ಲಿ 3-4 ತಿಂಗಳ ಗೌರವಧನ ಬಂದಿಲ್ಲ. ಕೋಳಿ ಮೊಟ್ಟೆ, ತರಕಾರಿ ಕೊಳ್ಳಲು 3-4 ಅನುದಾನ ಬಂದಿಲ್ಲ. ಗ್ಯಾಸ್‌ ವಿತರಣೆ ಸೂಕ್ತ ರೀತಿಯಲ್ಲಿಲ್ಲ. ಅಂಗನವಾಡಿ ನೌಕರರು ಖಾಯಿಲೆ ಬಿದ್ದಾಗ ಮತ್ತು ಮರಣ ಹೊಂದಿದಾಗ ಸರ್ಕಾರ ನೀಡುವ ಅನುದಾನದ ಸೂಕ್ತ ರೀತಿಯಲ್ಲಿ ಬರುತ್ತಿಲ್ಲ. ನಿವೃತ್ತಿಯಾದ ನೌಕರರಿಗೆ ಯಾವ ಸೌಲಭ್ಯವಿಲ್ಲ. ಈ ಎಲ್ಲಗಳ ಮಧ್ಯೆಯೂ ಅಂಗನವಾಗಿ ನೌಕರರು ಶ್ರಮಿಕರಾಗಿ ದುಡಿಯುತ್ತಿದ್ದಾರೆ. ಇಷ್ಟಾದರೂ ಅಂಗನವಾಡಿ ನೌಕರರ ಮೇಲೆ ಅನಗತ್ಯ ಶಿಸ್ತು ಕ್ರಮದ ಹೆಸರಿನಲ್ಲಿ ಶೋಷಿಸಲಾಗುತ್ತಿದೆ ಎಂದು ದೂರಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಅಂಗನವಾಡಿ ನೌಕರರ ಬೇಡಿಕೆಗಳ ಕುರಿತು ಹಲವು ಬಾರಿ ಮನವಿ ಪತ್ರಗಳು, ಹೋರಾಟಗಳು, ಜಂಟಿ ಸಭೆಗಳು ನಿರಂತರ ಹೋರಾಟ ನಡೆಸಿದರೂ ಸರ್ಕಾರ ಬೇಡಿಕೆಗಳಿಗೆ ಸೂಕ್ತ ಪರಿಹಾರ ಕಲ್ಪಸಿಲ್ಲ. ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಐಎಲ್ಸಿ ಆಧಾರಿತ ಪೆನ್‌Ïನ್‌ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಎನ್‌ಪಿಎಸ್‌ ಮಾನದಂಡ ಅನುಸರಿಸಬೇಕು. ನಿವೃತ್ತ ಕಾರ್ಯಕರ್ತೆ-ಸಹಾಯಕಿಗೆ ತಕ್ಷಣ ಇಡುಗಂಡು ಬಿಡುಗಡೆ ಆಗಬೇಕು ಎಂದು ಆಗ್ರಹಿಸಿದರು.

Advertisement

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ಬದಲಾವಣೆ ಬಯಸುತ್ತಿರುವ ಸಮಾಜ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣಕ್ಕೆ ಆಸಕ್ತಿ ತೋರುತ್ತಿದೆ. ಆದರೆ ಅಂಗನವಾಡಿ ಕೇಂದ್ರಗಳು ಮಾತ್ರ ಹಳೆಯ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಬದಲಾದ ಸಮಾಜ ರೀತಿಯಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಬೇಕು. ಆದ್ದರಿಂದ ಅಂಗನವಾಡಿ ಕೇಂದ್ರ ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯದ ಉಪಾಧ್ಯಕ್ಷ ಭಾರತಿ ವಾಲಿ, ಜಿಲ್ಲಾ ಗೌರವಾಧ್ಯಕ್ಷೆ ಸರಸ್ವತಿ ಮಠ ಮಾತನಾಡಿದರು. ಚಡಚಣ ತಾಲೂಕಿನ ಅಧ್ಯಕ್ಷೆ ಅಶ್ವಿ‌ನಿ ತಳವಾರ ಜಿಲ್ಲಾಡಳಿತಕ್ಕೆ ಬೇಡಿಕೆಗಳ ಮನವಿ ಸಲ್ಲಿಸಿದರು. ಜಿಲ್ಲೆಯ ವಿವಿಧ ಘಟಕಗಳ ಆರತಿ ಜಾನಕರ, ಸರೋಜಿನಿ ಸಿಂಪಿಗೇರ, ರುಕ್ಮೀಣಿ ಮಾನಕರ, ಸರಸ್ವತಿ ಚೌಕಿಮಠ, ಸುವರ್ಣ ಹಲಗಣಿ, ಸಿಂದಗಿ ವೈ.ವಿ. ಸರಾಫ, ದಾನಮ್ಮ ಗುಗ್ಗರೆ, ಪ್ರತಿಭಾ ಬುರಡೆ, ಶೋಭಾ ಕಬಾಡೆ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next