Advertisement

ನಗುವಿನಿಂದ ಜಿಗುಪ್ಸೆ ದೂರ

03:21 PM Apr 14, 2019 | |

ವಿಜಯಪುರ: ತಾನು ನಕ್ಕು, ಅನ್ಯರನ್ನು ನಗಿಸುವ ಗುಣ ಇರುವ ವ್ಯಕ್ತಿಗೆ ತನ್ನ ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳು, ಬದುಕಿನಲ್ಲಿ ಜಿಗುಪ್ಸೆ ಇದ್ದರೂ ದೂರವಾಗಿ ನೆಮ್ಮದಿ ಜೀವನ ಸಾಧ್ಯ. ಆದರೆ ಪ್ರಸಕ್ತ ಶಿಕ್ಷಣ ಪ್ರತಿಭಾಂವತರನ್ನು ರೂಪಿಸಿದರೂ ಹೃದಯವಂತರು ವಿರಳವಾಗಿರುತ್ತಾರೆ ಎಂದು ಖ್ಯಾತ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅಭಿಪ್ರಾಯಪಟ್ಟರು.

Advertisement

ನಗರದ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ-ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಮೊಬೈಲ್‌ ಬಳಸುವುದರಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ಮರೀಚಿಕೆಯಾಗುತ್ತವೆ. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಕುಂದುತ್ತಿದೆ. ಕಷ್ಟಗಳು ಕಡಲ ತೀರದ ತೆರೆಗಳಂತೆ ಅಪ್ಪಳಿಸಿದರೂ ಬಂಡೆಗಲ್ಲಿನಂತೆ ತೆರೆಗಳನ್ನು ಸ್ವೀಕರಿಸುವ ಎದೆಗಾರಿಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳೆಯರು ಅದರಲ್ಲೂ ವಿದ್ಯಾರ್ಥಿನಿಯರು ಜೀವನದಲ್ಲಿ ಬರುವ ಯಾವುದೇ ರೀತಿಯ ಸಂಕಷ್ಟಗಳಿಗೆ ಅಂಜದೇ
ಸಮರ್ಥವಾಗಿ ಎದುರಿಸುವಲ್ಲಿ ಮುಂದಾಗಬೇಕು. ಪುರುಷ ಪ್ರಧಾನ
ಸಮಾಜದಲ್ಲಿ ಒಳ್ಳೆ ಸ್ಥಾನ ಮಾನಗಳು ದೊರೆಯಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ| ಆರ್‌.ಎಂ. ಮಿರ್ಧೆ ಮಾತನಾಡಿ, 21ನೇ ಶತಮಾನದಲ್ಲಿ ಒತ್ತಡದ ಜೀವನ ಸೃಷ್ಟಿಸಿದ್ದು,
ಇಂಥ ಒತ್ತಡಗಳನ್ನೆಲ್ಲ ಮೀರಿ ವಿದ್ಯಾರ್ಥಿನಿಯರು ಛಲದಿಂದ ಮುನ್ನೆಡೆಯಬೇಕು. ಜೀವನದಲ್ಲಿ ಕಷ್ಟ ಮತ್ತು ಸುಖ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಕಷ್ಟ ಬಂದಾಗ ಕುಗ್ಗದೆ ಸುಖ
ಬಂದಾಗ ಹಿಗ್ಗದೆ ಜೀವನದಲ್ಲಿ ಸಮಾನವಾಗಿ ಸ್ವೀಕರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಸವಿತಾ ಅಣ್ಣೆಪ್ಪನವರ ಇದ್ದರು.

ವಿದ್ಯಾರ್ಥಿನಿ ಆಶಾ ಬಿರಾದಾರ ಪ್ರಾರ್ಥಿಸಿದರು. ಪಿ.ಎಚ್‌. ಹೂಗಾರ ಸ್ವಾಗತಿಸಿದರು. ಡಾ| ಪಿ.ಎಂ. ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಬಿ.ಬಿ. ಹಚಡದ ವಾರ್ಷಿಕ ವರದಿ ವಾಚಿಸಿದರು. ರೂಪಾ ಮೋಟಗಿ. ಡಾ| ಆರ್‌.ಜಿ. ಕಮತರ, ವಿ.ಎಸ್‌. ಮೆಳ್ಳಿಗೇರಿ ನಿರೂಪಿಸಿದರು. ವಿದ್ಯಾರ್ಥಿನಿಯರ ಪ್ರತಿನಿಧಿ  ಕವಿತಾ ಬೀರಕಬ್ಬಿ
ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next