Advertisement

ವಿಜಯಪುರ: ಲಾಕ್ ಡೌನ್ ಉಲ್ಲಂಘಿಸಿದ್ರೆ ಹಣೆ ಮೇಲೆ ಪೊಲೀಸ್ ಸೀಲ್!

09:11 AM Mar 30, 2020 | Hari Prasad |

ವಿಜಯಪುರ : ಕೊವಿಡ್ 19 ಹಬ್ಬುವಿಕೆಯನ್ನು ತಡೆಯಲು ಕೇಂದ್ರ ಸರಕಾರವು 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿದೆ. ಈ ಆದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗೆ ಬರುವವರನ್ನು ನಿಯಂತ್ರಿಸಲು ವಿಜಯಪುರ ಜಿಲ್ಲೆಯ ಪೊಲೀಸರು ಲಾಠಿ ಬೀಸಿದರೂ ಪರಿಣಾಮ ಶೂನ್ಯವಾಗಿದೆ. ಇದೀಗ ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ನಿಯಮ ಉಲ್ಲಂಘಿಸಿ ಸುಖಾಸುಮ್ಮನೆ ರಸ್ತೆಗಿಳಿಯುವವರ ಹಣೆಗೆ ‘ಸೀಲ್’ ಹೊಡೆಯುವುದು.

Advertisement

ಲಾಕ್ ಡೌನ್ ಬಳಿಕ ಮನೆಯಲ್ಲೇ ಇರಿ ಎಂದರೂ ಈ ನಿರ್ಬಂಧವನ್ನು ಉಲ್ಲಂಘಿಸಿ ರಸ್ತೆಗೆ ಇಳಿದವರಿಗೆ ಪೊಲೀಸರು ಲಾಠಿ ಬಿಸಿ ತೋರಿಸಿದ್ದರು. ಭಾನುವಾರದಿಂದ ನಗರದಲ್ಲಿ ಅನಗತ್ಯವಾಗಿ ರಸ್ತೆಗೆ ಇಳಿದ ಯುವಕರಿಗೆ ಪೊಲೀಸರು ಈ ಹೊಸ ಪ್ರಯೋಗ ಮಾಡಿದ್ದಾರೆ. ‘ನಾನು ಸಮಾಜ ವಿರೋಧಿ, ಲಾಕ್‍ಡೌನ್ ಉಲ್ಲಂಘಿಸಿದ್ದೇನೆ, ನನ್ನನ್ನು ಕ್ಷಮಿಸಿ’ ಎಂಬ ಬರಹ ಇರುವ ಸ್ಟ್ಯಾಂಪಿಂಗ್‍ನ ಸೀಲನ್ನು ಹಣೆಗೆ ಹಾಕುತ್ತಿದ್ದಾರೆ.

ಇದರಿಂದ ಸಮಾಜದಲ್ಲಿ ಮುಜುಗುರ ಅನುಭವಿಸಲು ಆಗದೇ ಭವಿಷ್ಯದಲ್ಲಿ ಲಾಕ್ ಡೌನ್ ಮುಗಿಯುವವರೆಗೆ ಬೀದಿಗೆ ಬರದಂತೆ ತಡೆಯುವ ಹೊಸ ಮಾರ್ಗದ ಮೊರೆ ಹೋಗಿದ್ದಾರೆ. ಆದರೆ ಲಾಠಿ ಪೆಟ್ಟಿಗಿಂತ ಮರ್ಯಾದೆ ಪೆಟ್ಟಿಗೆ ಯುವಕರು ಅಂಜುವರೇ ಎಂಬುದು ಮುಂಬರುವ ದಿನಗಳಲ್ಲಿ ಸಾಬೀತುಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next