Advertisement

ವಿಜಯಪುರ; ‘ಮಂಗಳವಾರದ ಮಹಿಮೆ’ ಎನ್ನುತ್ತಿರುವ ಸಂಸದ ಜಿಗಜಿಣಗಿ

06:38 PM May 27, 2024 | Vishnudas Patil |

ವಿಜಯಪುರ : ವಿಜಯಪುರ ಲೋಕಸಭೆ ಕೇತ್ರದ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತಮ್ಮ ಪಾಲಿಗೆ ಮಂಗಳವಾರ ಮಹಿಮೆ ನಡೆಯಲಿದೆ ಎಂದು ವಿಶ್ವಾಸದಲ್ಲಿದ್ದಾರೆ.

Advertisement

ತಮ್ಮ ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ತಮ್ಮ ರಾಜಕೀಯ ಜೀವನದ ಮಂಗಳವಾರದ ಮಹಿಮೆ ಕುರಿತು ಬರೆದಿರುವ ರಮೇಶ ಜಿಗಜಿಣಗಿ, ಮಂಗವಾರ ಆಸ್ಪತ್ರೆಯಿಂದ ಹೊರ ಬಂದೆ, ಮಂಗಳವಾರ ನಾಮೀನೇಶನ್ ಮಾಡಿದೆ, ಮಂಗಳವಾರ ಮತದಾನ ಆಯ್ತು, ಮಂಗಳವಾರನೇ ಕೌಂಟಿಂಗ್, ಎಲ್ಲವೂ ಮಂಗಳಮಯ ಎನ್ನುವ ಮೂಲಕ ರಾಜಕೀಯ ಜೀವನದಲ್ಲಿ ಮಂಗಳವಾರ ತಮ್ಮ ಪಾಲಿಗೆ ಶುಭದಾಯಕವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

6 ಬರಿ ಬಾರಿ ಸಂಸತ್ ಪ್ರವೇಶಿಸಿರುವ ಮಾಜಿ ಕೇಂದ್ರ ಸಚಿವ ಜಿಗಜಿಣಗಿ ಅವರು ಈ ಬಾರಿ ಮೀಸಲು ಕ್ಷೇತ್ರ ವಿಜಯಪುರದಿಂದ ಗೆದ್ದು ಮತ್ತೊಮ್ಮೆ ಸಂಸದನಾಗುವ ಮಹದಾಸೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next