Advertisement

ಕೋವಿಡ್ ಸೋಂಕಿತರ ಸಂಖ್ಯೆ 229ಕ್ಕೆ ಏರಿಕೆ

12:00 PM Jun 15, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ ರವಿವಾರ ಮತ್ತೊಬ್ಬರಿಗೆ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 229ಕ್ಕೆ ಏರಿಕೆಯಾಗಿದೆ. ಇದೆ ವೇಳೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ 10 ರೋಗಿಗಳು ಸೋಂಕುಮುಕ್ತರಾಗಿ ಇದೇ ದಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಕೋವಿಡ್‌ ಆಸ್ಪತ್ರೆಯಲ್ಲಿ ಈಗ ಸೋಂಕಿತ 61 ಜನರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಕುರಿತು ವಿವರ ನೀಡಿರುವ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಈವರೆಗೆ 229 ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು ಹೊಸದಾಗಿ ಸೋಂಕು ದೃಢಪಟ್ಟ ರೋಗಿಯನ್ನು ಕಂಟೇನ್ಮೆಂಟ್‌ ಪ್ರದೇಶದ ಸಂಪರ್ಕದಲ್ಲಿದ್ದ ಮೂರು ವರ್ಷದ ಬಾಲಕ ಪಿ6826 ಎಂದು ಗುರುತಿಸಲಾಗಿದೆ. ಮತ್ತೊಂದೆಡೆ ಕೋವಿಡ್‌ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಫಲವಾಗಿ ರವಿವಾರ 10 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.

30 ವರ್ಷದ ಪಿ2714, 22 ವರ್ಷದ ಪಿ3179, 25 ವರ್ಷದ ಮಹಿಳೆ ಪಿ3180, 17 ವರ್ಷದ ಯುವಕ ಪಿ3173, 15 ವರ್ಷದ ಬಾಲಕ ಪಿ3013, 55 ವರ್ಷದ ಮಹಿಳೆ ಪಿ3975, 39 ವರ್ಷದ ವ್ಯಕ್ತಿ ಪಿ3996, 56 ವರ್ಷದ ವ್ಯಕ್ತಿ ಪಿ4822, 33 ವರ್ಷದ ಮಹಿಳೆ ಪಿ4832, 38 ವರ್ಷದ ವ್ಯಕ್ತಿ ಪಿ5012 ಇವರು ಕೋವಿಡ್‌ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಜಿಲ್ಲಾಸ್ಪತೆಯಿಂದ ಬಿಡುಗಡೆ ಆಗಿದ್ದಾರೆ ಎಂದು ವಿವರಿಸಿದ್ದಾರೆ.

ಈ ವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 29,656 ಜನರು ಜಿಲ್ಲೆಗೆ ಆಗಮಿಸಿದ್ದು, ಎಲ್ಲರ ಮೇಲೂ ನಿಗಾ ಇರಿಸಲಾಗಿದೆ. 8,914 ಜನರು 28 ದಿನಗಳ ಅವಧಿ  ಮುಗಿಸಿದ್ದು 20,574 ಜನರು 28 ದಿನಗಳ ರಿಪೋರ್ಟಿಂಗ್‌ ಅವಧಿ ಯ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 26,905 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದು ಇದರಲ್ಲಿ 229 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 26,398 ಜನರ ವರದಿ ನೆಗೆಟಿವ್‌ ಬಂದಿದೆ.

278 ಜನರ ವರದಿ ನಿರೀಕ್ಷಿಸಲಾಗಿದೆ. ಸೋಂಕಿತರಿಗೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಈವರೆಗೆ ಸೋಂಕುಮುಕ್ತರಾಗಿ 162 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 61 ಜನರಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next