Advertisement

ಗಮನ ಸೆಳೆದ ವಿಶಿಷ್ಟ ವಿನ್ಯಾಸದ ಬಸ್‌ ಶೆಲ್ಟರ್‌

02:52 PM Oct 17, 2021 | Adarsha |

ವಿಜಯಪುರ: ನಗರದಲ್ಲಿ ಇದೀಗ ಲೇಸರ್‌ಕಟಿಂಗ್‌ ವಿನ್ಯಾಸ ರೂಪಿಸಿರುವ ವಿಭಿನ್ನ ಚಿತ್ತಾರದಬಸ್‌ ಶೆಲ್ಟರ್‌ ನಗರದ ಜನರ ಆಕರ್ಷಣೆಯ ಕೇಂದ್ರವಾಗಿದೆ. ನಗರದ ಅಥಣಿ ರಸ್ತೆಯಲ್ಲಿನ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದ ಎದುರಿಗೆ ರಸ್ತೆಬದಿಯಲ್ಲಿ ನಗರ ಸಾರಿಗೆ ಬಸ್‌ ಪ್ರಯಾಣಿಕರ ಅನುಕೂಲಕ್ಕಾಗಿ ಇದನ್ನು ನಿರ್ಮಿಸಲಾಗಿದೆ.

Advertisement

ವಿದೇಶಿ ಉನ್ನತ ತಂತ್ರಜ್ಞಾನದ ಮಾದರಿಯಲ್ಲಿರೂಪುಗೊಂಡಿರುವ ಈ ಶೆಲ್ಟರ್‌ ವಿನ್ಯಾಸ ಹಾಗೂಕಚ್ಚಾ ಸಾಮಗ್ರಿ ಬಳಕೆ ಎಲ್ಲವೂ ಸ್ಥಳೀಯವೇಎಂಬುದು ಗಮನೀಯ.ವಿಶ್ವವಿಖ್ಯಾತ ಐತಿಹಾಸಿಕ ಪ್ರವಾಸಿತಾಣವಾಗಿರುವ ವಿಜಯಪುರ ನಗರಕ್ಕೆ ಬರುವ ಪ್ರವಾಸಿಗರಿಗೆ ಅದರಲ್ಲೂ ಇಬ್ರಾಹಿಂ ರೋಜಾವೀಕ್ಷಣೆಗೆ ಬರುವ ಪ್ರವಾಸಿಗರನ್ನು ಈ ವಿಶಿಷ್ಟ ವಿನ್ಯಾಸದ ಬಸ್‌ ಶೆಲ್ಟರ್‌ ಸೆಳೆಯುವಂತೆ ಮಾಡುತ್ತಿದೆ.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿರುವ ಈ ಶೆಲ್ಟರ್‌ನವಿಶಿಷ್ಟ ವಿನ್ಯಾಸ ರೂಪಿಸಿದವರು ವೂಡಾನಿರ್ದೇಶಕರಲ್ಲಿ ಒಬ್ಬರಾದ ಅಪ್ಪು ಜಿರಳೆ ಎಂಬ ವಿನ್ಯಾಸಕರು. ಸಂಪೂರ್ಣಸ್ಟೀಲ್‌ನಿಂದ ಈ ಶೆಲ್ಟರ್‌ನಿರ್ಮಿಸಿದ್ದು, ಲೇಸರ್‌ ಕಟಿಂಗ್‌ಮೂಲಕ ಸ್ಟೀಲ್‌ನ μನಿಸಿಂಗ್‌  ಆಕರ್ಷಕಗೊಳಿಸಲಾಗಿದೆ. 6ಮೀಟರ್‌ ಉದ್ದ ಹಾಗೂ 2 ಮೀಟರ್‌ಅಗಲದ ಸೆಲ್ಟರ್‌ ನಿರ್ಮಾಣಕ್ಕೆ 7 ಲಕ್ಷರೂ. ವೆಚ್ಚವಾಗಿದೆ.

ಕೇವಲ 15 ದಿನಗಳಲ್ಲಿ ಈ ಶೆಲ್ಟರ್‌ ಯೋಜನೆ ನಿರ್ಮಾಣ ಕಾರ್ಯಮುಗಿಸಲಾಗಿದೆ.ರಾತ್ರಿ ವೇಳೆ ಪ್ರಯಾಣಿಕರ ಸುರಕ್ಷತೆಗಾಗಿ ವಿದ್ಯುತ್‌ ಬೆಳಕಿನ ವ್ಯವಸ್ಥೆ ಕಲ್ಪಿಸಿದೆ. ಜನರಿಂದಸಿಗುವ ಸ್ಪಂದನೆ ಆಧರಿಸಿ, ಭವಿಷ್ಯದಲ್ಲಿ ಸೋಲಾರ್‌ ವಿದ್ಯುತ್‌ ಅಳವಡಿಕೆಗೆ ಚಿಂತನೆ ನಡೆದಿದೆ ಎನ್ನುತ್ತಾರೆ ವೂಡಾ ಆಯುಕ್ತರಾದವಿಜಯ ಅಜೂರೆ ಹಾಗೂ ಜಗದೀಶಅಜೂರೆ.

ನಗರ ಶಾಸಕ ಬಸನಗೌಡಪಾಟೀಲ ಯತ್ನಾಳ ಅವರವಿಶೇಷ ಕಾಳಜಿಯಿಂದ ಇದೀಗವಿಜಯಪುರ ನಗರದಲ್ಲಿ ವಿಶಿಷ್ಟವಿನ್ಯಾಸದ ಮಾದರಿ ಬಸ್‌ ಶೆಲ್ಟರ್‌ನಿರ್ಮಾಣವಾಗಿದೆ. ವಿಜಯಪುರನಗರದಲ್ಲಿ ಇನ್ನೂ 25 ಕಡೆಗಳಲ್ಲಿಇಂಥ ಬಸ್‌ ಶೆಲ್ಟರ್‌ ನಿರ್ಮಿಸುವ ಗುರಿಹಾಕಿಕೊಂಡಿದ್ದೇವೆ. ಭವಿಷ್ಯದಲ್ಲಿ ವಿಜಯಪುರನಗರ ಮಾದರಿ ಅಭಿವೃದ್ಧಿ ಕಾಣಲಿದೆ ಎಂದುವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಸಂತಸಹಂಚಿಕೊಳ್ಳುತ್ತಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next