Advertisement

Vijayapura: ಮುನಿರತ್ನ ಚನ್ನಾರೆಡ್ಡಿ ಪ್ರಕರಣಕ್ಕೆ ತಳುಕು ಬೇಡ: ಎಂ.ಬಿ.ಪಾಟೀಲ

07:49 PM Sep 15, 2024 | Poornashri K |

ವಿಜಯಪುರ:ಬಿಜೆಪಿ ಶಾಸಕ ಮುನಿರತ್ನ ಪ್ರಕರಣ ಮತ್ತು ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ ಪ್ರಕರಣದಲ್ಲಿ ಒಂದಕ್ಕೊಂದು ತಳುಕು ಹಾಕುವುದು ಬೇಡ. ಮುನಿರತ್ನ ಪ್ರಕರಣದಲ್ಲಿ ಸಾಕ್ಷéಗಳಿವೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುನಿರತ್ನ ವಿರುದ್ಧ ಹಣಕ್ಕೆ ಒತ್ತಾಯ, ಅತ್ಯಂತ ಹೀನ, ಅಸಭ್ಯ ಮತ್ತು ಅಶ್ಲೀಲವಾಗಿ ಮಾತನಾಡಿರುವ ಆರೋಪವು ಆಡಿಯೋದಿಂದ ಬೆಳಕಿಗೆ ಬಂದಿದೆ. ಆಂಧ್ರಕ್ಕೆ ಪರಾರಿಯಾಗುವ ಸಂದರ್ಭದಲ್ಲಿ ಅವರನ್ನು ಪೊಲೀಸರು ಬಂ ಧಿಸಿದ್ದಾರೆ.

ಅಲ್ಲದೇ, ಮುನಿರತ್ನ ಜಾತಿ ನಿಂದನೆ ಮಾಡಿ ಮಹಿಳೆಯರ ಕುರಿತಾಗಿ ಮಾತಾಡಿದ್ದು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಒಬ್ಬ ಜನಪ್ರತಿನಿಧಿ ಯಾಗಿ ಇಂತಹ ವರ್ತನೆ ಸರಿಯಲ್ಲ. ಅವರು ಕ್ಷಮೆಗೆ ಅರ್ಹರಲ್ಲ. ಈ ಬಗ್ಗೆ ತನಿಖೆಯಾಗಿ ಸತ್ಯಾಸತ್ಯತೆ ತಿಳಿದುಕೊಳ್ಳಲಾಗುತ್ತದೆ.

ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪಿಎಸೈ ಪರಶುರಾಮ ಸಾವಿನ ಪ್ರಕರಣದಲ್ಲಿ ಯಾದಗಿರಿ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ ಪಾತ್ರವಿಲ್ಲ. ಮುನಿರತ್ನ ವಿಷಯದಲ್ಲಿ ಸಾಕ್ಷಿ ಸಮೇತವಾಗಿ ಸಿಕ್ಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next