Advertisement

ವಿಜಯಪುರಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

06:26 PM Sep 16, 2019 | Naveen |

ವಿಜಯಪುರ: ಕರ್ನಾಟಕ ಅಮೇಚ್ಯೂರ ಸೈಕ್ಲಿಂಗ್‌ ಅಸೋಸಿಯೇಷನ್‌ ಸಹಯೋಗದಲ್ಲಿ ನಗರದಲ್ಲಿ ನಡೆದ ರಾಜ್ಯಮಟ್ಟದ 15ನೇ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಸೈಕ್ಲಿಂಗ್‌ ತವರು ವಿಜಯಪುರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇತ್ತ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆ ರನ್ನರಪ್‌ ಪ್ರಶಸ್ತಿಗೆ ತೃಪ್ತಿ ಪಟ್ಟಿದೆ.

Advertisement

ಆತಿಥೇಯ ವಿಜಯಪುರ ಕ್ರೀಡಾ ನಿಲಯ ಸೈಕ್ಲಿಂಗ್‌ ಸ್ಪರ್ಧಿಗಳು ಬಹುತೇಕ ಎಲ್ಲ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ 91 ಅಂಕ ಸಂಪಾದಿಸಿ ಬಸವನಾಡಿಗೆ ವೀರಾಗ್ರಣಿ ಪಟ್ಟ ತಂದುಕೊಟ್ಟಿದ್ದಾರೆ. 36 ಅಂಕ ಗಳಿಸುವಲ್ಲಿ ಯಶಸ್ವಿಯಾದ ಮೈಸೂರು ಸೈಕ್ಲಿಸ್ಟ್‌ಗಳು ತಮ್ಮ ಜಿಲ್ಲೆಗೆ ದ್ವಿತೀಯ ಸ್ಥಾನಕ್ಕೆ ತಂದು ಕೊಟ್ಟಿದ್ದಾರೆ.

ಸ್ಪರ್ಧೆಯ ಎರಡನೇ ದಿನವಾದ ರವಿವಾರ ಜರುಗಿದ ಸ್ಪರ್ಧೆಯಲ್ಲಿ 16 ವರ್ಷದೂಳಗಿನ ಬಾಲಕಿಯರ 1 ಲ್ಯಾಪ್‌ ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ವಿಜಯಪುರ ಕ್ರೀಡಾ ವಸತಿ ನಿಲಯದ ಪಾಯಲ್ ಚವ್ಹಾಣ 12.22:01 ನಿಮಿಷದಲ್ಲಿ ಗುರಿ ತಲುಪುವ ಮೂಲಕ ಪ್ರಥಮ ಸ್ಥಾನ ತಮ್ಮದಾಸಿಕೊಂಡರೆ, ಬಾಗಲಕೋಟೆ ಜಿಲ್ಲೆಯ ಭಾವನಾ ಪಾಟೀಲ 12.38:00 ನಿಮಿಷದಲ್ಲಿ ನಿಗದಿತ ಗುರಿ ತಲುಪುವ ಮೂಲಕ ದ್ವಿತೀಯ ಸ್ಥಾನ ಹಾಗೂ ಮೈಸೂರು ಜಿಲ್ಲೆಯ ಕೇರನ್‌ ಮಾರ್ಷಲ್ 12.50:23 ನಿಮಿಷದಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ತಮ್ಮದಾಸಿಕೊಂಡರು. 18 ವರ್ಷದೊಳಗಿನ ಬಾಲಕರ 3 ಲ್ಯಾಪ್‌ ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಎಡೋನಿಸ್‌ ಟಂಗಪು 31.22:72 ನಿಮಿಷದಲ್ಲಿ ಗುರಿ ತಲುಪುವ ಮೂಲಕ ಮೊದಲ ಸ್ಥಾನ ಗಿಟ್ಟಿಸಿದರೆ, 32.45:90 ನಿಮಿಷದಲ್ಲಿ ಗುರಿ ತುಲುಪಿದ ವಿಜಯಪುರ ಕ್ರೀಡಾ ವಸತಿ ನಿಲಯದ ಅನಿಲ ಕಾಳಪ್ಪಗೋಳ ಎರಡನೇ ಸ್ಥಾನವನ್ನು ಹಾಗೂ ಇದೇ ವಸತಿ ನಿಲಯದ ಮಲ್ಲಿಕಾರ್ಜುನ ಯಾದವಾಡ 32.46:60 ನಿಮಿಷಯದಲ್ಲಿ ನಿಗದಿತ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದಿದ್ದಾರೆ.

18 ವರ್ಷದೊಳಗಿನ ಬಾಲಕಿಯರ 2 ಲ್ಯಾಪ್‌ ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ವಿಜಯಪುರ ಕ್ರೀಡಾ ವಸತಿ ನಿಯಲದ ಕಾವೇರಿ ಮುರನಾಳ 25.20:36 ನಿಮಿಷದಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಪಡೆದರೆ, ಇದೇ ವಸತಿ ನಿಲಯದ ದಾನಮ್ಮ ಗುರವ 25.49:63 ನಿಮಿಷದಲ್ಲಿ ನಿಗದಿತ ಗುರಿ ತಲುಪಿ ಎರಡನೇ ಸ್ಥಾನವನ್ನು ಹಾಗೂ 26.12:58 ನಿಮಿಷದಲ್ಲಿ ಗುರಿ ಮುಟ್ಟಿದ ಬಾಗಲಕೋಟೆ ಜಿಲ್ಲೆಯ ಭಾವನಾ ಪಾಟೀಲ ಮೂರನೇ ಸ್ಥಾನ ಪಡೆದರು.

ಪುರುಷರ 4 ಲ್ಯಾಪ್‌ ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಕಮಲರಾಜ್‌ ಎನ್‌. ಪ್ರಥಮ ಸ್ಥಾನ ಪಡೆದರೆ, ಮೈಸೂರು ಜಿಲ್ಲೆಯವರೇ ಆದ ತೇಜಸ್ವಿ ದ್ವಿತೀಯ ಸ್ಥಾನ ಹಾಗೂ ಗದಗ ಜಿಲ್ಲೆಯ ಸಂತೋಷ ವಿಭೂತಿಹಳ್ಳಿ ಮೂರನೇ ಸ್ಥಾನ ಪಡೆದರು.

Advertisement

ಮಹಿಳೆಯರ 2 ಲ್ಯಾಪ್‌ ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ವಿಜಯಪುರ ಕ್ರೀಡಾ ವಸತಿ ನಿಲಯಕ್ಕೆ ಮೊದಲ ಎರಡು ಸ್ಥಾನ ದಕ್ಕಿದ್ದು, ಸೌಮ್ಯ ಅಂತಾಪುರ ಪ್ರಥಮ, ಕಾವೇರಿ ಮುರನಾಳ ದ್ವಿತೀಯ ಸ್ಥಾನ ಪಡೆದರೆ, ಬಾಗಲಕೋಟೆ ಜಿಲ್ಲೆಯ ಸಾವಿತ್ರಿ ಹೆಬ್ಟಾಳಟ್ಟಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next