Advertisement

ವಿಜಯಪುರ ದ್ವಿಸದಸ್ಯತ್ವದ ಕ್ಷೇತ್ರ: ಕಾಂಗ್ರೆಸ್‌ ನ ಸುನಿಲ ಗೌಡ, ಬಿಜೆಪಿಯ ಪೂಜಾರ ಗೆಲುವು

01:02 PM Dec 14, 2021 | keerthan |

ವಿಜಯಪುರ: ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯನ್ನೂ ಹೊಂದಿರುವ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ಪಾಟೀಲ ಹಾಗೂ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ವಿಜಯ ಸಾಧಿಸಿದ್ದು, ಚುನಾವಣಾ ಅಧಿಕಾರಿ ಫಲಿತಾಂಶ ಘೋಷಣೆ ಬಾಕಿ ಇದೆ.

Advertisement

ಇತ್ತ ಫಲಿತಾಂಶ ಘೋಷಣೆಗೆ ಮುನ್ನವೇ ಉಭಯ ಪಕ್ಷಗಳ ವಿಜೇತರ ಕಾರ್ಯಕರ್ತರು ವಿಜಯೋತ್ಸವ ಆರಂಭಿಸಿದ್ದಾರೆ.ಎರಡು ಸ್ಥಾನಗಳ ವಿಜಯಪುರ ಕ್ಷೇತ್ರದಲ್ಲಿ ರಕ್ಷಣಾತ್ಮಕ ಸ್ಪರ್ಧೆಗಾಗಿ ಕಾಂಗ್ರೆಸ್ ಪಕ್ಷ ಹಾಲಿ ಸದಸ್ಯ ಸುನಿಲಗೌಡ ಪಾಟೀಲ ಒಬ್ಬರನ್ನೇ ಕಣಕ್ಕಿಳಿಸಿದೆ.

ಮತ ಎಣಿಕೆಯಲ್ಲಿ ಸುನಿಲಗೌಡ ಪಾಟೀಲ ಪ್ರಥಮ ಪ್ರಾಶಸ್ತ್ಯದ 3332 ಮತಗಳನ್ನು ಪಡೆದು, 1110 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

ಇದನ್ನೂ ಓದಿ:ದ.ಕ ದ್ವಿಸದಸ್ಯ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿ,ಮಂಜುನಾಥ್ ಭಂಡಾರಿಗೆ ಜಯ

ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ಅವರು ಗೆಲುವಿಗೆ ಬೇಕಾದ ಅಗತ್ಯಕ್ಕಿಂತ ಹೆಚ್ಚಿನ ಮತಗಳು ದೊರೆತ ಸುದ್ದಿ ತಿಳಿಯುತ್ತಲೇ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಗುಲಾಲಿ ಹಾಕಿಕೊಂಡು, ಪಟಾಕಿ ಸಿಡಿಸಿ ಸಂಭ್ರಮ ಆಚರಣೆಯಲ್ಲಿ ತೊಡಗಿದರು.

Advertisement

ದ್ವಿಸದಸ್ಯತ್ವದ ಈ ಕ್ಷೇತ್ರದಲ್ಲಿ ಬಿಜೆಪಿ ಕೂಡ ರಕ್ಷಣಾತ್ಮಕ ಸ್ಪರ್ಧೆಗಾಗಿ ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತ್ರ ಕಣಕ್ಕಿಳಿಸಿದ್ದು, ಇನ್ನೊಂದು ಸ್ಥಾನದಲ್ಲಿ ಪೂಜಾರ 2329 ಮತಗಳನ್ನು ಪಡೆದು, ಗೆಲ್ಲಲು ಬೇಕಿದ್ದ ಮತಗಳಿಗಿಂತ 101 ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಐವರು ಪಕ್ಷೇತರರಲ್ಲಿ ಗೆಲ್ಲುವ ವಿಶ್ವಾಸದಲ್ಲಿರುವ ಮಲ್ಲಿಕಾರ್ಜುನ ಲೋಣಿ 1297 ಮತಗಳನ್ನು ಮಾತ್ರ ಪಡೆದಿದ್ದಾರೆ.

ಚಲಾವಣೆಯಾದ 7353 ಮತಗಳಲ್ಲಿ 667 ಮತ ತಿರಸ್ಕೃತಗೊಂಡಿವೆ. ಪುರಸ್ಕೃತ 6686 ಮತಗಳಲ್ಲಿ ವಿಜಯ ಸಾಧಿಸಲು ಇಬ್ಬರು ಅಭರ್ಥಿಗಳಿಗೆ ತಲಾ 2228 ಮತಗಳು ಬೇಕು.

Advertisement

Udayavani is now on Telegram. Click here to join our channel and stay updated with the latest news.

Next