Advertisement

ವಲಸೆ ಕಾರ್ಮಿಕರಿಗೆ ಪಡಿತರ ವಿತರಣೆಗೆ ಮಾನದಂಡ ಕಡ್ದಾಯ

06:07 PM May 21, 2020 | Naveen |

ವಿಜಯಪುರ: ಕೇಂದ್ರ ಸರ್ಕಾರದ ಆತ್ಮ ನಿರ್ಭರ್‌ ಭಾರತ್‌ ಯೋಜನೆಯಡಿ ರಾಜ್ಯದಲ್ಲಿ ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್‌ ತಿಂಗಳುಗಳಿಗೆ ಪಡಿತರ ವಿತರಣೆಗೆ ಮಾನದಂಡ ಪಾಲನೆಗೆ ಸೂಚಿಸಲಾಗಿದೆ. ಮೇ-ಜೂನ ತಿಂಗಳಿಗೆ 5 ಕೆಜಿ ಅಕ್ಕಿ, ಜೂನ್‌ ತಿಂಗಳಿಗೆ ಕಡಲೆ ವಿತರಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ತಿಳಿಸಿದ್ದಾರೆ.

Advertisement

ಆಹಾರಧಾನ್ಯ ಪಡೆಯಲು ಹಲವು ಮಾನದಂಡಗಳ ಪಾಲನೆಗೆ ಸೂಚಿಸಿದ್ದು, ವಲಸಿಗ ಫಲಾನುಭವಿಗಳು ಆಹಾರ ಭದ್ರತಾ ಕಾಯ್ದೆಯಡಿ ಯಾವುದೇ ರಾಜ್ಯದ ಪಡಿತರ ಫಲಾನುಭವಿ ಆಗರಿಬಾರದು. ಪ್ರತಿ ಫಲಾಭವಿ ಆಧಾರ್‌ ಸಂಖ್ಯೆಯ ಮೂಲಕ ಗುರುತಿಸಬೇಕು. ಇದರಿಂದ ಪಡಿತರ ಹಂಚುವಾಗ ಈ ವ್ಯಕ್ತಿ ಪಡಿತರ ಚೀಟಿ ಹೊಂದಿಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳಲಾಗುತ್ತದೆ. ಪ್ರತಿ ಫಲಾನುಭವಿಗೆ ಆಹಾರಧಾನ್ಯ ವಿತರಿಸುವಾಗ ಫಲಾಭವಿಯ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ ಸಂಖ್ಯೆಯನ್ನು ತತ್ರಾಂಶದಲ್ಲಿ ನಮೂದಿಸಿದ ನಂತರವೇ ಆಹಾರಧಾನ್ಯ ವಿತರಿಸಲಾಗುವುದು. ವಿಜಯಪುರ ಜಿಲ್ಲೆಯಲ್ಲಿ ಈ ವರೆಗೆ ಸುಮಾರು 41,759 ಜನ ವಲಸೆ ಕಾರ್ಮಿಕರು ಇದ್ದಾರೆ ಎಂಬ ಮಾಹಿತಿ ಲಭ್ಯವಿದೆ. ಸದರಿ ಕಾರ್ಮಿಕರಿಗೆ ಸುಮಾರು 418 ಮೆಟ್ರಿಕ್‌ ಟನ್‌ ಅಕ್ಕಿಯನ್ನು ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಹಂಚಿಕೆಯಾದ ಆಹಾರಧಾನ್ಯ ವಿಜಯಪುರ ನಗರದ, ತಾಲೂಕು ಕೇಂದ್ರ-ಗ್ರಾಮಗಳ ನಿಗದಿತ ನ್ಯಾಯಬೆಲೆ ಅಂಗಡಿ ಮೂಲಕ ಮೇ 26 ರಿಂದ 31ರ ವರೆಗೆ ಹಾಗೂ ಜೂನ್‌ ತಿಂಗಳಿಗಾಗಿ ಜೂನ್‌ 1 ರಿಂದ 10ರ ವರೆಗೆ ಪಡಿತರ ವಿತರಣೆ ನಡೆಯಲಿದೆ. ಮೇ ತಿಂಗಳಿನಲ್ಲಿ ಆಹಾರಧಾನ್ಯ ಪಡೆಯದ ಫಲಾನುಭವಿಗಳು ಜೂನ್‌ ತಿಂಗಳಿನಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕೇಂದ್ರ ಸರ್ಕಾರದ ಹಂಚಿಕೆಯಂತೆ ಕಡಲೆ ಪಡೆಯಬಹುದು. ವಿತರಣೆ ಸಮಯದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಕೊವಿಡ್‌-19 ಕ್ಕೆ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರದ ಸೂಚನೆಯಂತೆ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್‌ ಬಳಕೆ, ನೀರು ಸೌಲಭ್ಯ ಸೇರಿದಂತೆ ಇತರೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು. ಹಂಚಿಕೆಗೆ ನೀಡಲಾದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳಾಗಲಿ ಫಲಾನುಭವಿಗಳಲ್ಲಿ ದುರುಪಯೋಗ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಲ್ಲಿ ಅಂಥವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ದೂರುಗಳಿದ್ದ ಆಹಾರ ಶಾಖೆ ದೂ. 08352-250419 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ವೈ. ಎಸ್‌.ಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next